Header Ads

test

ಜನವರಿ 24ರಂದು ರಾಷ್ಟ್ರಗೀತೆಗೆ ಅನುಮೋದನೆ ಸಿಕ್ಕ ದಿನ, ಜನಗಣ ಮನ ರಾಷ್ಟ್ರಗೀತೆ ಹಿಂದಿರುವ ಅಸಲಿ ಕಥೆ..!!

ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುವ ರೀತಿಯಲ್ಲಿ ರೂಪಿಸಿರುವ ರಾಷ್ಟ್ರಗೀತೆ, ಹಾಡನ್ನು ಸಾಂವಿಧಾನ ಪರಿಷತ್ತು 1950 ಜನವರಿ 24ರಂದು ಅನುಮೋದನೆ ನೀಡಿತು. ನಮ್ಮ ರಾಷ್ಟ್ರಗೀತೆ ’ಜನಗಣ ಮನ’ವನ್ನು ರವೀಂದ್ರನಾಥ್ ಠಾಗೂರ್ ಅವರು ಬಂಗಾಳಿ ಭಾಷೆಯಲ್ಲಿ ರಚಿಸಿದ್ದಾರೆ. ಈ ಗೀತೆ ಭಾರತ ದೇಶದ ಸಂಸ್ಕೃತಿಯನ್ನು, ನೈಸರ್ಗಿಕ ಸ್ವರೂಪವನ್ನು ವಿವರಿಸುತ್ತದೆ. ಇದನ್ನು ಮೊದಲ ಸಲ 1911 ಡಿಸೆಂಬರ್ 27ರಂದು ಕೊಲ್ಕತ್ತಾ ಕಾಂಗ್ರೆಸ್ ಮಹಾಸಭೆಯಲ್ಲಿ ಹಾಡಲಾಯಿತು.

ನಮ್ಮ ರಾಷ್ಟ್ರಯ ಹಾಡಾದ "ವಂದೇ ಮಾತರಂ"ನ್ನು ಬಂಕಿಂಚಂದ್ರ ಚಟರ್ಜಿ ಅವರು ರಚಿಸಿದ "ಆನಂದ್ ಮಠ್" ಕಾದಂಬರಿಯಿಂದ ಸ್ವೀಕರಿಸಲಾಯಿತು. ಈ ಹಾಡು ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ದೇಶದಾದ್ಯಂತ ಮೊಳಗಿತ್ತು. ಬ್ರಿಟೀಷರ ಗುಂಡಿಗೆಯನ್ನು ನಡುಗಿಸಿದ ಗೀತೆ ಕ್ರಾಂತಿಯ ಬೀಜವನ್ನು ಬಿತ್ತಿತು. ರಾಷ್ಟ್ರಗೀತೆಯನ್ನು, ಹಾಡನ್ನು ಹಾಡುವುದು, ರಾಷ್ಟ್ರೀಯ ಚಿಹ್ನೆಗಳನ್ನು ಗೌರವಿಸುವುದು ಪ್ರತಿಯೊಬ್ಬ ಪೌರನ ಪ್ರಥಮ ಕರ್ತವ್ಯ.



ನೋಬೆಲ್ ಪ್ರಶಸ್ತಿ ಪುರಸ್ಕೃತ, ರವೀಂದ್ರನಾಥ್ ಠಾಗೂರ್ ಬರೆದ ಬಂಗಾಳಿ ಗೀತೆಯಲ್ಲಿನ ಮೊದಲ ಭಾಗ ಇದು. 1911ರಲ್ಲಿ ಮೊದಲ ಸಲ ಹಾಡಿದ ಈ ಗೀತೆಯನ್ನು 1950ರ ಜನವರಿ 24ರಂದು ರಾಷ್ಟ್ರಗೀತೆಯಾಗಿ ಸಾಂವಿಧಾನಿಕ ಸಭೆ ಸ್ವೀಕರಿಸಿತು. ಈ ಗೀತೆಗೆ ಸಂಗೀತವನ್ನೂ ಠಾಗೂರ್ ಅವರೇ ಸಂಯೋಜಿಸಿದರು. ಸಂಗೀತಕ್ಕೆ ಅನುಗುಣವಾಗಿ ಈ ಗೀತೆಯನ್ನು ಹಾಡಲು 52 ಸೆಕೆಂಡ್ ಸಮಯ ಹಿಡಿಸುತ್ತದೆ. ಆಗಾಗ ಮೊದಲ, ಕೊನೆಯ ಚರಣಗಳನ್ನು ಮಾತ್ರ ಹಾಡುವ ಪದ್ಧತಿ ಸಹ ಇದೆ, ಇದಕ್ಕೆ 20 ಸೆಕೆಂಡ್ ಹಿಡಿಸುತ್ತದೆ.

