Header Ads

test

ನೀವು ಬೀದಿ ಪ್ರಾಣಿಗಳಿಗೆ ತಿಂಡಿ ಹಾಕುತ್ತಿದ್ದೀರಾ, ಆದರೆ ಈ 10 ಪದ್ಧತಿಗಳನ್ನು ಕಡ್ಡಾಯವಾಗಿ ಪಾಲಿಸಿ

2016ರ ವಾಷಿಂಗ್ಟನ್ ಪೋಸ್ಟ್ ವರದಿ ಪ್ರಕಾರ ನಮ್ಮ ಭಾರತ ದೇಶದಲ್ಲಿ ಸುಮಾರು 3 ಕೋಟಿಗೂ ಹೆಚ್ಚು ಬೀದಿ ನಾಯಿಗಳಿವೆ. ಈಗ ಆ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರಬಹುದು. ಬೀದಿ ಪ್ರಾಣಿಗಳಿಗೆ ಸೂಕ್ತ ಆಹಾರ ಸಿಗದೆ ಅದೆಷ್ಟೋ ತೊಂದರೆ ಅನುಭವಿಸುತ್ತಿವೆ. ಬದಲಾಗುತ್ತಿರುವ ಜೀವನಶೈಲಿ ಪ್ರಕಾರ ಒಂದು ಕಾಲಕ್ಕೆ ಹೋಲಿಸಿದರೆ ಇಂದು ಬಹಳಷ್ಟು ಮಂದಿ ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಆದರೆ ಈಗ ವಿಪರೀತವಾಗಿ ಬೀದಿ ನಾಯಿಗಳು ನಮ್ಮ ದೇಶದಲ್ಲಿವೆ. ಅವಕ್ಕೆ ನೀವು ತಿಂಡಿ ಹಾಕುತ್ತಿದ್ದೀರಾ..? ಹಾಗಿದ್ದರೆ ಈ ಮಾಹಿತಿ ನಿಮಗಾಗಿ.


ನೀವು ಬೀದಿ ನಾಯಿಗಳಿಗೆ ತಿಂಡಿ ಹಾಕುತ್ತಿದ್ದೀರಾ, ಆದರೆ ಈ 10 ಪದ್ಧತಿಗಳನ್ನು ಕಡ್ಡಾಯವಾಗಿ ಪಾಲಿಸಿ.

1. ಒಂದು ಸ್ಥಳವನ್ನು ಆಯ್ಕೆ ಮಾಡಿ ಅಲ್ಲೇ ಅವಕ್ಕೆ ಪ್ರತಿ ನಿತ್ಯ ಆಹಾರ ಇಡಿ. ಒಂದು ವೇಳೆ ನೀವು ಬೇರೆ ಪ್ರಾಣಿಯನ್ನು ಸಾಕುತ್ತಿದ್ದರೆ, ಆ ಸ್ಥಳ ನಿಮ್ಮ ಮನೆಯಿಂದ ಸ್ವಲ್ಪ ದೂರ ಇರುವಂತೆ ನೋಡಿಕೊಳ್ಳಿ. ಅಥವಾ ನಿಮ್ಮ ಮನೆಗೆ ಸಮೀಪದ ಸ್ಥಳ ಆಯ್ಕೆ ಮಾಡಿಕೊಳ್ಳಿ.

2. ಅವುಗಳ ಜತೆಗೆ ಆತ್ಮೀಯವಾಗಿರಿ. ಅವಕ್ಕೆ ವ್ಯಾಕ್ಸಿನ್ ಮಾಡಿಸುವುದನ್ನು ಮರೆಯಬೇಡಿ.

3. ಬೇಯಿಸಿದ ಆಹಾರ ಪದಾರ್ಥಗಳನ್ನು ನೀಡಲು ಪ್ರಯತ್ನಿಸಿ. ಹೆಚ್ಚು ಖಾರ ಮತ್ತು ಎಣ್ಣೆಯಲ್ಲಿ ಕರಿದ ಆಹಾರವನ್ನು ನೀಡಬೇಡಿ.

4. ಬೀದಿ ನಾಯಿಗಳಿಗೆ ತಿಂಡಿ ಇಡಲು ಹಲವು ಸರ್ಕಾರೇತರ ಸಂಸ್ಥೆಗಳಿವೆ. ಅವುಗಳ ಕ್ಷೇಮವನ್ನು ನೋಡಿಕೊಳ್ಳಲು ಪ್ರಾಣಿ ಸಂರಕ್ಷಣಾ ಸಂಸ್ಥೆಗಳು ಮುಂದೆ ಬರುತ್ತವೆ.

