Header Ads

test

ಪೆಟ್ರೋಲ್ ಬಂಕ್ ನಲ್ಲಿ ತಿಂಗಳಿಗೆ 300 ರೂಪಾಯಿಗಳ ವೇತನದಿಂದ ಪ್ರಪಂಚದಲ್ಲೇ ಪ್ರಸಿದ್ಧ ಕೈಗಾರಿಕೋದ್ಯಮಿಯಾಗಿಉತ್ತುಂಗಕ್ಕೇರಿದ ಅಂಬಾನಿ ಬಗ್ಗೆ ನಿಮಗಾಗಿ..!

ಧೀರೂಭಾಯಿ ಅಂಬಾನಿ.ಈ ಹೆಸರು ಕೇಳಿದರೇ ಸಾಕು ಭಾರತೀಯ ಮಾರ್ಕೆಟ್ ಗಡ ಗಡ ನಡುಗುತ್ತದೆ.ಪ್ರಪಂಚದ ಅತ್ಯಂತ ಶ್ರೀಮಂತರೂ ಸಹ ಶಾಕ್ ಗೆ ಗುರಿಯಾಗುತ್ತಾರೆ. ಯಾವುದೇ ರೀತಿಯ ಪ್ರೋತ್ಸಾಹವಿಲ್ಲದೆ, ಬ್ಯಾಂಕ್ ಗಳ ಸಹಕಾರವಿಲ್ಲದೆ. ಸೊನ್ನೆಯಿಂದ ಪ್ರಾರಂಭವಾಗಿ ಇಂದು ಆತನ ಹೆಸರನ್ನೇ ಒಂದು ಬ್ರಾಂಡ್ ಆಗಿ ನಮ್ಮ ಮುಂದಿದ್ದಾರೆ ಆ ಬಿಜಿನೆಸ್ ಟೈಕೂನ್..! ಅಂತಹ ವ್ಯಕ್ತಿಯ ಜೀವನದಲ್ಲಿ ಒಮ್ಮೆ ಇಣುಕಿ ನೋಡಿದರೆ... ನಂಬಲು ಆಗದಂತಹ ಸತ್ಯಗಳು.ವಿಧಿಯನ್ನು ಎದುರಿಸಿ ಮೇಲಕ್ಕೆ ಬಂದ ಘಟನೆಗಳು ಸಾವಿರಾರು.1. ಯಾತ್ರಿಕರಿಗೆ ಬಜ್ಜೀ ಗಳನ್ನು ಮಾರುತ್ತಾ ಜೀವನವನ್ನು ಸಾಗಿಸುತ್ತಿದ್ದರು. 16 ನೇ ವಯಸ್ಸಿನಲ್ಲಿ, 10 ನೇ ತರಗತಿಯನ್ನು ಪೂರ್ಣಗೊಳಿಸಿ... ಪೆಟ್ರೋಲ್ ಬಂಕ್ ಒಂದರಲ್ಲಿ ತಿಂಗಳಿಗೆ ಕೇವಲ 300 ರೂಪಾಯಿಗಳ ವೇತನಕ್ಕೆ ಯೆಮನ್ ದೇಶದಲ್ಲಿ ಕೆಲಸ ಪಡೆದುಕೊಂಡರು. 50 ಸಾವಿರ ರೂಪಾಯಿಗಳನ್ನು ಒಟ್ಟು ಮಾಡಿಕೊಂಡು ಸ್ವದೇಶಕ್ಕೆ ಬಂದು, ಆ ಹಣದಲ್ಲಿ ಬಟ್ಟೆಗಳ ವ್ಯಾಪಾರವನ್ನು ಪ್ರಾರಂಭಿಸಿದರು. ಮೂರು ಸ್ಟೂಲ್ ಗಳು, ಒಂದು ಲ್ಯಾಂಡ್ ಲೈನ್ ಫೋನ್ , ಒಂದು ಟೇಬಲ್ ಹೊಂದಿರುವಂತಹ ಒಂದು ಚಿಕ್ಕ ಕೋಣೆಯನ್ನು ಬಾಡಿಗೆಗೆ ಪಡೆದುಕೊಂಡು ಅದರಲ್ಲಿ 'ರಿಲಯೆನ್ಸ್' ಕಂಪೆನಿಯನ್ನು ಪ್ರಾರಂಭಿಸಿದರು.

