Header Ads

test

ಸಾಯಿಬಾಬಾ ಅನುಗ್ರಹ ಪಡೆಯಬೇಕಾದರೆ ಗುರುವಾರ ಈ 6 ಆಹಾರಗಳನ್ನು ಸಮರ್ಪಿಸಬೇಕು..! ಅವು ಏನುಎಂದು ನೋಡಿ!

ಬಯಸಿದ ಕೋರಿಕೆಗಳನ್ನು ನೆರವೇರಿಸಿ, ಕಷ್ಟಗಳಿಂದ ಪಾರು ಮಾಡುವ ಇಷ್ಟದೈವವಾಗಿ ಸಾಯಿಬಾಬಾರನ್ನು ಬಹಳಷ್ಟು ಮಂದಿ ಭಕ್ತರು ನಂಬುತ್ತಾರೆ. ಅದರ ಭಾಗವಾಗಿ ಸಾಕ್ಷಾತ್ ಸಾಯಿನಾಥನ ಕ್ಷೇತ್ರವಾದ ಶಿರಡಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹೋಗಿ ಅವರನ್ನು ದರ್ಶನ ಮಾಡಿಕೊಂಡು ಬರುತ್ತಾರೆ. ಮುಖ್ಯವಾಗಿ ಗುರುವಾರದ ಹೊತ್ತು ಅವರ ದರ್ಶನ ಮಾಡಿದರೆ ಇನ್ನೂ ತುಂಬಾ ಒಳ್ಳೆಯದೆಂದು, ಅಂದುಕೊಂಡಿದ್ದು ಕೂಡಲೆ ನೆರವೇರುತ್ತದೆ ಎಂದು ಭಕ್ತರು ನಂಬುತ್ತಾರೆ. ಇದರ ಜತೆಗೆ ಗುರುವಾರದಂದು ಕೆಳಗೆ ತಿಳಿಸಿದ ರೀತಿಯಲ್ಲಿ ಕೆಲವು ಸೂಚನೆಗಳನ್ನು ಪಾಲಿಸಿದರೆ ಅದರಿಂದ ಸಾಯಿಬಾಬಾ ಅನುಗ್ರಹ ಕೂಡಲೆ ಪಡೆಯಬಹುದು. ಆ ಸೂಚನೆಗಳು ಏನು ಎಂಬುದನ್ನು ಈಗ ತಿಳಿದುಕೊಳ್ಳೋಣ.




ಪಾಲಾಕ್....
ಸಾಯಿಬಾಬಾಗೆ ಪಾಲಾಕ್ ಎಂದರೆ ತುಂಬಾ ಇಷ್ಟ. ಹಾಗಾಗಿ ಗುರುವಾರದಂದು ಅದನ್ನು ಸಾಯಿಬಾಬಾಗೆ ನೈವೇದ್ಯವಾಗಿ ಇಟ್ಟರೆ ಅಂದುಕೊಂಡಿದ್ದು ಕೂಡಲೆ ನೆರವೇರುತ್ತದೆ. ಭಕ್ತರ ಸಮಸ್ಯೆಗಳು ದೂರವಾಗುತ್ತವೆ.

ಹಲ್ವಾ....
ಸಾಯಿಬಾಬಾಗೆ ಪ್ರಿಯವಾದ ಅಡುಗೆಗಳಲ್ಲಿ ಹಲ್ವಾ ಸಹ ಒಂದು. ಕೆಲವು ಭಕ್ತರು ಬಾಬಾಗೆ ಹಲ್ವಾವನ್ನು ನೈವೇದ್ಯವಾಗಿ ಇಡುತ್ತಾರೆ. ಆದರೆ ಅದನ್ನು ಗುರುವಾರದಂದು ಸಮರ್ಪಿಸಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಕಿಚಡಿ.....
ಕಿಚಡಿ ಸಹ ಸಾಯಿಬಾಬಾಗೆ ಇಷ್ಟವಾದ ಅಡುಗೆ. ಭಕ್ತರು ಪ್ರೀತಿಯಿಂದ ಕಿಚಡಿ ಮಾಡಿಟ್ಟರೆ ಬಾಬಾ ಖಚಿತವಾಗಿ ಸ್ವೀಕರಿಸುತ್ತಾನೆ. ಇದರಿಂದ ಅವರು ಅಂದುಕೊಂಡಿದ್ದು ನೆರವೇರುತ್ತದೆ.

ತೆಂಗಿನ ಕಾಯಿ...
ಬಹಳಷ್ಟು ದೇವರಂತೆ ಬಾಬಾಗೂ ತೆಂಗಿನ ಕಾಯಿ ಎಂದರೆ ತುಂಬಾ ಇಷ್ಟ. ಭಕ್ತಿಯಿಂದ ತೆಂಗಿನಕಾಯಿ ಹೊಡೆದರೆ ಸಾಯಿ ಅನುಗ್ರಹ ತಪ್ಪದೆ ಸಿಗುತ್ತದೆ. ಗುರುವಾರದಂದು ಇದನ್ನು ಸಮರ್ಪಿಸಿದರೆ ಒಳ್ಳೆಯ ಫಲಿತಾಂಶ ಇರುತ್ತದೆ.

ಮಿಠಾಯಿಗಳು....
ಸಾಯಿಬಾಬಾಗೆ ಅನೇಕ ಮಂದಿ ಭಕ್ತರು ವಿವಿಧ ರೀತಿಯ ಮಿಠಾಯಿಗಳನ್ನು ಸಹ ಸಮರ್ಪಿಸುತ್ತಾರೆ. ಆದರೆ ಯಾವ ಮಿಠಾಯಿ ನೈವೇದ್ಯವಾಗಿ ಇಟ್ಟರೂ ಗುರುವಾರದಂದು ಅದನ್ನು ಇಟ್ಟರೆ ಅದಕ್ಕೆ ತಕ್ಕ ಫಲಿತಾಂಶ ಇರುತ್ತದೆ.

ಹೂವು, ಹಣ್ಣು....
ಸೂವಾಸನೆಯನ್ನು ಬೀರುವ ಹೂವು, ಸಿಹಿಯಾದ ಹಣ್ಣುಗಳು ಬಾಬಾಗೆ ಇಷ್ಟ. ಅವನ್ನು ಸಮರ್ಪಿಸಿದರೂ ಭಕ್ತರ ಕೋರಿಕೆಗಳು ನೆರವೇರುತ್ತವೆ.

No comments