ಠಾಗೂರ್ ಜನಗಣಮಣವನು 1919ರಲ್ಲಿ ಮದನಪಲ್ಲಿಯಲ್ಲಿ ಆಂಗ್ಲ ಭಾಷೆಗೆ ಭಾಷಾಂತರ ಮಾಡಿದರು ಎಂದು ಭಾವಿಸುತ್ತಾರೆ. ಈ ಭಾಷಾಂತರ ಪ್ರತಿ ಈಗಲೂ ಬೆಸೆಂಟ್ ಥಿಯಾಸಾಫಿಕಲ್ ಕಾಲೇಜು ಮದನಪಲ್ಲಿಯಲ್ಲಿದೆ. ಮೊದಲ ಸಲ ಬಹಿರಂಗವಾಗಿ ಜನಗಣಮನ ಗೀತೆಯನ್ನು ಹಾಡಿದ್ದು ಮದನಪಲ್ಲಿಯಲ್ಲೇ. 1919 ಫೆಬ್ರವರಿ 28ರಂದು ತನ್ನ ಸ್ನೇಹಿತ, ಬಿಸೆಂಟ್ ಥಿಯಾಸಾಫಿಕಲ್ ಕಾಲೇಜು ಪ್ರಿನ್ಸಿಪಾಲ್ ಆದ ಜೇಮ್ಸ್ ಹೆಚ್ ಕಜಿನ್ಸ್ ಮನವಿ ಮೇರೆಗೆ ಸ್ವಲ್ಪ ಮಂದಿ ಇದ್ಯಾರ್ಥಿಗಳು ಸೇರಿ ಜನಗಣಮನವನ್ನು ಬಂಗಾಳಿಯಲ್ಲಿ ಹಾಡಲಾಯಿತು.

ದೇಶದ ಜನರಲ್ಲಿ ರಾಷ್ಟ್ರೀಯತೆಯನ್ನು ಹೆಚ್ಚಿಸುವ ಸ್ಫೂರ್ತಿದಾಯಕ ಗೀತೆ "ಜನಗಣ ಮನ". ಇದನ್ನು ಹಾಡುವಾಗ ಕೆಲವು ನಿಯಮಗಳನ್ನು ನಾವು ಪಾಲಿಸಬೇಕು. ಶಿಕ್ಷಣ ಸಂಸ್ಥೆಗಳು, ಸರಕಾರಿ ಕಚೇರಿಗಳು, ಅಧಿಕೃತ ಕಾರ್ಯಕ್ರಮಗಳಲ್ಲಿ ಇದನ್ನು ಹಾಡಬೇಕು. ಸಭೆಗಳು, ಸಮಾವೇಶಗಳು ನಡೆಯುವಾಗ ಎಲ್ಲರೂ ಎದ್ದು ನಿಂತು ಸಾಮೂಹಿಕವಾಗಿ ಹಾಡಬೇಕು. ಇದನ್ನು ಹಾಡುವುದು ಎಂದರೆ - ಕಾರ್ಯಕ್ರಮದ ಮುಕ್ತಾಯ ಅಥವಾ ಆ ದಿನದ ಸಮಯ ಮುಗಿದಿದೆ ಎಂದು ಭಾವಿಸಬಾರದು. ದೇಶ ಔನತ್ಯವನ್ನು ಮನನ ಮಾಡಿಕೊಂಡು, ರಾಷ್ಟ್ರೀಯ ಭಾವದೊಂದಿಗೆ ಮುಂದೆ ಸಾಗಲು ಇದು ಸ್ಫೂರ್ತಿಯನ್ನು ತುಂಬುತ್ತದೆ.

ನಮ್ಮ ದೇಶದ ಭೌಗೋಳಿಕ, ಸಾಹಿತ್ಯ, ಸಾಂಸ್ಕೃತಿಕ ವಾರಸುತವನ್ನು ನೆನಪು ಮಾಡಿಕೊಳ್ಳುತ್ತಾ ದೇಶದ ಬಗ್ಗೆ ಗೌರವ ಭಾವನ ತುಂಬಿಕೊಳ್ಳುವುದೇ ಇದರ ಉದ್ದೇಶ. ಈ ಆಶಯದೊಂದಿಗೆ ಇದನ್ನು ನಮ್ಮ ರಾಷ್ಟ್ರಗೀತೆಯಾಗಿ ಗುರುತಿಸಿದರು. ಜನಗಣಮನ ಭಾರತೀಯರ ಪ್ರತಿಷ್ಠೆ, ಪ್ರತಿ ಭಾರತೀಯನ ಗೌರವ.

No comments