ವಿಮಲ್ ಬ್ರಾಂಡ್ ನಲ್ಲಿ ಅಹಮದಾಬಾದ್ ನಲ್ಲಿ ಪ್ರಥಮಬಾರಿಗೆ ಬಟ್ಟೆಗಳ ಕಂಪೆನಿಯನ್ನು ಪ್ರಾರಂಭಿಸಿದರು. ಹಂತ ಹಂತವಾಗಿ ಮೇಲೇರಿದ ಅಂಬಾನಿ... ತನ್ನ ಕಂಪೆನಿಯ 33 ಸಾವಿರ ಮಂದಿ ಪಾಲುದಾರರೊಂದಿಗೆ...ಸ್ಟೇಡಿಯಂ ನಲ್ಲಿ ಮೀಟಿಂಗ್ ನಡೆಸುತ್ತಿದ್ದರು. ಒಂದು ಕಂಪೆನಿಯ ಮೀಟಿಂಗ್ ಸ್ಟೇಡಿಯಂ ನಲ್ಲಿ ಇರಿಸಿಕೊಂಡದ್ದು ಅದೇ ಮೊದ.ಲು 85 ಸಾವಿರ ಉದ್ಯೋಗಿಗಳಿರುವ ಈ ಕಂಪೆನಿ 1966 ರಲ್ಲಿ ಕಟ್ಟಿದ ತೆರಿಗೆ , ಸೆಂಟ್ರಲ್ ಬಜೆಟ್ ನ 5% ಆಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲುದಾರರನ್ನು ಹೊಂದಿರುವ ಪ್ರಪ್ರಥಮ ಭಾರತೀಯ ಕಂಪೆನಿ ' ರಿಲಯೆನ್ಸ್'.

ಧೀರೂಭಾಯಿ ಅಂಬಾನಿ ಹೇಗೆ ರಿಲಯನ್ಸ್ ಕಂಪೆನಿ ಕಟ್ಟಿದರು ಎಂಬ ಕುರಿತು ಸ್ಫೂರ್ತಿಯ ಕತೆಗಳನ್ನು ನೀವೆಲ್ಲಾ ಕೇಳಿರಬಹುದು. ಆದರೆ ಅದರಾಚೆಗಿನ ಅಂಬಾನಿ ಅಥವಾ ರಿಲಯನ್ಸ್ ಬೆಳೆದು ಬಂದ ಕತೆ ಇವತ್ತಿಗೂ ನಿಗೂಢವಾಗಿಯೇ ಇದೆ. ಹೇಗೆ ಒಬ್ಬ ಸಾಮಾನ್ಯ ಮನುಷ್ಯ ರಾಜಕಾರಣಿಗಳು, ಅಧಿಕಾರಿಗಳ ಕೈ ಬೆಚ್ಚಗೆ ಮಾಡಿ ‘ರಿಲಯನ್ಸ್ ಇಂಡಸ್ಟ್ರಿಯಲ್ ಲಿಮಿಟೆಡ್’ ಎಂಬ ಉದ್ಯಮ ಸಾಮ್ರಾಜ್ಯ ಕಟ್ಟಿದರು ಎಂಬುದನ್ನು ತಮ್ಮ ಪುಸ್ತಕದಲ್ಲಿ ಬಿಚ್ಚಿಡುತ್ತಾ ಹೋಗುತ್ತಾರೆ ಪತ್ರಕರ್ತ ಹಮೀಶ್ ಮೆಕ್ಡೊನಾಲ್ಡ್.

