Header Ads

test

12 ವರ್ಷಗಳ ಹಿಂದೆ ಮಿಸ್ ಆದ ಉಂಗುರ, ಮೂಗಿನಲ್ಲಿ ಸಿಕ್ಕಿತು... ಜಗತ್ತಿನಲ್ಲೇ ಅತ್ಯಂತ ವಿಚಿತ್ರ ಘಟನೆ ಇದು..!

ಯಾವುದಾದರೂ ಒಂದು ವಸ್ತುವನ್ನು ಕಳೆದುಕೊಂಡರೆ ಸಿಗುವುದು ಕಷ್ಟ. ಕಳೆದುಕೊಂಡು ಒಂದು ತಿಂಗಳು ಆಗಿದೆ ಎಂದರೆ ಅದನ್ನು ಹುಡುಕುವುದನ್ನು ಸಹ ಬಿಟ್ಟು ಬಿಡುತ್ತೇವೆ. ಯಾಕೆಂದರೆ ತಿಂಗಳಾದರೂ ವಸ್ತು ಸಿಗಲಿಲ್ಲ ಎಂದರೆ ಇನ್ನು ಸಿಗೋದೇ ಇಲ್ಲ ಎಂದು ಗೊತ್ತಾಗುತ್ತದೆ. ಶೇ.99ರಷ್ಟು ವಸ್ತುಗಳು ತಿಂಗಳು ಕಳೆದ ಬಳಿಕ ಸಿಗಲ್ಲ. ಹಾಗಾಗಿಯೇ ತಿಂಗಳುಗಳು ಕಳೆದ ಬಳಿಕ ಹೋದ ವಸ್ತುಗಳ ಬಗ್ಗೆ ಹುಡುಕಾಡುವುದು ಸಮಯ ವ್ಯರ್ಥ. ಕೈ ಬೆರಳಿಗೆ ತೊಡುವ ಉಂಗುರ ಹೋಯಿತು ಎಂದರೆ ಮನೆಯಲ್ಲಿ ಕಳೆದುಕೊಂಡರೆ ಏನೋ ಎತ್ತೋ... ಹೊರೆಗೆ ಹೋದರೆ ಮಾತ್ರ ಎರಡು ದಿನಗಳ ಬಳಿಕ ಸಿಗುವುದು ಕಷ್ಟ. ಆದರೆ ಓರ್ವ ಹುಡುಗಿ ತನ್ನ ಉಂಗುರವನ್ನು ಕಳೆದುಕೊಂಡು ಸುಮಾರು 12 ವರ್ಷಗಳ ಬಳಿಕ ಹುಡುಕಿಕೊಂಡಿದ್ದಾಳೆ. ಚಿಕ್ಕಂದಿನಲ್ಲಿ ಕಳೆದುಹೋಗಿದ್ದ ಉಂಗುರ ದೊಡ್ಡವಳಾದ ಬಳಿಕ ಸಿಕ್ಕಿದ ಕಾರಣ ಆಕೆಯ ಆನಂದಕ್ಕೆ ಪಾರವೇ ಇರಲಿಲ್ಲ. ಆದರೆ ಈ 12 ವರ್ಷದ ಆ ಉಂಗರ ಬೇರೆಲ್ಲೂ ಅಲ್ಲ, ಆಕೆ ಮೂಗಿನಲ್ಲೇ ಪತ್ತೆಯಾಗಿದೆ.



ಈ ವಿಚಿತ್ರ ಘಟನೆ ಬ್ರಿಟನ್‌ನಲ್ಲಿ ನಡೆದಿದೆ. ಸಂಪೂರ್ಣ ವಿವರಗಳನ್ನು ನೋಡುವುದಾದರೆ... ಬ್ಯೂಟಿಷಿಯನ್ ಆದ ಅಬಿಗೈಲ್ ಥಾಂಪ್ಸನ್‌ಗೆ ಕೆಲವು ದಿನಗಳಿಂದ ಮೂಗು ನೋವು ಅನ್ನಿಸುತ್ತಿತ್ತಂತೆ. ಆದರೆ ಆಕೆ ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇತ್ತೀಚೆಗೆ ಆಕೆ ತನ್ನ ಮೂಗನ್ನು ಟಿಶ್ಯೂ ಕಾಗದದಲ್ಲಿ ಕ್ಲೀನ್ ಮಾಡಿಕೊಳ್ಳುತ್ತಿದ್ದ ಸಮಯದಲ್ಲಿ ಮೂಗಿನಿಂದ ಉಂಗುರ ಕೆಳಗೆ ಬಿದ್ದಿದೆ. ಇದರಿಂದ ಶಾಕ್ ಆದ ಆಕೆ ವಿಷಯವನ್ನು ತನ್ನ ತಾಯಿಗೆ ತಿಳಿಸಿದ್ದಾರೆ. ಆ ತಾಯಿ ಚಿಕ್ಕಂದಿನಲ್ಲಿ ನಡೆದಿದ್ದ ಸಂಗತಿಯನ್ನು ಹೇಳಿದ ಕಾರಣ ಆ ಉಂಗುರ ತನ್ನದೇ ಎಂದು ಆಕೆ ನೆನಪು ಮಾಡಿಕೊಂಡಿದ್ದಾಳೆ.

2007ನೇ ವರ್ಷದಲ್ಲಿ ಅಬಿಗೈಲ್‌ಳ 8ನೇ ಹುಟ್ಟುಹಬ್ಬ ಸಂದರ್ಭದಲ್ಲಿ ಆಕೆ ತಾಯಿ ಒಂದು ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಳು. ಆ ಉಂಗುರವನ್ನು ಅಬಿಗೈಲ್ ಹಾಕಿಕೊಂಡು ನಿದ್ದೆ ಮಾಡುತ್ತಿದ್ದ ಸಮಯದಲ್ಲಿ ಒಂದು ದಿನ ರಾತ್ರಿ ಮೂಗಿನೊಳಕ್ಕೆ ಹೋಗಿತ್ತು. ನಿದ್ರಿಸುವ ಸಮಯದಲ್ಲಿ ಅಬಿಗೈಲ್‍ಗೆ ಮೂಗಿನಲ್ಲಿ ಬೆರಳಿಟ್ಟುಕೊಳ್ಳುವ ಅಭ್ಯಾಸ ಇತ್ತಂತೆ. ಹಾಗಾಗಿ ಆ ಅಭ್ಯಾಸ ಕಾರಣದಿಂದ ಮೂಗಿನಲ್ಲಿ ಉಂಗುರ ಹೋಗಿರುತ್ತದೆ ಎಂದು ತಾಯಿ ಅಭಿಪ್ರಾಯಪಟ್ಟಿದ್ದಾರೆ.

ಚಿಕ್ಕಂದಿನಲ್ಲಿ ಅಬಿಗೈಲ್ ಎಲ್ಲೋ ಉಂಗುರ ಕಳೆದುಕೊಂಡಿದ್ದಾಳೆಂದು ತಾನು ಭಾವಿಸಿದೆ. ಮೂಗಿನಲ್ಲೇ ಉಂಗುರ ಹೋಗಿರುತ್ತದೆ ಎಂದು ತಾನು ಅಂದುಕೊಂಡಿರಲಿಲ್ಲ ಎಂದು ಹೇಳಿದಳು. ಅಬಿಗೈಲ್ ಮಾತ್ರ ಇಷ್ಟು ದಿನಗಳ ಕಾಲ ನನ್ನ ಮೂಗಿನಲ್ಲೇ ಉಂಗುರ ಇದ್ದರೂ ಯಾವುದೇ ಸಮಸ್ಯೆಯಾಗಿರಲಿಲ್ಲ. ಮೂಗಿನಲ್ಲಿ ಏನೋ ಇದ್ದಂಗೂ ಅನ್ನಿಸಿರಲಿಲ್ಲ.. ಹಾಗಿದ್ದರೆ ಈಗ ಹೇಗೆ ಹೊರಬಂತೋ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾಳೆ. ಒಟ್ಟಾರೆ 12 ವರ್ಷಗಳ ಬಳಿಕ ಮೂಗಿನಿಂದ ಉಂಗುರ ಹೊರಗೆ ಬಂದ ಕಾರಣ ಅಬಿಗೈಲ್ ಒಮ್ಮೆಲೆ ಜಗತ್ತಿನಾದ್ಯಂತ ಫೇಮಸ್ ಆಗಿದ್ದಾರೆ.

No comments