5. ಸಿಕ್ಕಿದ್ದೆಲ್ಲವನ್ನೂ ಅವಕ್ಕೆ ಇಡಬೇಡಿ. ನಾವು ನೀಡುವ ಆಹಾರದಿಂದ ಅವಕ್ಕೆ ಖಾಯಿಲೆ ಬರುವ ಸಾಧ್ಯತೆ ಇದೆ. ಪ್ರಾಣಿಗಳಿಗೆ ಆಹಾರ ನೀಡುವ ಮೊದಲು ಆ ಆಹಾರ ಅವಕ್ಕೆ ಸೂಕ್ತವಾದದ್ದೇ ಎಂಬುದನ್ನು ತಿಳಿದುಕೊಳ್ಳಿ.

6. ಪ್ರಾಣಿಗಳು ಗುಂಪಾಗಿ ಇದ್ದಾಗ ಅವಕ್ಕೆ ಆಹಾರ ಕೊಡಬೇಡಿ. ಆಹಾರಕ್ಕಾಗಿ ಕಿತ್ತಾಡಿ ಗಾಯ ಮಾಡಿಕೊಳ್ಳುತ್ತವೆ. ಸಾಧ್ಯವಾದಷ್ಟು ಪ್ರಾಣಿಗಳು ಗುಂಪಾಗಿ ಇದ್ದಾಗ ಆಹಾರ ಇಡದಿರುವುದೇ ಉತ್ತಮ.

7. ಆಹಾರ ನೀಡಿದ ಬಳಿಕ ನೀರನ್ನೂ ಕೊಡಿ. ಆಹಾರ ಇಟ್ಟಾಗ ಅಷ್ಟೇ ಅಲ್ಲದೆ ಬೇರೆ ಸಮಯದಲ್ಲೂ ಅವಕ್ಕೆ ನೀರು ಸಿಗುವಂತೆ ಮಾಡಿ. ಇದರಿಂದ ದಣಿವು ನೀಗಿಸಿಕೊಳ್ಳಲು ಸಾಧ್ಯವಾಗುತ್ತದೆ.

8. ಜನಸಂಖ್ಯೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಮತ್ತು ಚಿಕ್ಕ ಮಕ್ಕಳು ಆಟ ಆಡಿಕೊಳ್ಳುವ ಸ್ಥಳಗಳಲ್ಲಿ ಆಹಾರ ಇಡುವುದನ್ನು ಪ್ರಯತ್ನಿಸಬೇಡಿ.

9. ತುಂಬಾ ಜಾಸ್ತಿ ಅಥವಾ ಕಡಿಮೆ ಆಹಾರ ಇಡಬೇಡಿ. ಸೂಕ್ತ ಪ್ರಮಾಣದಲ್ಲಿ ಅವಕ್ಕೆ ಆಹಾರ ನೀಡಿ.

10. ಹಾಲು ಹಾಕುವಾಗ ತುಂಬಾ ಎಚ್ಚರಿಕೆಯಿಂದ ಇರಿ. ಪ್ರಾಣಿಗಳಿಗೆ ಹಾಲಿನಿಂದ ವಾಂತಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಬರಬಹುದು. ಅದಕಾರಣ ಹಾಲು ನೀಡುವಾಗ ಎಚ್ಚರಿಕೆಯಿಂದ ಇರಿ.

ಈ 10 ಎಚ್ಚರಿಕೆಗಳನ್ನು ಪಾಲಿಸಿದರೆ ಪ್ರಾಣಿಗಳಿಗೆ ಆಹಾರ ನೀಡಿದರೂ ಯಾವುದೇ ಸಮಸ್ಯೆ ಇರಲ್ಲ. ಇವಿಷ್ಟೇ ಅಲ್ಲದೆ ಪ್ರಾಣಿಗಳು ಅನಾರೋಗ್ಯದಿಂದ ಇದ್ದಾಗ ಪ್ರಾಣಿ ವೈದ್ಯರನ್ನು ಸಂಪರ್ಕಿಸಿ ಅವಕ್ಕೆ ಚಿಕಿತ್ಸೆ ಕೊಡಿಸಿ. ಬೀದಿ ಪ್ರಾಣಿಗಳು ಎಂದರೆ ಬಹಳಷ್ಟು ಸಂಖ್ಯೆಯಲ್ಲಿ ನಾಯಿಗಳು ಮತ್ತು ಬೆಕ್ಕುಗಳೇ ಇರುತ್ತವೆ. ಆದಕಾರಣ ಒಂದೇ ಸಲ ಅವೆರಡಕ್ಕೂ ಆಹಾರ ನೀಡಲು ಹೋಗಬೇಡಿ. ನಾಯಿ ಮತ್ತು ಬೆಕ್ಕಿಗೆ ಆಗಿಬರಲ್ಲ. ನಾಯಿ ಬೆಕ್ಕನ್ನು ಕಚ್ಚಿ ಗಾಯಗೊಳಿಸುವ ಸಾಧ್ಯತೆಗಳಿವೆ.

No comments