2019ರಲ್ಲಿ ಬಿಳಿ ಬಣ್ಣದ ಕಾರುಗಳನ್ನು ಖರೀದಿಸುತ್ತಿದ್ದೀರಾ.. 43% ಮಂದಿ ಆ ಬಣ್ಣವನ್ನೇ ಆಯ್ಕೆಮಾಡಿಕೊಂಡಿದ್ದಾರಂತೆ. ಹಾಗಿದ್ದರೆ ಇದು ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕು.
ಸಾಮಾನ್ಯವಾಗಿ ಬಹಳಷ್ಟು ಮಂದಿ ಕಾರುಗಳನ್ನು ಖರೀದಿಸುವಾಗ ತಮ್ಮ ಜಾತಕದ ರೀತಿ ಯಾವ ಬಣ್ಣ ಆದರೆ ಸೂಟಬಲ್ ಆಗುತ್ತದೆ ಆ ತರಹ ಬಣ್ಣದ ಕಾರನ್ನು ಖರೀದಿಸಲು ಇಷ್ಟಪಡುತ್ತಾರೆ. ಆದರೆ ಇತ್ತೀಚೆಗೆ ನಿರ್ವಹಿಸಿದ ಸಮೀಕ್ಷೆಯಲ್ಲಿ ಮಾತ್ರ ಭಾರತೀಯರು ಹೆಚ್ಚಾಗಿ ಬಿಳಿ ಬಣ್ಣದ ಕಾರನ್ನು ಇಷ್ಟಪಡುತ್ತಾರೆ ಎಂದು ಗೊತ್ತಾಗಿದೆ. 2018ರಲ್ಲಿ ಶೇ.43ರಷ್ಟು ಮಂದಿ ಆ ಬಣ್ಣವನ್ನೇ ಆಯ್ಕೆ ಮಾಡಿಕೊಂಡಿದ್ದಾರಂತೆ. ಜರ್ಮನಿ ಮೂಲದ ರಸಾಯನ ಕಂಪೆನಿ ಬಿಎಎಸ್ಎಫ್ ತನ್ನ ಅಧ್ಯಯನದಲ್ಲಿ ಈ ಸಂಗತಿಯನ್ನು ಬಹಿರಂಗಪಡಿಸಿದೆ. ಆ ಕಂಪನಿ ಬಿಎಎಸ್ಎಫ್ ಕಲರ್ ರಿಪೋರ್ಟ್ ಫಾರ್ ಆಟೋಮೋಟೀವ್ ಓಈಎಂ ಕೋಟಿಂಗ್ಸ್ ಹೆಸರಿನಲ್ಲಿ ಒಂದು ವರದಿಯನ್ನು ಬಿಡುಗಡೆ ಮಾಡಿದೆ.
ಬಿಳಿ ಬಣ್ಣದ ಬಳಿಕ ಗ್ರೇ (ಶೇ.15), ಸಿಲ್ವರ್ (ಶೇ.15) ಬಣ್ಣಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆಂದು ಹೇಳಿದೆ. ನಂತರದ ಸ್ಥಾನಗಳಲ್ಲಿ ಕೆಂಪು (ಶೇ.9), ನೀಲಿ (ಶೇ.7), ಕಪ್ಪು (ಶೇ.3) ಬಣ್ಣಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಭಾರತೀಯ ಗ್ರಾಹಕರು ಮುತ್ತಿನ ಬಣ್ಣ (ಪರ್ಲ್ ವೈಟ್) ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿನ ವಾತಾವರಣ ಬಿಸಿಯಾಗಿ ಇರುವುದು ಸಹ ಈ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಲು ಕಾರಣ ಎಂದಿದೆ ಸಮೀಕ್ಷೆ.
ಬಿಳಿ ಬಣ್ಣದಿಂದ ಕಾರುಗಳು ಬೇಗ ಬಿಸಿಯಾಗಲ್ಲ. ಅದೇ ರೀತಿ ಆ ಬಣ್ಣ ಐಶಾರಾಮಿಯಾಗಿ ಕಾಣಿಸುವುದು ಸಹ ಒಂದು ಕಾರಣ ಇರಬಹುದು ಎಂದು ಆ ವರದಿಯಲ್ಲಿ ಹೇಳಿದೆ. ಸ್ಫೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್ಯುವಿ) ಕಾರುಗಳ ವಿಷಯದಲ್ಲಿ ಶೇ. 41ರಷ್ಟು ಮಂದಿ ಈ ಬಣ್ಣಕ್ಕೆ ಆದ್ಯತೆ ನೀಡಿದ್ದಾರೆ. ಅದೇ ರೀತಿ ಕಾಂಪಾಕ್ಟ್ ಸೆಗ್ಮೆಂಟ್, ಕಾಂಪಾಕ್ಟ್ ಪ್ರೀಮಿಯಮ್ ಸೆಗ್ಮೆಂಟ್ಗಳ ವಿಚಾರದಲ್ಲಿ ಸಹ ಬಿಳಿ ಬಣ್ಣಕ್ಕೇ ಹೆಚ್ಚಿನ ಮನ್ನಣೆ ಇದೆ.
ಈ ಗೊತ್ತಾಯಿತಲ್ಲ. ಯಾವ ಬಣ್ಣದ ಕಾರು ಹೆಚ್ಚು ಮಾರಾಟವಾಗುತ್ತದೆ ಎಂದು. ಇದಕ್ಕೆ ಇನ್ನೊಂದು ಕಾರಣವೂ ಇರಬಹುದು. ಬಹುತೇಕ ಕ್ಯಾಬ್ಗಳ ಬಣ್ಣ ಬಿಳಿ. ಅಂದರೆ ಹಳದಿ ಬೋರ್ಡ್ ಕಾರುಗಳು ಹೆಚ್ಚಾಗಿ ಬಿಳಿ ಬಣ್ಣದಲ್ಲೇ ಇರುತ್ತವೆ. ಸಾಮಾನ್ಯವಾಗಿ ಕೆಂಪು ಬಣ್ಣ ಹೆಚ್ಚಾಗಿ ಮಾರಾಟವಾಗುತ್ತದೆ ಎಂದು ಬಹಳಷ್ಟು ಮಂದಿ ಅಂದುಕೊಂಡಿರುತ್ತಾರೆ. ಅದರ ಪ್ರಮಾಣ ಎಷ್ಟು ಎಂದು ಗೊತ್ತಾಯಿತಲ್ಲವೇ. ಬಿಳಿ ಬಣ್ಣದ ಕಾರಾದರೆ ರೀಸೇಲ್ ಸಹ ಬೇಗ ಆಗುತ್ತದೆ ಎಂಬುದನ್ನು ಇದರಿಂದ ಊಹಿಸಬಹುದು.

Post a Comment