Header Ads

test

15 ನೇ ತಾರೀಖು ಹುಟ್ಟಿದ್ದೀರಾ... ಆದರೆ ನಿಮ್ಮ ಬಲ, ಬಲಹೀನತೆ, ಅದೃಷ್ಟ ಬಗ್ಗೆ ತಿಳಿದುಕೊಳ್ಳಿ

ಅದು ಯಾವುದೇ ವರ್ಷವಾದರೂ ಆಗಬಹುದು, ಯಾವುದೇ ತಿಂಗಳು ಆಗಿರಬಹುದು ಹುಟ್ಟಿದ ದಿನಾಂಕ ಮಾತ್ರ 15 ಆಗಿದ್ದರೆ ಸಾಕು ಅವರಿಗೆ ಯಾವ ರೀತಿಯ ಲಕ್ಷಣಗಳು ಇರುತ್ತವೆ ಎಂಬುದನ್ನು ಸಂಖ್ಯಾಶಾಸ್ತ್ರದ ಪ್ರಕಾರ ಈಗ ತಿಳಿದುಕೊಳ್ಳೋಣ. ಒಂದಕ್ಕೆ ಅಧಿಪತಿ ಸೂರ್ಯ. ಐದಕ್ಕೆ ಅದಿಪತಿ ಬುಧ. ಈ ಎರಡೂ ಕೂಡಿದರೆ ಬರುವ ಸಂಖ್ಯೆ 6ಕ್ಕೆ ಅಧಿಪತಿ ಶುಕ್ರ ಗ್ರಹ. ಒಟ್ಟಾರೆ 15ನೇ ದಿನಾಂಕದಂದು ಜನಿಸಿದವವ್ರು ಶುಕ್ರ ಗ್ರಹದ ಅಧೀನದಲ್ಲಿ ಇರುತ್ತಾರೆ. ಇವರು ಯಾವುದೇ ಕ್ಷೇತ್ರದಲ್ಲಿ ಇದ್ದರೂ ಸರಿ ಪ್ರತಿಭೆಯಿಂದ ಮುಂದೆ ಬರುತ್ತಾರೆ ಎಂದು ಸಂಖ್ಯಾಶಾಸ್ತ್ರಜ್ಞರು ಹೇಳುತ್ತಿದ್ದಾರೆ.ಇನ್ನು 15ರಂದು ಜನಿಸಿದವರ ಆಕಾರ, ರೂಪ, ಡ್ರೆಸ್ ಕೋಡ್ ನೋಡಿದ ಕೂಡಲೆ ಹತ್ತು ಮಂದಿಯನ್ನು ಆಕರ್ಷಿಸುವಂತೆ ಇರುತ್ತಾರೆ. ಎಲ್ಲರಲ್ಲಿ ವಿಶೇಷ ಸ್ಥಾನಮಾನ ಪಡೆಯುತ್ತಾರೆ. ಕಲೆ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೆ. ಕಲೆಯನ್ನು ಆರಾಧಿಸುತ್ತಾರೆ. ಪ್ರತಿಯೊಂದನ್ನೂ ಕ್ರಿಯೇಟೀವ್ ಆಗಿ ಆಲೋಚಿಸಿ, ಜಾರಿಗೆ ತರುವುದರಿಂದ ಸುಲಭವಾಗಿ ಜಯಶೀಲರಾಗುತ್ತಾರೆ.

ಇವರಿಗೆ ಒಳ್ಳೆಯ ವಾಕ್ ಚಾತುರ್ಯವನ್ನು ಭಗವಂತ ಕೊಟ್ಟ ವರ ಎಂದು ಹೇಳಬಹುದು. ಹತ್ತು ಮಂದಿಯನ್ನು ಒಪ್ಪಿಸುವಲ್ಲಿ ಮುಂದಿರುತ್ತಾರೆ. ಐಶ್ವರ್ಯ ಅದಷ್ಟಕ್ಕದೇ ಬರುತ್ತದೆ. ಬೇರೆಯಾರ ಬಳಿ ಹೋಗಿ ಕೇಳದೇನೇ ಇವರನ್ನು ಹುಡುಕಿಕೊಂಡು ಬರುತ್ತವೆ. ಚಿಕ್ಕ ಕುಟುಂಬದಲ್ಲಿ ಜನಿಸಿದರೂ ಸರಿ, ಯಾವುದೇ ವೃತ್ತಿಯಲ್ಲಿ ಇದ್ದರೂ ಸರಿ, ಕಡಿಮೆ ಸಮಯದಲ್ಲಿ ಅತ್ಯಂತ ಎತ್ತರಕ್ಕೇರುತ್ತಾರೆ.

ಯಾವುದನ್ನಾದರೂ ಚರ್ಚೆಗೆ ಇಟ್ಟರೆ, 15ನೇ ದಿನಾಂಕದಂದು ಜನಿಸಿದವರು ಗೆಲ್ಲುತ್ತಾರೆ. ಒಂದು ವೇಳೆ ಗೊತ್ತಿಲ್ಲದಿದ್ದರೆ ಸೂಕ್ಷ್ಮವಾಗಿ ಅದರಿಂದ ಹೊರಬರುವ ಪ್ರಯತ್ನ ಮಾಡುತ್ತಾರೆ. ಬೇರೆಯವನ್ನು ಸೇರಲ್ಲ ಎಂದು ಹೇಳುತ್ತಾರೆ. ಏನನ್ನಾದರೂ ಕಲಿಯಬೇಕು ಎಂದರೆ, ಕೂಡಲೆ ಕಲಿಯುತ್ತಾರೆ. ಬುದ್ಧಿ ಕುಶಲತೆ ಇರುತ್ತದೆ. ಇನ್ನು ಕೆಲವು ವ್ಯಸನಗಳಲ್ಲಿ ಮುಳುಗುವುದು, ಇಂದ್ರಿಯ ನಿಯಂತ್ರಣ ಕಳೆದುಕೊಳ್ಳುವುದರಿಂದ ಜೀವನದಲ್ಲಿ ಕೆಳಕ್ಕೆ ಇಳಿಯುತ್ತಾರೆಂದು ತಜ್ಞರು ಹೇಳುತ್ತಿದ್ದಾರೆ. ಹಾಗಾಗಿ ಕೆಟ್ಟ ಅಭ್ಯಾಸಗಳನ್ನು ನಿಯಂತ್ರಿಸಿಕೊಳ್ಳಬೇಕು.

ಮುಖ್ಯವಾಗಿ 6 ನೇ ಸಂಖ್ಯೆಗೆ ಶುಕ್ರಗ್ರಹ ಅಧಿಪತಿಯಾಗಿರುವುದರಿಂದ ಲಕ್ಷ್ಮೀ ದೇವಿಯ ಪೂಜೆ ಆರಾಧನೆ ಮಾಡಬೇಕು ಮತ್ತು ಲಕ್ಷ್ಮೀ ಅಷ್ಟೋತ್ತರ ಶ್ರೀ ಸೂಕ್ತವನ್ನು ಪಠನೆ ಮಾಡಬೇಕು. ಈ ರೀತಿ ಮಾಡುವುದರಿಂದ ಎಲ್ಲವೂ ಶುಭವಾಗುತ್ತದೆ. ಹಾಗಾಗಿ ಸಂಖ್ಯಾಶಾಸ್ತ್ರ ಎಂಬುದು ಬಹಳ ಮುಖ್ಯ. ಜ್ಯೋತಿಷ್ಯದಂತೆ ಸಂಖ್ಯಾಶಾಸ್ತ್ರವೂ ಪರಿಣಾಮಕಾರಿಯಾಗಿದೆ. ಸಾಕಷ್ಟು ಮಂದಿ ಸೆಲೆಬ್ರಿಟಿಗಳು 15ಕ್ಕೇ ಜನಿಸಿದ್ದಾರೆ. ಉದಾಹರಣೆಗೆ ಬಾಲಿವುಡ್‍ನ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ನೆನೆ.

No comments