Header Ads

test

ಗಂಡಂದಿರು ಜೈಲಿನಲ್ಲಿದ್ದರೂ.. 32 ಮಡದಿಯರು ಗರ್ಭವತಿಯರಾದರು ! ಹೇಗೆಂದು ಗೊತ್ತಾ...?

ದೇಶದ ಹಲವೆಡೆ ಹಲವು ವಸ್ತುಗಳ ಸಗ್ಲಿಂಗ್ ನಡೆಯುವುದನ್ನು ನಾವೆಲ್ಲರೂ ದಿನ ಪತ್ರಿಕೆಗಳಲ್ಲಿ ಓದಿರುತ್ತೇವೆ. ಮಾಧ್ಯಮಗಳಲ್ಲಿ ನೊಡಿರುತ್ತೇವೆ. ಆದರೆ... ಹಣ ಗಳಿಸಲೆಂದೇ ಹಲವರು ಅಡ್ದಾರಿ ಹಿಡಿಯುತ್ತಿರುತ್ತಾರೆ. ಇವರಿಗೆ ದಳಾಳಿಗಳು ಸಹಕಾರ ನಿಡುತ್ತಾರೆ. ಇವೆಲ್ಲವೂ ಮಾಮೂಲೇ. ಆದರೆ...ನೀವೆಂದಾದರೂ ' ವೀರ್ಯ' ವನ್ನು ಸ್ಮಗ್ಲಿಂಗ್ ಮಾಡಿರುವುದರ ಬಗ್ಗೆ ಕೇಳಿದ್ದೀರಾ..? ಇಲ್ಲವಲ್ಲ? ಹಾಗಾದರೆ ಮೊದಲ ಬಾರಿಗೆ ವೀರ್ಯವನ್ನು ಸ್ಮಗ್ಲಿಂಗ್ ಮಾಡಿದ ಮಹಿಳೆಯ ಬಗ್ಗೆ ನಿಮಗೆ ತಿಳಿಸುತ್ತೇವೆ ಬನ್ನಿ. ಈಕೆ ಈ ವ್ಯಾಪಾರದಲ್ಲಿ ಒಳ್ಳೆಯ ಹೆಸರನ್ನೂ ಗಳಿಸಿದ್ದಾಳೆ.


ಗಂಡ ಜೈಲಿನಲ್ಲಿದ್ದಾನೆ. ಹೀಗೆ ಹಲವು ವರ್ಷಗಳು ಕಳೆದವು. ಆದರೆ..ಅಚ್ಚರಿಯೆಂಬಂತೆ ಆಕೆ ಒಮ್ಮೆ ಗರ್ಭಿಣಿಯಾದಳು. ನಂತರ ಒಂದು ಮಗುವಿಗೆ ಜನ್ಮವನ್ನೂ ಸಹ ನೀಡಿದಳು. ಇದನ್ನು ಓದಿದಾಗ ನಿಮಗೆ ಅಚ್ಚರಿಯಾಗುತ್ತದಲ್ಲವೇ. ಗಂಡ ಜೈಲಿನಲ್ಲಿರುವಾಗ ಮಹಿಳೆ ಗರ್ಭಿಣಿಯಾಗುವುದಾದರೂ ಹೇಗೆ.? ಆಕೆ ಅನೈತಿಕ ಸಂಬಂಧದಿಂದ ಗರ್ಭಧರಿಸಿರಬಹುದು .ಎಂದು ಊಹಿಸುತ್ತಿದ್ದೀರಲ್ಲವೇ? ಆಕೆಯ ಶೀಲವನ್ನು ಶಂಕಿಸಬೇಡಿ. ಆಕೆ ತನ್ನ ಗಂಡನ ವೀರ್ಯವನ್ನು ಸ್ಮಗ್ಲಿಂಗ್ ಮಾಡಿದಳು. ಹಾಗೆ ಮಾಡದೆ ಆಕೆಗೆ ಗತ್ಯಂತರವಿರಲಿಲ್ಲ. ಯಾಕೆಂದರೆ...ಇಸ್ರೇಲ್ ಜೈಲುಗಳಲ್ಲಿ ಇಪ್ಪತ್ತು ವರ್ಷಗಳಿಂದಲೂ ಕೊಳೆಯುತ್ತಿರುವ ಗಂಡಂದಿರಿಂದ ವೀರ್ಯವನ್ನು ಶೇಖರಿಸಿ... IVF ವಿಧಾನದಿಂದ ಮಹಿಳೆಯರು ತಾಯಿಯರಾಗುತ್ತಿದ್ದಾರೆ.

