Header Ads

test

18 ವರ್ಷದ ಯುವತಿಯ ಮದುವೆ ನಿಲ್ಲಲು ಫೇಸ್ ಬುಕ್ ಪೋಸ್ಟ್ ಕಾರಣ...! ಹೇಗೆಂದು ಗೊತ್ತಾ...? ಆ ಪೋಸ್ಟ್ಯಾವುದು..?

ಅನಾದಿ ಕಾಲದಿಂದಲೂ ಬಾಲ್ಯ ವಿವಾಹಗಳು ನಮ್ಮಲ್ಲಿ ನಡೆಯುತ್ತಿವೆ. ಇಂದಿಗೂ ಈ ಪದ್ಧತಿ ಮುಂದುವರೆದಿದ್ದು, ಕೆಲವು ಕಡೆ ಈಗಲೂ ಬಾಲ್ಯ ವಿವಾಹಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇದರಿಂದಾಗಿ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿಕೊಂಡವರ ಬದುಕು ನರಕ ಸದೃಶ್ಯವಾಗುತ್ತಿದೆ. ಒಂದು ವೇಳೆ ಗಂಡ ಮರಣಿಸಿದರೆ, ಅ ಹುಡುಗಿ ಜೀವನ ಪೂರ್ತಿ ಕಷ್ಟಗಳನ್ನು ಅನುಭವಿಸಲೇ ಬೇಕು. ಇದನ್ನರಿತಿದ್ದ ಒಬ್ಬ ಹುಡುಗಿ ತನ್ನ ಬಾಲ್ಯದಲ್ಲಿ ಜರುಗಿದ್ದ ವಿವಾಹವನ್ನು ಚಾಣಾಕ್ಷತೆಯಿಂದ ನ್ಯಾಯಾಲಯದಲ್ಲಿ ರದ್ದು ಮಾಡಿಸಿದ್ದಾಳೆ. ಆಕೆ ಈಗ ಉನ್ನತ ವಿದ್ಯಾಭ್ಯಾಸ ಮಾಡಿ ತನ್ನ ಗುರಿ ಸಾಧಿಸುವ ಹಾದಿಯಲ್ಲಿದ್ದಾಳೆ.


ಆಕೆಯ ಹೆಸರು ಸುಶೀಲ. ರಾಜಸ್ಥಾನ್ ರಾಜ್ಯದ ಜೋಧ್ ಪೂರ್ ನವಳು. ಈಕೆ 12 ನೇ ವಯಸ್ಸಿನವಳಾಗಿದ್ದಾಗ ಅದೇ ಊರಿನ ನರೇಶ್ ನೊಂದಿಗೆ 2010 ರಲ್ಲಿ ಈಕೆಯ ವಿವಾಹವನ್ನು ನೆರವೇರಿಸಲಾಯಿತು. ಸುಶೀಲ ಇನ್ನೂ ಚಿಕ್ಕವಳಾಗಿದ್ದರಿಂದ ತಾಯಿಯ ಮನೆಯಲ್ಲೇ ಇರುತ್ತಿದ್ದಳು. 18 ವರ್ಷದವಳಾದಾಗ ಈಕೆಯನ್ನು ಅತ್ತೆ ಮನೆಯಲ್ಲಿ ಬಿಡಲು ತವರು ಮನೆಯವರು ಎಲ್ಲಾ ಏರ್ಪಾಡುಗಳನ್ನು ಮಾಡಿಕೊಂಡರು. ಆದರೆ, ಅತ್ತೆ ಮನೆಗೆ ಹೋಗಲು ಸುಶೀಲಳಿಗೆ ಸುತಾರಾಂ ಇಷ್ಟವಿರಲಿಲ್ಲ. ತನ್ನ ಮನದ ಇಂಗಿತವನ್ನು ತಂದೆ ತಾಯಿಗೆ ತಿಳಿಸಿದಳು. ತಾನು ವಿದ್ಯಾಭ್ಯಾಸ ಮುಂದುವರೆಸುವುದಾಗಿ, ಅತ್ತೆ ಮನೆಗೆ ಕಳುಹಿಸುವುದು ಬೇಡವೆಂದಳು. ಇದಕ್ಕೆ ಅವರು ಒಪ್ಪಲಿಲ್ಲ. ಸುಶೀಲಳನ್ನು ಅತ್ತೆ ಮನೆಗೆ ಸೇರಿಸಲು ಅನುವಾದರು.

ಇದರಿಂದ ಮನನೊಂದ ಸುಶೀಲ 27 ಏಪ್ರಿಲ್ 2016 ರ ಮಧ್ಯರಾತ್ರಿ ಮನೆಯಿಂದ ಹೊರಟು, ಜೋಧ್ ಪುರ್ ಚೈಲ್ಡ್ ವೆಲ್ಫೇರ್ ಕಮಿಟಿ ಸದಸ್ಯೆಯಾದ ಕೃತಿ ಭಾರತಿ ಯವರ ಸಹಾಯದಿಂದ ರೀಹ್ಯಾಬಿಲಿಟೇಶನ್ ಸೆಂಟರ್ ನಲ್ಲಿ ಸೇರಿದಳು. ತನಗೆ 12 ವರ್ಷ ವಯಸ್ಸಿಗೇ ಮದುವೆ ಮಾಡಿದರೆಂದು, ನನಗೆ ಆ ಮದುವೆ ಇಷ್ಟವಿಲ್ಲವೆಂದು , ಈಗ ಮೇಜರ್ ಆಗಿರುವುದರಿಂದ ಆ ಮುದುವೆಯನ್ನು ರದ್ದು ಮಾಡಬೇಕೆಂದು ನ್ಯಾಯಾಲಯವನ್ನು ಕೋರಿದಳು. ಆದರೆ, ಮದುವೆಯಾಗಿರುವುದಕ್ಕೆ ಸೂಕ್ತ ಪುರಾವೆಯನ್ನು ಒದಗಿಸಲು ನ್ಯಾಯಾಲಯ ಸೂಚಿಸಿತು. ಅಂತಹ ಯಾವುದೇ ಸಾಕ್ಷ್ಯಾಧಾರಗಳು ಸುಶೀಲಳ ಬಳಿ ಇರಲಿಲ್ಲ. ಈ ನಿಟ್ಟಿನಲ್ಲಿ ಸುಶೀಲ ತನ್ನ ಗಂಡನ ಫೇಸ್ ಬುಕ್ ಖಾತೆಯನ್ನು ಜಾಲಾಡಿದಳು. ಅದರಲ್ಲಿ ಅವಳ ,ಮದುವೆಗೆ ಸಂಬಂಧಿಸಿದ ಫೋಟೊಗಳು ದೊರೆತವು. ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಮದುವೆಯನ್ನು ರದ್ದುಗೊಳಿಸುವಲ್ಲಿ ಯಶಸ್ವಿಯಾದಳು. ಈಗ ಆಕೆ ತನ್ನ ಪಾಡಿಗೆ ತಾನು ಸಂತೋಷದಿಂದ ಜೀವಿಸುತ್ತಿದ್ದಾಳೆ. ಉನ್ನತ ವಿದ್ಯಾಭ್ಯಾಸ ನಡೆಸುತ್ತಿದ್ದಾಳೆ. ಇನ್ನೂ ಎತ್ತರಕ್ಕೆ ಏರಬೇಕೆಂಬ ಇಚ್ಛೆ ಇರುವುದಾಗಿ ತಿಳಿಸಿದ್ದಾಳೆ. ಪೊಲೀಸ್ ಅಧಿಕಾರಿಯಾಗಬೇಕೆಂಬ ಇಚ್ಛೆಯನ್ನು ನೆರವೇರಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಆಕೆಯ ಕನಸು ನನಸಾಗಲೆಂದು ನಾವು ಆಸಿಸೋಣ. ಏನೇ ಆಗಲಿ ಈ ವಿಷಯದಲ್ಲಿ ಸುಶೀಲ ಅಭಿನಂದನಾರ್ಹಳು.!

No comments