Header Ads

test

ಫೋನ್ ಚಾರ್ಜಿಂಗ್ 5% ಇದ್ದಾಗಲೆ "ಚಾಟಿಂಗ್" ಮಾಡಬೇಕು ಅನ್ನಿಸುತ್ತದಂತೆ..! ಇಷ್ಟಕ್ಕೂ ಕಥೆ ಏನು ಎಂದುಗೊತ್ತಾದರೆ ಶಾಕ್ ಆಗ್ತೀರ!

ಕೈಯಲ್ಲಿ ಸ್ಮಾರ್ಟ್‌ಫೋನ್, ಅದರಲ್ಲಿ ಇಂಟರ್ನೆಟ್ ಇದ್ದರೆ ಸಾಕು... ಇಂದಿನ ಜಮಾನಾ ಮೊಬೈಲ್ ಫೋನ್ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಕಾಲಕ್ಷೇಪ ಮಾಡುತ್ತಿದ್ದಾರೆ. ಅಗತ್ಯ ಇರಲಿ ಬಿಡಲಿ ಸುಖಾಸುಮ್ಮನೆ ಹರಟೆ ಹೊಡೆಯುತ್ತಿದ್ದಾರೆ, ಸಂದೇಶಗಳನ್ನು ಕಳುಹಿಸಿಕೊಳ್ಳುತ್ತಿದ್ದಾರೆ. ಫೋಟೋಗಳು, ವಿಡಿಯೋಗಳು, ಮೆಸೇಜ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬೆಳಗ್ಗೆ ನಿದ್ದೆಯಿಂದ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ ಇದೆಲ್ಲಾ ಸರಿ. ಆದರೆ ಫೋನ್‌ಗಳಲ್ಲಿ ಬ್ಯಾಟರಿ ಮುಗಿದುಹೋದರೆ? ಸಾಮಾಜಿಕ ಆಪ್‌ಗಳನ್ನು ಹೇಗೆ ಬಳಸುತ್ತಾರೆ? ಬಳಸು ಸಾಧ್ಯವಿಲ್ಲ ಅಲ್ಲವೇ. ಆದರೂ ಆ ಸಾಮಾಜಿಕ ಆಪ್ ಬಳಸಬಹುದು. ನಿಜವಾಗಿ ಆ ಆಪ್ ಫೋನ್‌ನಲ್ಲಿ ಬ್ಯಾಟರಿ ಕಡಿಮೆ ಇದ್ದಾಗಲೇ ಕೆಲಸ ಮಾಡುತ್ತದೆ. ಹೇಗೆ ಎಂದರೆ... ಫೋನ್‌ನಲ್ಲಿ ಕೇವಲ ಶೇ.5ರಷ್ಟು ಬ್ಯಾಟರಿ ಇದ್ದರೆ ಆ ಮೆಸೇಜಿಂಗ್ ಆಪ್ ಕೆಲಸ ಮಾಡುತ್ತದೆ. ಹಾಗಿದ್ದರೆ ಆ ಆಪ್ ಯಾವುದು..?ಈ ಆಪ್ ಹೆಸರು ಡೈ ವಿತ್ ಮಿ (Die With Me). ಹೆಸರಿಗೆ ತಕ್ಕಂತೆ ಈ ಆಪ್ ಫೋನ್‌ನಲ್ಲಿ ಕೇವಲ ಶೇ.5ರಷ್ಟು ಬ್ಯಾಟರಿ ಇದ್ದಾಗ ಕೆಲಸ ಮಾಡುತ್ತದೆ. ಆ ಸಮಯದಲ್ಲೇ ಈ ಆಪ್ ಓಪನ್ ಆಗುತ್ತದೆ. ಆಗಷ್ಟೇ ಇದನ್ನು ಬಳಸಲು ಸಾಧ್ಯ. ಆದರೆ ಈ ಆಪ್‌ನಲ್ಲಿ ಇರುವ ಇನ್ನೊಂದು ವಿಶೇಷತೆ ಏನೆಂದರೆ.. ನಮ್ಮ ಫ್ರೆಂಡ್ಸ್, ಇತರರ ಜತೆ ಮಾಡುವ ಚಾಟಿಂಗ್ ಜತೆಗೆ ನಮಗೆ ಗೊತ್ತಿಲ್ಲದವರೊಂದಿಗೆ ಸಹ ಚಾಟಿಂಗ್ ಮಾಡಬಹುದು. ಅದಕ್ಕೆ ವಿಶೇಷ ಚಾಟ್ ರೂಮ್ಸ್ ಇರುತ್ತವೆ. ಒಂದು ಕಾಲದಲ್ಲಿ ಯಾಹೂ ಮೆಸೆಂಜರ್‌ನಲ್ಲಿ ಚಾಟ್ ರೂಮ್ಸ್ ಇದ್ದವಲ್ಲವೆ. ಅದೇ ರೀತಿ ಇದರಲ್ಲೂ ಅವಕಾಶ ಕಲ್ಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಫೋನ್‌ನಲ್ಲಿ ಕೇವಲ ಶೇ.5ರಷ್ಟು ಪವರ್ ಮಾತ್ರ ಇದ್ದಾಗ ಈ ಆಪ್ ಓಪನ್ ಮಾಡಿ ಅದರಲ್ಲಿ ಚಾಟಿಂಗ್ ಮಾಡಬಹುದು. ಆ ರೀತಿ ಫೋನ್ ಬ್ಯಾಟರಿ ಸಂಪೂರ್ಣ ಡೆಡ್ ಆಗುವವರೆಗೂ ಈ ಆಪ್ ಬಳಸಬಹುದು.

ಈ ಡೈ ವಿತ್ ಮಿ ಆಪ್ ಆಂಡ್ರಾಯ್ಡ್, ಐಓಎಸ್ ಪ್ಲಾಟ್‌ಫಾಂಗಳಲ್ಲಿ ಲಭ್ಯ. ಇದನ್ನು ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ, ಐಓಎಸ್ ಬಳಕೆದಾರರು ಆಪ್ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಬಹಳಷ್ಟು ಮಂದಿಗೆ ಫೋನನ್ನು ಬಳಸುವಾಗ ಬ್ಯಾಟರಿ ಮುಗಿಯುತ್ತದೆ ಎಂಬ ಭಯ ಇರುತ್ತದೆ, ಆದರೆ ಅದಕ್ಕೆ ಭಿನ್ನವಾಗಿ ಬ್ಯಾಟರಿ ಮುಗಿಯುವ ಸಮಯಲ್ಲೇ ಆಪ್ ಬಳಸಿದರೆ ಹೇಗಿರುತ್ತದೆಂಬ ಕಾನ್ಸೆಪ್ಟ್‌ನಿಂದ ಈ ಆಪ್ ಡೆವಲಪ್ ಮಾಡಿದ್ದಾಗಿ ಡೆವಲಪರ್ಸ್ ಹೇಳಿದ್ದಾರೆ. ಒಟ್ಟಾರೆ ಈ ಆಪ್ ಬಹಳ ವಿಚಿತ್ರವಾಗಿದೆ ಅಲ್ಲವೇ..!

No comments