Header Ads

test

6 ವರ್ಷ ವಯಸ್ಸಿನ ಈ ಬಚ್ಚಾ ತಿಂಗಳಿಗೆ 6 ಕೋಟಿ ಸಂಪಾದಿಸುತ್ತಿದ್ದಾನೆ..! ಹೇಗೆ ಅಂತ ಗೊತ್ತಾದರೆ ಶಾಕ್ಆಗುತ್ತೀರ..!

ಆರು ವರ್ಷ ವಯಸ್ಸಿನ ಈ ಬಾಲಕ ತಿಂಗಳಿಗೆ 6 ಕೋಟಿ ಸಂಪಾದಿಸುತ್ತಿದ್ದಾನೆ ಎಂದರೆ ಅಚ್ಚರಿಯಾಗದೆ ಇರುತ್ತದಾ. ನನಗೂ ಮೊದಲು ಹಾಗೆಯೇ ಅನ್ನಿಸಿತಾದರೂ ಇದು ನಿಜ. "ರಿಯಾನ್" ಎಂದ ಆರು ವರ್ಷದ ಬಾಲಕ ವರ್ಷಕ್ಕೆ 11 ಮಿಲಿಯನ್ ಡಾಲರ್ ಸಂಪಾದಿಸುತ್ತಿದ್ದಾನೆ. ಅಂದರೆ ನಮ್ಮ ಇಂಡಿಯನ್ ಕರೆನ್ಸಿ ಪ್ರಕಾರ ಸುಮಾರು 70 ಕೋಟಿಗಳು. ಅಂದರೆ ತಿಂಗಳಿಗೆ 6 ಕೋಟಿ. ಇದೆಲ್ಲವನ್ನೂ ಪಕ್ಕಕ್ಕಿಟ್ಟರೆ ಇಷ್ಟಕ್ಕೂ ರಿಯಾನ್ 6 ಕೋಟಿ ಹೇಗೆ ಸಂಪಾದಿಸುತ್ತಿದ್ದಾನೆ ಎಂಬುದೇ ಅಲ್ಲವೇ ನಿಮ್ಮ ಪ್ರಶ್ನೆ?


ರಿಯಾನ್‌ದು ಒಂದು ಯೂಟ್ಯೂಬ್ ಚಾನಲ್ ರನ್ ಮಾಡುವ ಕುಟುಂಬ. ಚಿಕ್ಕಂದಿನಿಂದ ಅವರ ತಂದೆತಾಯಿ ಮಾಡುವ ಯೂಟ್ಯೂಬ್ ವಿಡಿಯೋಗಳನ್ನು ನೋಡುತ್ತಾ ಬೆಳೆದ. ಆದರೆ ರಿಯಾನ್ 4 ವರ್ಷಗಳ ವಯಸ್ಸಿನಿಂದ ಒಂದು ಯೂಟ್ಯೂಬ್ ಚಾನಲ್ ಇಡೋಣ ಎಂದುಕೊಂಡ. ರಿಯಾನ್ ಮಾರ್ಚ್ 2015ರಿಂದ ಯೂಟ್ಯೂಬ್ ಚಾನಲ್‍ನಲ್ಲಿ ವಿಡಿಯೋಗಳನ್ನು ಹಾಕಲು ಆರಂಭಿಸಿದ. ತಾನು ಉಪಯೋಗಿಸುವ ಆಟಿಕೆಗಳ ರಿವ್ಯೂ ಮಾಡಲು ಆರಂಭಿಸಿದ. ಜುಲೈ 2015ರವರೆಗೂ ಸಹ ಯೂಟ್ಯೂಬ್ ಚಾನಲ್ ಸ್ಲೋ ಆಗಿ ಸಾಗುತ್ತಿತ್ತು.

ಆದರೆ ಆ ಬಳಿಕ ರಿಯಾನ್ "GIANT EGG Surprise" ಎಂಬ 100 ಆಟಿಕೆಗಳುಳ್ಳ ಬಾಕ್ಸ್ ರಿವ್ಯೂ ಮಾಡಿದ. ಆ ವಿಡಿಯೋ ಚೆನ್ನಾಗಿ ವೈರಲ್ ಆಯಿತು. ಇದು ಸದ್ಯಕ್ಕೆ 800 ಮಿಲಿಯನ್ ವ್ಯೂಸ್ ಸಮೀಪ ಇದೆ.

ಅದರ ಬಳಿಕ ರಿಯಾನ್ ಮಾಡಿದ ಯಾವ ವಿಡಿಯೋಗಾದರೂ ಅದೇ ರೀತಿಯ ಪ್ರತಿಕ್ರಿಯೆ ಲಭ್ಯವಾಯಿತು. ಆ ರೀತಿ ರಿಯಾನ್ ಮಾಡುತ್ತಿರುವ ವೀಡಿಯೋದಿಂದ ಅವರ ಚಾನಲ್ 10 ಮಿಲಿಯನ್ subscribers ರೀಚ್ ಆದ. ಈಗ ಆತನ ಯೂಟ್ಯೂಬ್ ಇನ್‌ಕಮ್ ತಿಂಗಳಿಗೆ 1 ಮಿಲಿಯನ್ ಡಾಲರ್. ಅದರ ಬಳಿಕ ರಿಯಾನ್ ಕಿಡ್ಸ್‌ಗೆ ಸಂಬಂಧಿಸಿದ ಫುಡ್ ಮತ್ತು ಹೆಲ್ತ್ ಪ್ರಾಡಕ್ಟ್ಸ್ ಮೇಲೂ ರಿವ್ಯೂ ನೀಡಲು ಆರಂಭಿಸಿದ.

ಇದೇ ಸಂಗತಿಯನ್ನು "ಫೋರ್ಬ್ಸ್ ಮ್ಯಾಗಜಿ" ಪ್ರಕಟಿಸಿತು. ಯೂಟ್ಯೂಬ್‍ನಿಂದ ಹೆಚ್ಚು ಸಂಪಾದಿಸುತ್ತಿರುವವರಲ್ಲಿ ರಿಯಾನ್ ಹೆಸರು ಸಹ ಫೋರ್ಬ್ಸ್ ಪ್ರಕಟಿಸುವ ಮೂಲಕ ಈ ವಿಷಯ ಬೆಳಕಿಗೆ ಬಂತು.ರಿಯಾನ್‌ನ ಸಕ್ಸಸ್ ಸ್ಟೋರಿ ಹಿಂದೆ ಅವರ ತಂದೆತಾಯಿ ಸಹಕಾರ ಸಾಕಷ್ಟಿದೆ. ಅದರಿಂದ ರಿಯಾನ್ ಈ ದಿನ ಇಷ್ಟು ಎತ್ತರಕ್ಕೆ ಏರುವಂತಾಗಿದೆ.

No comments