Header Ads

test

ನ್ಯೂ ಇಯರ್ 2019ರಲ್ಲಿ ನಾವೆಲ್ಲರೂ ಕಡ್ಡಾಯವಾಗಿ ಕೈಗೊಳ್ಳಬೇಕಾದ 10 ಸಂಕಲ್ಪಗಳು (ರೆಸಲ್ಯೂಷನ್ಸ್)ಇವು..! ಯಾಕೆಂದರೆ?

ಹೊಸ ವರ್ಷ ಬರುತ್ತಿದೆ ಎಂದರೆ ಸಾಕು. ಬಹಳಷ್ಟು ಮಂದಿ ಅದು ಮಾಡಬೇಕು, ಇದನ್ನು ಬಿಡಬೇಕು, ಅದು ಮಾಡಬಾರದು... ಎಂದು ಹೇಳಿ ಸಾಕಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳಲು ನೋಡುತ್ತಾರೆ. ಆದರೆ ಈ ನಿರ್ಧಾರಗಳನ್ನು ಪಾಲಿಸುವವರು ಮಾತ್ರ ತುಂಬಾ ಕಡಿಮೆ ಇರುತ್ತಾರೆ. ಈ ಸಲವಾದರೂ ಹೊಸ ವರ್ಷಕ್ಕೆ ಕೆಳಗೆ ನೀಡಿರುವ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಿ. ಇದರಿಂದ ನಿಮ್ಮ ಆರೋಗ್ಯ, ಇತರೆ ಸಂಗತಿಗಳ ಪರವಾಗಿ ಹೊಸ ವರ್ಷ ಕೂಡಿ ಬರುತ್ತದೆ. ಹಾಗಿದ್ದರೆ ತೆಗೆದುಕೊಳ್ಳಬೇಕಾದ ಆ ನಿರ್ಧಾರಗಳು ಯಾವುದೆಂದರೆ.



1. ಹೊಸ ವರ್ಷದಲ್ಲಿ ನೀವು ಆರೋಗ್ಯದ ಕಡೆಗೆ ಗಮನ ಹರಿಸಿ. ಅನಾರೋಗ್ಯ ಸಮಸ್ಯೆಯಿಂದ ನರಳುವವರು ಅವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಿ. ಅಧಿಕ ತೂಕ ಇದ್ದರೆ ಅವರು ಅದನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ.

2. ಸಾಮಾಜಿಕ ಮಾಧ್ಯಮದ ಬಳಕೆಯನ್ನು ಕಡಿಮೆ ಮಾಡಿಕೊಳ್ಳಿ. ಸಾಧ್ಯವಾದರೆ ಸಂಪೂರ್ಣ ತ್ಯಜಿಸಿ.

3. ಇದುವರೆಗೆ ಹಣವನ್ನು ಸಾಕಷ್ಟು ಖರ್ಚು ಮಾಡಿದವರು ಇನ್ನು ಮುಂದೆ ಉಳಿತಾಯ ಮಾಡಲು ಪ್ರಯತ್ನಿಸಿ. ಉಳಿತಾಯ ಮಾಡುವವರು ಇನ್ನಷ್ಟು ಮಾರ್ಗಗಳನ್ನು ಆಲೋಚಿಸಿ.

4. ಮದ್ಯಪಾನ, ಧೂಮಪಾನ ತ್ಯಜಿಸುತ್ತೇನೆ ಎಂದು ಸಂಕಲ್ಪ ಮಾಡಿ.

5. ಉದ್ಯೋಗ ಇಲ್ಲದವರು ಉದ್ಯೋಗ ಹುಡುಕಿಕೊಳ್ಳಿ. ಜಾಬ್‌ನಲ್ಲಿ ಇರುವವರು ಪ್ರಮೋಷನ್‌ಗಾಗಿ ಪ್ರಯತ್ನಿಸಿ.

6. ಕುಟುಂಬ ಸದಸ್ಯರೊಂದಿಗೆ ಕಳೆಯಲು ಸಾಧ್ಯವಿಲ್ಲದವರು ಈ ವರ್ಷವಾದರೂ ಅವರೊಂದಿಗೆ ಟ್ರಿಪ್ ಪ್ಲಾನ್ ಮಾಡಿ.

7. ಯಾವುದಾದರೂ ಒಂದು ಸಾಧು ಪ್ರಾಣಿ ಅಥವಾ ಗಿಡವನ್ನು ಬೆಳಸಿ.

8. ಕೆಟ್ಟವರಿಂದ ದೂರ ಇರಿ. ಹೊಸ ವ್ಯಕ್ತಿಗಳ ಪರಿಚಯ ಬೆಳೆಸಿಕೊಳ್ಳಿ. ಅವರೊಂದಿಗೆ ಸ್ನೇಹದಿಂದಿರಿ.

9. ನಿಮ್ಮ ಸಮಯವನ್ನು, ಹಣವನ್ನು ಒಳ್ಳೆಯ ಕೆಲಸಗಳಿಗೆ ಖರ್ಚು ಮಾಡಿ.

10. ಹೊಸ ಭಾಷೆಯನ್ನು ಕಲಿಯಲು ಪ್ರಯತ್ನಿಸಿ. ಹೊಸ ಅಡುಗೆಯನ್ನು ಮಾಡಲು ಕಲಿಯಿರಿ.

No comments