ಈ ಮಗುವಿನಲ್ಲಿ ನನ್ನ ಗಂಡನನ್ನು ನೋಡಿಕೊಂಡು ಪ್ರೀತಿಯಿಂದ ಬೆಳೆಸುತ್ತೇನೆ. ನನ್ನ ಜೀವನದಲ್ಲಿ ಇದಕ್ಕಿಂತಲೂ ಮಿಗಿಲಾದ ಸಂತೋಷ ಬೇರೊಂದಿಲ್ಲ ಎಂದು...ಇಸ್ರೇಲ್ ಜೈಲಿನಲ್ಲಿ 2ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ " ಫಾಹ್ಮೀ ಸಲಾಹ್ " ನ ಹೆಂಡತಿ ಹೆಮ್ಮೆಯಿಂದ ಹೇಳುತ್ತಾಳೆ. ಫಾಹ್ಮೀ ವೀರ್ಯವನ್ನು ಗಾಜಾ ದಲ್ಲಿರುವ ಆಸ್ಪತ್ರೆಗೆ ರವಾನಿಸಿದ ನಂತರ IVF ಮೂಲಕ ಆತನ ಹೆಂಡತಿ ಗರ್ಭಧರಿಸಿದಳು. ನಿಜ ಹೇಳಬೇಕೆಂದರೆ 2004 ರಲ್ಲಿ " ರಾಹಿ ಮುಷ್ ತಾಹಾ" ಎಂಬ ಪಾಲಿಸ್ತೀನಿ ಖೈದಿಗೆ ಈ ರೀತಿ ವೀರ್ಯವನ್ನು ಸ್ಮಗ್ಲಿಂಗ್ ಮಾಡುವ ಐಡಿಯಾ ಹೊಳೆಯಿತು. ಪ್ರಾರಂಭದಲ್ಲಿ ಆತನ ಕುಟುಂಬದ ಸದಸ್ಯರೇ ಇದಕ್ಕೆ ಒಪ್ಪಲಿಲ್ಲ.

ಆದರೆ.. ತನ್ನ ಹೆಂಡತಿಗೆ ಪತ್ರ ಬರೆದು ವಿಶಯ ತಿಳಿಸಿದ. ನಾವು ಮೌನದಿಂದಿದ್ದರೆ ಮುಂದೆ ದೇಶಕ್ಕಾಗಿ ಯಾರು ಹೋರಾಡುತ್ತಾರೆ? ಎಂದು ಆಕೆಯನ್ನು ಒಪ್ಪಿಸಿದ. ನಂತರದ ದಿನಗಳಲ್ಲಿ ವೀರ್ಯವನ್ನು ಸ್ಮಗ್ಲಿಂಗ್ ಮಾಡುವುದನ್ನು ಇತರೆ ಖೈದಿಗಳೂ ಅನುಸರಿಸಿದರು ಜೈಲು ಅಧಿಕಾರಿಗಳ ಕಣ್ಣು ತಪ್ಪಿಸಿ, ತಮ್ಮನ್ನು ನೋಡಲು ಬಂದವರೊಡನೆ ತಮ್ಮ ವೀರ್ಯವನ್ನು ಬಾಟ್ಲಿಯಲ್ಲಿ ಶೇಖರಿಸಿ ಹೊರಗೆ ಕಳುಹಿಸುತ್ತಿದ್ದರು.ಈರೀತಿ ಕಳೆದ ಮೂರು ವರ್ಷಗಳಲ್ಲಿ ಪಾಲಸ್ತೀನಿ ಖೈದಿಗಳ ಮಡದಿಯರು 32 ಮಂದಿ ಗರ್ಭವತಿಯರಾಗಿದ್ದಾರೆ.ಎಷ್ಟಾದರೂ ಕಲಿಗಾಲವಲ್ಲವೇ? ಯಾರು ತಾನೆ ಏನು ಮಾಡಲಾದೀತು ಹೇಳಿ ಎನ್ನುತ್ತಿದ್ದಾರೆ ನೆಟಿಜೆನ್ ಗಳು.

1 comment: