Header Ads

test

ಈ ಗುಡಿಯಲ್ಲಿ ಯುವತಿಯರನ್ನು ನಗ್ನವಾಗಿಸಿ 15 ದಿನಗಳ ಕಾಲ ಏನು ಮಾಡುತ್ತಾರೆ ಗೊತ್ತಾ?

ಮದುವೆಯಾಗದ ಯುವತಿಯರನ್ನು ಕನ್ಯೆ ಎಂದು ಕರೆಯುತ್ತಾರೆಂದು ಎಲ್ಲರಿಗೂ ಗೊತ್ತೇ ಇದೆ. ಆದರೆ ಕನ್ಯೆಯರಿಗೆಂದೇ ಕೆಲವು ಮಂದಿರಗಳನ್ನು ನಿರ್ಮಿಸಿದ್ದಾರೆಂಬ ಸಂಗತಿ ನಿಮಗೆ ಗೊತ್ತೇ. ಆ ಆಲಯಗಳಲ್ಲಿ ಕನ್ಯೆಯರನ್ನು ಕರೆತಂದು ದೇವರಂತೆ ಬದಲಾಯಿಸಿ ಪೂಜೆ ಮಾಡುತ್ತಾರೆ. ಅದೇ ರೀತಿಯ ಒಂದು ಗುಡಿಗೆ ಕನ್ಯೆಯರನ್ನು ಕರೆತಂದು ಏನು ಮಾಡುತ್ತಾರೆ ಎಂಬುದನ್ನು ಈಗ ನೋಡೋಣ. ಆ ಗುಡಿಗೆ ಕನ್ಯೆಯರನ್ನು ಕರೆತಂದು ಮೈ ಮೇಲೆ ಒಂಚೂರು ಬಟ್ಟೆ ಇಲ್ಲದಂತೆ ಮಾಡಿ ಅವರಿಗೆ 15 ದಿನಗಳ ಕಾಲ ಪೂಜೆ ಮಾಡುತ್ತಾರೆ. ಕೇಳಿದರೇನೇ ವಿಚಿತ್ರ ಅನ್ನಿಸುತ್ತದೆ ಅಲ್ಲವೇ? ಹಾಗಿದ್ದರೆ ಆ ಆಲಯದ ಬಗ್ಗೆ, ಆ ರೀತಿ ಯಾಕೆ ಮಾಡುತ್ತಾರೆ ಎಂಬುದನ್ನು ಈಗ ತಿಳಿದುಕೊಳ್ಳೋಣವೇ?



ತಮಿಳುನಾಡಿನ ಮಧುರೈನ ಒಂದು ಆಲಯದಲ್ಲಿ ಸಂಪ್ರದಾಯದ ಹೆಸರಿನಲ್ಲಿ ಈ ರೀತಿಯ ವಿಚಿತ್ರ, ಅನಾಗರೀಕ ಆಚರಣೆ ನಡೆಯುತ್ತಿದೆ. ಗುಡಿಯಲ್ಲಿ ಏಳು ಮಂದಿ ಯುವತಿಯರನ್ನು ಅರೆ ನಗ್ನವಾಗಿ ನಿಲ್ಲಿಸಿದರು. ಅವರ ಎದೆ ಮೇಲೆ ಯಾವುದೇ ಬಟ್ಟೆ ಇಲ್ಲದಂತೆ ಕೇವಲ ಕೆಲವು ಆಭರಣ ಮಾತ್ರ ಅಲಂಕರಿಸಿ 15 ದಿನಗಳ ಕಾಲ ಆಲಯದಲ್ಲಿ ನಿಲ್ಲಬೇಕೆಂದು ಗ್ರಾಮದ ಹಿರಿಯರು ಆದೇಶಿಸಿದ್ದರಂತೆ. ಅದೂ ಸಹ ಪುರುಷ ಪೂಜಾರಿ ನೇತೃತ್ವದಲ್ಲಿ ಇವರೆಲ್ಲಾ ಅರೆ ನಗ್ನವಾಗಿ ಇರಬೇಕಾಯಿತು. ವಿಚಿತ್ರ ಎಂದರೆ ಈ ಯುವತಿಯರು ಯೌವನದಲ್ಲಿರುವವರು. ಇದು ಎಂದಿನಿಂದಲೋ ಪಾಲಿಸುತ್ತಿರುವ ಆಚಾರ ಎಂದು, ಇವರ ತಂದೆತಾಯಿಯೇ ಸ್ವಚ್ಛಂದ ಮನಸ್ಸಿನಿಂದ ತಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಾರಂತೆ. ಇಲ್ಲಿರುವ ಯಾರೂ ಇದಕ್ಕೆ ಅಡ್ಡಿ ಪಡಿಸಲ್ಲ. ಇನ್ನೂ ಹೇಳಬೇಕು ಎಂದರೆ, ತುಂಬಾ ಅದ್ದೂರಿಯಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ನಾವು ಯಾವುದಾದರೂ ಗುಡಿಗೆ ಹೋದರೆ ಅಲ್ಲಿ ನಗ್ನ ಚಿತ್ರಗಳು ಕಾಣಿಸುತ್ತವೆ. ಅವುಗಳ ಪ್ರೇರಣೆ ಆಧಾರವಾಗಿ ಈ ಆಚಾರ ಬಂದಿದೆ ಎಂದು ಅಲ್ಲಿನವರು ಹೇಳುತ್ತಿದ್ದಾರೆ. ಆಗ ತಮಿಳುನಾಡನ್ನು ಪಾಲಿಸಿದ ಒಬ್ಬ ರಾಜ ಆ ಶಿಲ್ಪಗಳನ್ನು ಪ್ರೇರಣೆಯಾಗಿ ತೆಗೆದುಕೊಂಡು ಈ ಆಚಾರ ಆರಂಭಿಸಿದನಂತೆ. ಕನ್ಯೆಯರನ್ನು ನಗ್ನವಾಗಿ ನಿಲ್ಲಿಸಿ ಪೂಜೆ ಮಾಡಬೇಕು ಎಂಬ ನಿಯಮವನ್ನು ಮಾಡಿದನಂತೆ. ಹಾಗಾಗಿ ಅಲ್ಲಿನ ಜನ ಇನ್ನೂ ಇದನ್ನು ಆಚರಿಸುತ್ತಿದ್ದಾರೆ.

ಇಷ್ಟು ದಿನಗಳ ಕಾಲ ಇವರು ಅರೆ ನಗ್ನವಾಗಿ ಇದ್ದರೂ ಇವರ ಮೇಲೆ ಯಾವುದೇ ಲೈಂಗಿಕ ದಾಳಿ, ಅಸಭ್ಯ ವರ್ತನೆ ನಡೆಯಲ್ಲ. ಅವರನ್ನು ಪೂಜಿಸಿದರೆ ಬೇಡಿಕೊಂಡ ವರಗಳು ನೆರವೇರುತ್ತವೆ ಎಂಬ ನಂಬಿಕೆ. ಸುಮಾರು 60ಕ್ಕೂ ಹೆಚ್ಚು ಗ್ರಾಮದವರು ಈ ರೀತಿ ಕನ್ಯೆಯರನ್ನು ದೇವತೆಗಳಂತೆ ಭಾವಿಸುತ್ತಾರೆ. ಈ ಗುಡಿಗೆ ಕರೆಸಿ ಪೂಜಿಸುವ ಆಚಾರ ಅದೆಷ್ಟೋ ವರ್ಷಗಳಿಂದ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಈ 15 ದಿನಗಳು ಆ ಹೆಣ್ಣು ಮಕ್ಕಳನ್ನು ಪೂಜಾರಿ ನೋಡಿಕೊಳ್ಳುತ್ತಾನೆ. ದೇವರಂತೆ ಅವರನ್ನು ಪೂಜಿಸುತ್ತಾರೆ. ಈ 15 ದಿನಗಳ ಕಾಲ ತಂದೆತಾಯಿಯಿಂದ ದೂರ ಇರಬೇಕು. ಅವರನ್ನು ಭೇಟಿಯಾಗಲು ಸಾಧ್ಯವಾಗಲ್ಲ. ಆದರೆ ಮಕ್ಕಳನ್ನು ಪೂರ್ಣವಾಗಿ ನಗ್ನಗೊಳಿಸದೆ ಅವರ ಜನನೇಂದ್ರಿಯಗಳ ಬಗ್ಗೆ ಬಟ್ಟೆ ಮುಚ್ಚುತ್ತಾರೆ. ಉಳಿದ ಭಾಗವೆಲ್ಲ ನಗ್ನವಾಗಿ ಇರುತ್ತದೆ. ಈ ಬಗ್ಗೆ ಅಲ್ಲಿನ ಕೆಲವರು ಪ್ರತಿಭಟಿಸುತ್ತಿದ್ದಾರೆ. ಈ ಆಚಾರ ಕೈ ಬಿಡಬೇಕು ಎಂಬುದು ಅವರ ವಾದ. ನೋಡೋಣ ಈ ಆಚಾರವನ್ನು ಯಾವಾಗ ಕೈಬಿಡುತ್ತಾರೋ ಎಂದು.

No comments