Header Ads

test

ಪ್ರಾಮಾಣಿಕತೆಗೆ 25 ಸಲ ವರ್ಗಾವಣೆ 'ರೂಪ'ದ ಸನ್ಮಾನ. ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ರಿಯಲ್ ಲೈಫ್..!

ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ, ನ್ಯಾಯವನ್ನು ಗೆಲ್ಲಿಸಲು ನಿರಂತರ ಕಷ್ಟಪಡುತ್ತಿರುವ ಆಕೆಗೆ ಸರಕಾರ ಈಗಾಗಲೆ 25 ಸಲ ವರ್ಗಾವಣೆಯ ರೂಪದಲ್ಲಿ ಸನ್ಮಾನ ಮಾಡಿದೆ. ತನ್ನ 16 ವರ್ಷಗಳ ಸೇವೆಯಲ್ಲಿ 25 ಸಲ ವರ್ಗಾವಣೆಗೆ ಗುರಿಯಾದರೂ ಆ ವರ್ಗಾವಣೆಗಳೆಲ್ಲಾ ಶಿಕ್ಷೆ ಎಂದಲ್ಲದೆ ಜವಾಬ್ದಾರಿ ಎಂದು ಸ್ವೀಕರಿಸಿದರು ಐಪಿಎಸ್ ರೂಪ ಮೌದ್ಗಿಲ್ (ಡಿ. ರೂಪಾ). ಕೆಲವು ತಿಂಗಳ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಿಕ್ಕಮ್ಮ ಶಶಿಕಲಾಗೆ ಜೈಲು ಅಧಿಕಾರಿಗಳು ಅಕ್ರಮವಾಗಿ ಕಲ್ಪಿಸುತ್ತಿರುವ ಸೌಲಭ್ಯಗಳ ಬಗ್ಗೆ ಉನ್ನತಾಧಿಕಾರಿಗಳಿಗೆ ದೂರು ನೀಡಿದ ರೂಪಾ ಮೌದ್ಗಿಲ್‌ರನ್ನು ವರ್ಗಾವಣೆ ಮೂಲಕ ಕರ್ನಾಟಕ ಸರ್ಕಾರ ಸನ್ಮಾನಿಸಿತು. ರಾಜ್ಯದ ಮೊದಲ ಮಹಿಳಾ ಐಪಿಎಸ್ ಅಧಿಕಾರಿಗೆ ಸಿಕ್ಕ ಬಳುವಳಿ ಇದು.



ಸರ್ಕಾರ ತನಗೆ ಒಪ್ಪಿಸಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆಂದು, ಈ ವರ್ಗಾವಣೆಯಿಂದ ತಾನು ನಿರಾಸೆಗೆ ಒಳಗಾಗಲ್ಲ ಎಂದು ಅವರನ್ನು ಭೇಟಿಯಾದ ಪತ್ರಕರ್ತರಿಗೆ ರೂಪಾ ತಿಳಿಸಿದ್ದರು. ಜವಾಬ್ದಾರಿ ಅದು ಏನೇ ಇರಲಿ ನಿಷ್ಪಕ್ಷಪಾತವಾಗಿ, ನೇರವಾಗಿ, ಪ್ರಾಮಾಣಿಕವಾಗಿ ವ್ಯವಹರಿಸುವುದು ಅವರ ಗುಣ. ಹಾಗಾಗಿ ಇದುವರೆಗೆ 25 ಸಲ ವರ್ಗಾವಣೆ ಮೂಲಕ ಸರ್ಕಾರದಿಂದ ಸನ್ಮಾನ ಸ್ವೀಕರಿಸಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ರೂಪಾ ಮೌದ್ಗಿಲ್ ಬಯಲಿಗೆಳೆದ ಕಾರಣ ಸರ್ಕಾರ ಪೇಚಾಟಕ್ಕೆ ಸಿಲುಕಿತು. ಈ ಸಂಗತಿ ರಾಜ್ಯದಾದ್ಯಂತ ಸಂಚಲನಕ್ಕೆ ಕಾರಣವಾಯಿತು. ಸರಕಾರವನ್ನು ಪ್ರಶ್ನಿಸಲು ಪ್ರತಿಪಕ್ಷಗಳಿಗೆ ಒಂದು ಅಸ್ತ್ರ ಸಿಕ್ಕಂತಾಯಿತು. ಚಿಕ್ಕಮ್ಮನಿಗೆ ಜೈಲಿನಲ್ಲಿ 5 ವಿಶೇಷ ಕೋಣೆಗಳನ್ನು ಮೀಸಲಿಟ್ಟಿರುವುದು, ವಿಶೇಷ ಅಡುಗೆ ಮನೆಯ ಜತೆಗೆ ಸಕಲ ಸೌಲಭ್ಯಗಳೂ ಇರುವ ಸಂಗತಿಯನ್ನು ಬಹಿರಂಗ ಪಡಿಸುವುದರಲ್ಲಿ ಐಪಿಎಸ್ ರೂಪಾ ಮೌದ್ಗಿಲ್‍ಗೆ ಸಹಕರಿಸಿದ ಕೈದಿಗಳನ್ನೂ ಬೇರೆ ಜೈಲಿಗೆ ಸ್ಥಳಾಂತರಿಸಲಾಯಿತು.

ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಬಯಲು ಮಾಡಿದ ಐಪಿಎಸ್ ಅಧಿಕಾರಿಗೆ ವರ್ಗಾವಣೆ ಮಾಡಿದ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ತೋಡಿಕೊಂಡರು. ಈ ರೀತಿ ಪ್ರಾಮಾಣಿಕವಾಗಿ ಜನರಿಗಾಗಿ ಕೆಲಸ ಮಾಡುವ ಅಧಿಕಾರಿಗಳ ವಿರುದ್ಧ ಸರ್ಕಾರ ವರ್ಗಾವಣೆ ಮಾಡುವುದು ಸಮಂಜಸವಲ್ಲ ಎಂದು ಕೂಗು ಕೇಳಿಬಂದಿತ್ತು. ಆದರೂ ದಪ್ಪ ಚರ್ಮದ ಸರ್ಕಾರಕ್ಕೆ ಇದೆಲ್ಲಾ ತಟ್ಟಲೇ ಇಲ್ಲ. ಇಂತಹ ಪ್ರಾಮಾಣಿಕ ಅಧಿಕಾರಿಗಳಿದ್ದರೆ ಅವರ ಬೇಳೆ ಬೇಯಿಸಿಕೊಳ್ಳಲು ಸಾಧ್ಯವಾಗಲ್ಲ ಅಲ್ಲವೇ?

No comments