Header Ads

test

ಫೆಬ್ರವರಿ 4ರಂದು ಸೋಮವತಿ ಅಮಾವಾಸ್ಯೆ... ಅರಳಿ ಮರಕ್ಕೆ 108 ಪ್ರದಕ್ಷಿಣೆ ಹಾಕಿದರೆ.

ಸೋಮವತಿ ಅಮಾವಾಸ್ಯೆ ದಿನ ಶಿವಾಲಯದ ಬಳಿ ಇರುವ ಅರಳಿ ಮರದ ಸುತ್ತ 108 ಸಲ ಪ್ರದಕ್ಷಿಣೆ ಹಾಕಿದರೆ ಜಾತಕ ದೋಷಗಳು ಬರಲ್ಲ ಎಂದು ಆಧ್ಯಾತ್ಮಿಕ ನಿಪುಣರು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೆ ಪಿತೃದೇವತೆಗಳಿಗೆ ಈ ದಿನ ಪಿಂಡ ಪ್ರದಾನ ಮಾಡಿದರೆ ಸಂತೃಪ್ತಿ ಹೊಂದುತ್ತಾರಂತೆ. ಆ ಮೂಲಕ ನಮಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ. ಈ ದಿನ ವಿವಾಹಿತರು, ಅವಿವಾಹಿತರು ಅರಳಿ ಮರವನ್ನು 108 ಸಲ ಪ್ರದಕ್ಷಿಣೆ ಹಾಕುವ ಮೂಲಕ ಬೇಡಿಕೊಂಡಿದ್ದು ನೆರವೇರುತ್ತವೆ ಎಂದು ಪಂಡಿತರು ಹೇಳುತ್ತಿದ್ದಾರೆ.




ಸೋಮವಾರದ ದಿನ ಬರುವ ಅಮಾವಾಸ್ಯೆಗೆ ತುಂಬಾ ಪ್ರಾಮುಖ್ಯತೆ ಇದೆ. ಆ ದಿನವನ್ನು ಸೋಮಾವತಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಸೋಮಾವತಿ ಅಮಾವಾಸ್ಯೆ ದಿನ ಉಪವಾಸ ಮಾಡಿ ಅರಳಿ ಮರಕ್ಕೆ 108 ಸಲ ಪ್ರದಕ್ಷಿಣೆ ಮಾಡಿದರೆ ಜಾತಕದಲ್ಲಿ ಇರುವ ಸಕಲ ದೋಷಗಳು ನಿವಾರಣೆಯಾಗುತ್ತವೆ ಎಂಬ ವಿಶ್ವಾಸ. ಸೋಮಾವತಿ ಅಮಾವಾಸ್ಯೆ ದಿನ ಶಿವಾರಾಧನೆ ಮಾಡಿ.. ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕಿ.. ಸೋಮವತಿ ಕಥೆಯನ್ನು ಒಮ್ಮೆ ನೆನಪು ಮಾಡಿಕೊಂಡು.. ಉಪವಾಸ ದೀಕ್ಷೆಯನ್ನು ತೆಗೆದುಕೊಂಡರೆ ಜಾತಕ ದೋಷಗಳು ನಿವಾರಣೆಯಾಗುತ್ತವೆ. ಈ ಅಮಾವಾಸ್ಯೆ ಫೆಬ್ರವರಿ ನಾಲ್ಕನೇ ದಿನ (2019) ಬರಲಿದೆ.

ಈ ಅಮಾವಾಸ್ಯೆಯನ್ನು ಮೌನಿ ಅಮಾವಾಸ್ಯೆ, ಶನಿ ಅಮಾವಾಸ್ಯೆ ಎಂದೂ ಕೂಡ ಕರೆಯುತ್ತಾರೆ. ಸೋಮಾವತಿ ಅಮಾವಾಸ್ಯೆ ದಿನ ಅರಳಿ ಮರವನ್ನು 108 ಸಲ ಪ್ರದಕ್ಷಿಣೆ ಮಾಡುವವರಿಗೆ ಅಷ್ಟೈಶ್ವರ್ಯಗಳು ಸಿದ್ಧಿಸುತ್ತವೆ. ಮುಖ್ಯವಾಗಿ ಜಾತಕದಲ್ಲಿರುವ ಸರ್ಪದೋಷಗಳು ನಿವಾರಣೆಯಾಗುತ್ತವೆ. ಕಾಲ ಸರ್ಪದೋಷ ನಿವಾರಣೆಯಾಗಬೇಕು ಎಂದರೆ.. ಸೋಮಾವತಿ ಅಮಾವಾಸ್ಯೆ ದಿನ 108 ಸಲ ಪ್ರದಕ್ಷಿಣೆ ಹಾಕಬೇಕು ಎಂದು ಆಧ್ಯಾತ್ಮಿಕ ಪಂಡಿತರು ಸೂಚಿಸಿದ್ದಾರೆ.

‘ಸೋಮವತಿ ಅಮಾವಾಸ್ಯೆ’ ದಿನಕ್ಕಾಗಿ ಸಪ್ತ ಋಷಿಗಳು, ನವಗ್ರಹಗಳು, ಮುಕ್ಕೋಟಿ ದೇವತೆಗಳು ಕಾಯುತ್ತಿರುತ್ತಾರೆ. ಈ ದಿನ ಶಿವನಿಗೆ ಅಭಿಷೇಕ ಮಾಡಿ ಉಪವಾಸವಿದ್ದರೆ ಪುಣ್ಯ ಬರುತ್ತದೆಂದು ಪಂಡಿತರು ಹೇಳುತ್ತಿದ್ದಾರೆ. ಈ ದಿನ ಅಭಿಷೇಕ ಯಾಕೆ ಮಾಡುತ್ತಾರೆಂದರೆ ,ಈ ದಿನ ಸಕಲ ಶಕ್ತಿಗಳು ಲಿಂಗ ರೂಪವಾದ ಶಿವನಲ್ಲಿ ಮನೆ ಮಾಡಿಕೊಂಡಿರುತ್ತದೆ. ಆದ್ದರಿಂದ ಮಾಡಿದ ಪಾಪಗಳು ತೊಲಗಿ ಹೋಗುತ್ತದೆಂದು ಹೇಳುತ್ತಾರೆ. ಇನ್ನೊಂದು ಮುಖ್ಯ ವಿಚಾರ ಓಂ ನಮಃ ಶಿವಾಯಃ ಪಂಚಾಕ್ಷರಿ ಮಂತ್ರವನ್ನು 108 ಸಲ ಪಠಿಸಿದರೂ ಸಕಲವೂ ಸಿದ್ಧಿಸುತ್ತದೆ.

ಕೆಲವೊಂದು ನಿಯಮಗಳನ್ನು ಪಾಲಿಸುವುದರಿಂದ ನಮಗೆ ಅನೇಕ ಲಾಭಗಳಿವೆ. ಹಾಗಾಗಿ ಇಂತಹ ಪುಣ್ಯ ದಿನ ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕುವ ಮೂಲಕ ಒಳ್ಳೆಯ ಪ್ರತಿಫಲವನ್ನು ಪಡೆಯಿರಿ.

No comments