Header Ads

test

ನೀವು 1990ಕ್ಕೂ ಮೊದಲು ಹುಟ್ಟಿದ್ದೀರಾ .. ಆದರೆ ಇದನ್ನೊಮ್ಮೆ ನೋಡಿ, ಖಂಡಿತ ನಿಮ್ಮ ಚಿಕ್ಕಂದಿನ ನೆನಪಿಗೆಜಾರುತ್ತೀರ..!

ಬದಲಾಗುತ್ತಿರುವ ಕಾಲದ ಜತೆಗೆ ಮನುಷ್ಯನು ಪ್ರಯಾಣ ಸಾಗಿಸುತ್ತಿದ್ದಾನೆ, ಹೊಸದಾಗಿ ಬಂದ ತಂತ್ರಜ್ಞಾನವನ್ನು ಸ್ವೀಕರಿಸುತ್ತಾ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದಾನೆ. ಮನುಷ್ಯನ ಜೀವನದಲ್ಲಿ ಅಸಾಧಾರಣ ಬದಲಾವಣೆಯನ್ನು ತಂದಿದ್ದು ಟಿವಿ ಎಂದು ಹೇಳಬಹುದು. ಟೆಲಿವಿಷನ್ ಬಂದ ಬಳಿಕ ಮಾನವ ಜಗತ್ತು ಸಂಪೂರ್ಣ ಬದಲಾಯಿತು. ಟಿವಿ ಎಂಬುದು ಇಲ್ಲದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಎಂದು ಒಮ್ಮೆ ಊಹಿಸಿಕೊಂಡರೇನೇ ಭಯವಾಗುತ್ತದೆ. ಸದ್ಯಕ್ಕೆ ನೂರು, ಸಾವಿರ ಚಾನಲ್‌ಗಳಿವೆ. ಕೇವಲ ಕನ್ನಡದಲ್ಲೇ ನೂರಾರು ಚಾನಲ್‌ಗಳು ಹುಟ್ಟಿಕೊಳ್ಳುತ್ತಿವೆ. ಆದರೆ ಮೂರು ದಶಕಗಳ ಹಿಂದೆ ಇದ್ದದ್ದು ಕೇವಲ ದೂದರ್ಶನ ಮಾತ್ರ.



1990 ರವರೆಗೂ ದೂರದರ್ಶನ ಪಟ್ಟಣಗಳಲ್ಲಿ ಮತ್ತು ಹಳ್ಳಿಗಳಲ್ಲಿ ವಿಪರೀತವಾಗಿತ್ತು. ಇಡೀ ಗ್ರಾಮಕ್ಕೆ ಒಂದೆರಡು ಟಿವಿಗಳಿದ್ದರೆ, ಅಲ್ಲಿಗೆ ಊರೆಲ್ಲಾ ಬಂದು ಕುಳಿತು ನೋಡುತ್ತಿದ್ದರು. ದೂರದರ್ಶನದಲ್ಲಿ ಬರುವ ವಾರ್ತೆಗಳು, ಚಿತ್ರಲಹರಿ ಹಾಡುಗಳು, ಭಾನುವಾರ ಬರುತ್ತಿದ್ದ ಸಿನಿಮಾ ಅಂದಿನ ಜನರು ಇಂದಿಗೂ ಮರೆತಿರಲ್ಲ. 1990ಕ್ಕೂ ಮೊದಲು ಹುಟ್ಟಿದವರು ಪ್ರತಿಯೊಬ್ಬರಿಗೂ ದೂರದರ್ಶನ ನೆನಪಿರುತ್ತದೆ. ದೂರದರ್ಶನದಲ್ಲಿ ದಿನಪೂರ್ತಿ ಕಾರ್ಯಕ್ರಮಗಳು ಬರುತ್ತಿರಲಿಲ್ಲ. ಕೆಲವು ಸಮಯಗಳಲ್ಲಿ ಮಾತ್ರ ಬರುತ್ತಿದ್ದವು. ಪ್ರಾದೇಶಿಕ ದೂದರ್ಶನ ವಾಹಿನಿಯಲ್ಲಿ ಬಹಳ ಕಡಿಮೆ ಸಮಯದ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು. ಆದರೆ ರಾಷ್ಟ್ರೀಯವಾಗಿ ಮಾತ್ರ ಹೆಚ್ಚು ಬರುತ್ತಿದ್ದವು.

ದೂರದರ್ಶನ ಚಾನಲ್ ನೋಡಿದ ಪ್ರತಿಯೊಬ್ಬರೂ ರಾತ್ರಿ ಏಳು ಗಂಟೆಗೆ ಬರುತ್ತಿದ್ದ ವಾರ್ತೆಗಳನ್ನು ನೋಡಿರುತ್ತೀರ. ಆಗ ಪ್ರಸಾರವಾಗುತ್ತಿದ್ದ ಕನ್ನಡ ವಾರ್ತೆಗಳನ್ನು ಕೇಳುವುದೇ ಒಂದು ಆನಂದ. ವಾರ್ತೆಗಳಿಗೂ ಮೊದಲು ಬರುತ್ತಿದ್ದ ಸಂಗೀತ ಈಗ ಕೇಳಿದರೆ ಹಳೆ ನೆನಪುಗಳು ಬರುವುದು ಗ್ಯಾರಂಟಿ. ವಾರ್ತೆಗಳ ಪ್ರಾರಂಭದ ಸಮಯದಲ್ಲಿ ಮುಖ್ಯಾಂಶಗಳನ್ನು ಹೇಳುವ ಸಮಯದಲ್ಲಿ ಸಹ ಬರುತ್ತಿದ್ದ ಸಂಗೀತವನ್ನು 1990ಕ್ಕೂ ಮೊದಲು ಹುಟ್ಟಿದವರು ಎಂದಿಗೂ ಮರೆಯಲ್ಲ.

ಆದರೆ ಈಗ ಆ ಸಂಗೀತ ಎಲ್ಲೂ ಕೇಳಿಸಲ್ಲ. ನಿಮಗಾಗಿ, ನಿಮ್ಮ ಹಳೆ ನೆನಪುಗಳನ್ನು ಮೆಲುಕು ಹಾಕಲು ಆ ಸಂಗೀತವನ್ನು ಇಲ್ಲಿ ನೀಡುತ್ತಿದ್ದೇ. ಕೆಳಗಿನ ವೀಡಿಯೋದಲ್ಲಿ ಆ ಹಳೆ ಸಂಗೀತವನ್ನು ಕೇಳಬಹುದು. 1990ಕ್ಕೂ ಮೊದಲು ಜನಿಸಿದ ನಿಮ್ಮ ಸ್ನೇಹಿತರು ಮತ್ತು ಅವರ ಸ್ನೇಹಿತರಿಗೂ ಸಹ ಈ ಅನುಭವವನ್ನು ಹಂಚಲು ಈ ವಿಷಯವನ್ನು ಹಂಚಿಕೊಳ್ಳಿ. ಇನ್ನೂ ನಿಮಗೆ ಏನೆಲ್ಲಾ ನೆನಪಾಗುತ್ತದೆ ಎಂಬುದನ್ನು ಕಾಮೆಂಟ್ ಬಾಕ್ಸ್‌ನಲ್ಲಿ ತಿಳಿಸಿ.

No comments