ಧೀರೂಭಾಯಿ ಅಂಬಾನಿ ಗುಜರಾತಿನ ಶಾಲಾ ಮಾಸ್ಟರೊಬ್ಬರ ಮಗ. ವಿದೇಶಗಳಲ್ಲಿದ್ದ ಚಿಕ್ಕ ಪುಟ್ಟ ನೌಕರಿ ಮಾಡಿಕೊಂಡಿದ್ದ ಅವರು, ಸ್ವಂತಕ್ಕೊಂದು ಉದ್ಯಮ ನಡೆಸುವ ಕನಸು ಕಟ್ಟಿಕೊಂಡು 1958ರಲ್ಲಿ ಭಾರತಕ್ಕೆ ವಾಪಾಸಾಗುತ್ತಾರೆ. ಆಗಿನ್ನೂ ಮುಖೇಶ್ ಅಂಬಾನಿ ಪುಟ್ಟ ಮಗು; ಅನಿಲ್ ಅಂಬಾನಿ ಇನ್ನೂ ಹುಟ್ಟಿರಲಿಲ್ಲ. ಸ್ವಾತಂತ್ರ್ಯ ಬಂದ ಆರಂಭದ ದಿನಗಳಲ್ಲಿ ವ್ಯಾಪಾರಿ ಗುಜರಾತಿಗರು ಮುಂಬೈ ನಗರದಲ್ಲಿ ನೆಲೆ ಕಂಡುಕೊಳ್ಳಲು ಲಕ್ಷ ಲಕ್ಷ ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದರು. ಅದೇ ಹೊತ್ತಿಗೆ ಅಂಬಾನಿಯೂ, ದೇಶದ ವಾಣಿಜ್ಯ ನಗರಿಯಲ್ಲಿ ತಮ್ಮ ಸಂಬಂಧಿಯೊಬ್ಬರ ಸಹಾಯದಲ್ಲಿ ಸಣ್ಣ ಕಂಪೆನಿ ತೆರೆದರು. ಬಟ್ಟೆಗಳ ವ್ಯವಹಾರ ನಡೆಸುವ ಕಂಪೆನಿಯದು.1998ರಲ್ಲಿ ಪ್ರಕಟವಾದ ಇವರ ‘ದಿ ಪಾಲಿಸ್ಟರ್ ಪ್ರಿನ್ಸ್: ದಿ ರೈಸ್ ಆಫ್ ಧೀರೂಭಾಯಿ ಅಂಬಾನಿ’ ಪುಸ್ತಕದಲ್ಲಿ ರಿಲಯನ್ಸ್ ಬಗೆಗಿನ ಅಸಲಿ ಕತೆಗಳನ್ನು ಹೇಳುವ ಪುಸ್ತಕಗಳಲ್ಲಿ ಇದೂ ಕೂಡ ಒಂದು. ದುರಾದೃಷ್ಟವಶಾತ್ ಈ ಪುಸ್ತಕ ಭಾರತದಲ್ಲಿ ನಿಷೇಧಕ್ಕೆ ಒಳಗಾಗಿದೆ. ಮುಂದೆ ಇಬ್ಬರಲ್ಲೂ ಭಿನ್ನಾಭಿಪ್ರಾಯ ಮೂಡಿ 1967ರಲ್ಲಿ ರಿಲಯನ್ಸ್ ಕಂಪನಿಯನ್ನು ಹುಟ್ಟು ಹಾಕಿದರು. ಅದಾರಾಚೆಗೆ ಅಂಕಿ ಅಂಶಗಳ ಲೆಕ್ಕದಲ್ಲಿ ರಿಲಯನ್ಸ್ ಬೆಳವಣಿಗೆಯದ್ದೇ ದೊಡ್ಡ ಕತೆ. ಅದನ್ನು ಸದ್ಯಕ್ಕೆ ಪಕ್ಕಕ್ಕಿಟ್ಟು, ರಿಲಯನ್ಸ್ ಕಟ್ಟಲು ಅಂಬಾನಿ ಬಳಸಿದ ವ್ಯಾಪಾರಿ ಸೂತ್ರಗಳನ್ನು ಗಮನಿಸಬೇಕಿದೆ.

2 comments: