ಕಡ್ಡಾಯವಾಗಿ ತೂಕ ಕಡಿಮೆಯಾಗಬೇಕು ಎಂದುಕೊಂಡರೆ ಬೆಳಗ್ಗೆ 11 ಗಂಟೆಗೆ ಅಥವಾ ಸಂಜೆ 6 ಗಂಟೆಗೆ ಇದನ್ನುಕುಡಿದರೆ ಖಂಡಿತ ತೆಳ್ಳಗಾಗುತ್ತೀರ..!!
ರಾಗಿ ತಿಂದೋನು ನಿರೋಗಿ, ಹಿಟ್ಟಂ ತಿಂದಂ ಬೆಟ್ಟಂ ಕಿತ್ತಂ ಎಂಬ ಮಾತು ಕೇಳಿಯೇ ಇರುತ್ತೀರ. ರಾಗಿಯಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪ್ರೋಟೀನ್, ಎ, ಬಿ ವಿಟಮಿನ್ಸ್ ಲಭಿಸುತ್ತವೆ. ಫಾಸ್ಪರಸ್ನಂತಹ ಪೋಷಕಾಂಶಗಳು, ಫೈಬರ್ ಅಂಶಗಳು ಇರುತ್ತವೆ. ರಾಗಿ ಸರಿ ನಿಧಾನಕ್ಕೆ ಜೀರ್ಣವಾಗುತ್ತದೆ. ಇದರಿಂದ ಹೆಚ್ಚು ಹೊತ್ತು ಹೊಟ್ಟೆ ತುಂಬಿದಂತೆ ಇರುತ್ತದೆ. ಹಸಿವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗದವರು ಇದನ್ನು ಕುಡಿದರೆ ಹೆಚ್ಚು ಆಹಾರ ತಿನ್ನಬೇಕು ಅನ್ನಿಸಲ್ಲ. ಬೆಳಗ್ಗೆ ಬ್ರಷ್ ಮಾಡಿದ ಕೂಡಲೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ನೀರು ಕುಡಿದರೆ ಬೇಗ ಇತರೆ ಪದಾರ್ಥಗಳನ್ನು ತಿನ್ನಬೇಕು ಅನ್ನಿಸಲ್ಲ. ಬೆಳಗ್ಗೆ ಬ್ರಷ್ ಮಾಡಿದ ಕೂಡಲೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ನೀರಿನಲ್ಲಿ ಆಲೋವೆರಾ ಜ್ಯೂಸ್ ಒಂದು ಮುಚ್ಚಳ ಬೆರೆಸಿಕೊಂಡು ಕುಡಿಯಬೇಕು. ಒಂದು ಗಂಟೆ ಬಳಿಕ ರಾಗಿ ಸರಿಯನ್ನು ತಯಾರಿಸಿಕೊಂಡು ಒಂದು ಗ್ಲಾಸ್ ರಾಗಿ ಸರಿ ತೆಗೆದುಕೊಳ್ಳಬೇಕು. ಉಪ್ಪನ್ನು ಅಲ್ಪ ಪ್ರಮಾಣದಲ್ಲಿ ಹಾಕಿಕೊಳ್ಳಬೇಕು. ಹಾಕಿಕೊಳ್ಳದಿದ್ದರೆ ಇನ್ನೂ ಉತ್ತಮ.
ಪ್ರಯೋಜನಗಳು:
- ಬೆಳಗಿನ ಉಪಹಾರಕ್ಕೆ ಒಂದು ಅಥವಾ ಎರಡು ಹಣ್ಣುಗಳು ನಿಮಗೆ ಲಭ್ಯವಿರುವಂತಹವು ತಿನ್ನಿ. ಮಧ್ಯಾಹ್ನ ಸಾಧಾರಣ ಭೋಜನ ಮಾಡಿ. ಎಣ್ಣೆ ಪದಾರ್ಥಗಳು ಕಡಿಮೆ ಇದ್ದರೆ ಒಳಿತು. ಮತ್ತೆ ರಾತ್ರಿ ಊಟದ ಸಮಯದಲ್ಲಿ ಸುಲಭವಾಗಿ ಜೀರ್ಣವಾಗುವಂತಹವನ್ನು ತಿನ್ನಿ. ಅನ್ನ ಒಂದು ಅಥವಾ ಎರಡು ಕಪ್ ತೆಗೆದುಕೊಳ್ಳಿ.
- ಸ್ವಲ್ಪ ಹಸಿವು ಅನ್ನಿಸಿದರೆ ಅದಕ್ಕೆ ಸರಿಹೊಂದುವ ಹಣ್ಣುಗಳನ್ನು ತಿನ್ನಿ. ಹಸಿವನ್ನು ತಡೆದುಕೊಳ್ಳುವ ಶಕ್ತಿ ಇದ್ದರೆ ಎರಡು ರಾಗಿ ರೊಟ್ಟಿ ಅಥವಾ ಚಪಾತಿ ತಿನ್ನಿ. ನಡುವೆ ಟೀ, ಕಾಫಿಗಳಿಂದ ದೂರ ಇರಿ.
- ಅಗತ್ಯ ಅನ್ನಿಸಿದರೆ ಗ್ರೀನ್ ಟೀ ಸೇವಿಸಿ. ಈ ಪ್ರಕ್ರಿಯೆ ಪ್ರಾರಂಭಿಸಿದಾಗ ನಿಮಗೆ ನಡುವೆ ಯಾವಾಗಲಾದರೂ ಹಸಿವು ಅನ್ನಿಸಿದರೆ ತರಕಾರಿ ಸಲಾಡ್ಸ್ ತಿನ್ನಿ. ಅಥವಾ ಮಾರುಕಟ್ಟೆಯಲ್ಲಿ ಸಿಗುವ ರಾಗಿ ಸರಿ ಬಿಸ್ಕೆಟ್ ತಿನ್ನಿ.
- ಈ ರೀತಿ ಮಾಡಿದರೆ ಖಚಿತವಾಗಿ ವಾರದ ಬಳಿಕ ನಿಮ್ಮಲ್ಲಿ ತೂಕ ಕಡಿಮೆಯಾಗಿರುವುದನ್ನು ಗಮನಿಸುತ್ತೀರ. ರಾಗಿಯನ್ನು ಸರಿಯಂತೆ ತೆಗೆದುಕೊಳ್ಳಲು ಆಗದಿದ್ದರೆ ರೊಟ್ಟಿ, ದೋಸೆಗಳು, ಇಡ್ಲಿಯಾಗಿ ತಯಾರಿಸಿಕೊಳ್ಳಬಹುದು. ಹಾಲಿನೊಂದಿಗೆ ತೆಗೆದುಕೊಳ್ಳಬಹುದು.
ಪ್ರಯೋಜನಗಳು:
- ಮಲಬದ್ಧತೆಯನ್ನು ನಿವಾರಿಸುತ್ತದೆ.
- ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ.
- ರಾಗಿ ಸರಿಯಿಂದ ಜೀರ್ಣ ವ್ಯವಸ್ಥೆ ಉತ್ತಮಗೊಳ್ಳುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆಗಳು ದೂರವಾಗುತ್ತವೆ.
- ಮೂತ್ರಕೋಶಗಳಲ್ಲಿ ಕಲ್ಲುಗಳು ಉಂಟಾಗುವ ಅವಕಾಶಗಳು ಕಡಿಮೆಯಾಗುತ್ತವೆ.
- ರಕ್ತದ ಒತ್ತಡ ನಿಯಂತ್ರಣದಲ್ಲಿರುತ್ತದೆ.
- ದುಬಾರಿ ಡ್ರೈಫ್ರೂಟ್ಸ್ನಲ್ಲಿರುವ ಅಪರೂಪದ ಪೋಷಕಾಂಶಗಳು, ಅಮಿನೋ ಆಮ್ಲಗಳು ರಾಗಿಯಲ್ಲಿ ಹೆಚ್ಚಾಗಿವೆ.
ಹಸಿವನ್ನು ನಿಯಂತ್ರಣದಲ್ಲಿಟ್ಟು ತೂಕವನ್ನು ಕಡಿಮೆ ಮಾಡುತ್ತವೆ. - ಥೈರಾಯಿಟ್ ಸಮಸ್ಯೆಗಳು ದೂರವಾಗುತ್ತವೆ.
- ರಾಗಿ ಸರಿ ನಿಧಾನಕ್ಕೆ ಜೀರ್ಣವಾಗುತ್ತದೆ.
- ರಕ್ತದಲ್ಲಿನ ಸಕ್ಕರೆ ಪ್ರಮಾಣ ಒಮ್ಮೆಲೆ ಹೆಚ್ಚಾಗಲ್ಲ, ಸಕ್ಕರೆ ಕಾಯಿಲೆ ಇರುವವರಿಗೆ ಉತ್ತಮ.
Post a Comment