Header Ads

test

ಬೇರೊಬ್ಬ ಮಹಿಳೆಯ ಸಹವಾಸದಿಂದ ಹೆಂಡತಿಗೆ ವಿಚ್ಚೇದನ ನೀಡಬೇಕೆಂದುಕೊಂಡ...! ಆದರೆ 1 ತಿಂಗಳು ತನ್ನನ್ನುಎತ್ತಿಕೊಳ್ಳಬೇಕು ಎಂದು ಹೆಂಡತಿ ಷರತ್ತು ಹಾಕಿದಳು.ಯಾಕೆಂದು ಗೊತ್ತಾ..?

ರಾತ್ರಿ ತನ್ನ ಹೆಂಡತಿ ಊಟ ಬಡಿಸುತ್ತಿರುವಾಗ ಆಕೆಯ ಕೈ ಹಿಡಿದು ನಿನಗೆ ಒಂದು ವಿಷಯ ಹೇಳಬೇಕು ಎಂದನು. ಆಕೆ ಮೌನವಾಗಿ ಊಟ ಮಾಡುತ್ತಲೇ ಇದ್ದಳು. ಆಕೆಯ ಕಣ್ಣಲ್ಲಿ ವೇದನೆಯನ್ನು ಗಮನಿಸಿದ ಆತ ಹೇಳಬೇಕೆಂದಿದ್ದ ವಿಷಯವನ್ನು ಹೇಗೆ ಹೇಳಬೇಕೆಂದು ಅರ್ಥವಾಗದೆ ಕೊನೆಗೂ ಹೀಗೆ ಹೇಳಿದ.

ಗಂಡ : ತನಗೆ ವಿಚ್ಚೇದನ ಬೇಕೆಂದು ಪ್ರಶಾಂತವಾಗಿ ಕೇಳಿದನು.
ಹೆಂಡತಿ : (ಆ ಮಾತಿಗೆ ಆಕೆ) ಯಾಕೆ ಎಂದು ಸಾಧಾರಣವಾಗಿ ಕೇಳಿದಳು.
ಗಂಡ : ಆಕೆಯ ಪ್ರಶ್ನೆಗೆ ಉತ್ತರ ನೀಡಲಿಲ್ಲ.
ಹೆಂಡತಿ : (ಆಕೆಗೆ ಕೋಪ ಬಂತು) ಒಂದು ವಸ್ತುವನ್ನು ದೂರ ಎಸೆಯುತ್ತಾ, ನೀವೂ ಒಬ್ಬ ಮನುಷ್ಯರೇನಾ ಎಂದು ಕಿರುಚಿದಳು.
ಆ ರಾತ್ರಿ ಇಬ್ಬರೂ ಮೌನವಾಗಿದ್ದರು. ಆಕೆಗೆ ತನ್ನ ಪತಿ ಯಾಕೆ ವಿಚ್ಚೇದನ ಕೇಳುತ್ತಿದ್ದಾನೆಂದು ಅರ್ಥವಾಗಲಿಲ್ಲ. ಅಳತೊಡಗಿದಳು. ವಿಷಯ ಏನೆಂದು ತಿಳಿಯಲು ಪತಿಯನ್ನು ಗಟ್ಟಿಯಾಗಿ ಕೇಳಿದಳು. ಅದಕ್ಕೆ ಆತ....
ಗಂಡ : ನಾನು ಜಾನು ಎಂಬಾಕೆಯನ್ನು ಪ್ರೀತಿಸಿದ್ದೇನೆ. ನಿನ್ನ ಮೇಲೆ ನನಗೆ ಪ್ರೀತಿಯಿಲ್ಲ.
ಹೆಂಡತಿ : ಆ ಮಾತನ್ನು ಕೇಳಿ ದುಃಖಪಟ್ಟು...ಒಂದು ನಿಮಿಷ ಏನು ನಡೆಯುತ್ತಿದೆ ಎಂದು ಅರ್ಥವಾಗಲಿಲ್ಲ.
ಗಂಡ : ನಾನು ವಿಚ್ಚೇದನ ನೀಡಲು ನೀನು ವ್ಯಕ್ತಪಡಿಸಿದರೆ, ಸ್ವಂತ ಮನೆ, ಕಾರು ಮತ್ತು ನನ್ನ ಸಂಸ್ಥೆಯಲ್ಲಿ 30% ಪಾಲು ಕೊಡುವೆನೆಂಬ ಒಪ್ಪಿಗೆ ಪತ್ರವನ್ನು ಆಕೆಗೆ ನೀಡಿದ.
ಹೆಂಡತಿ : ಕೋಪದಿಂದ ಆ ಕಾಗದಗಳನ್ನು ಹರಿದು ಹಾಕಿ, ಪ್ರೀತಿಯನ್ನು ಎಂದಿಗೂ ಕೊಳ್ಳಲಾಗುವುದಿಲ್ಲ ಎಂದು ಹೇಳುತ್ತಾ ಗಳಗಳನೆ ಅತ್ತುಬಿಟ್ಟಳು.


10 ವರ್ಷಗಳಿಂದ ಗಂಡನಂತೆ, ಆಕೆಯ ಜೀವನದಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯಂತೆ ನಡೆದುಕೊಂಡಿದ್ದಾನೆ. ಹೆಂಡತಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡದೆ ಆಕೆಯ ಸಮಯವನ್ನು ಹಾಳು ಮಾಡಿದೆನೆಂದು ನೊಂದುಕೊಂಡನು. ಜಾನುಳನ್ನು ಪ್ರೀತಿಸುತ್ತಿದ್ದ ಆತನಿಗೆ ತನ್ನ ಹೆಂಡತಿಯನ್ನು ಮೇಲೆ ಕನಿಕರ ಉಂಟಾಯಿತು.ವಿಚ್ಛೇದನ ಮಂಜೂರಾಗಲು ಕೆಲವು ವಾರಗಳು ಹಿಡಿಯುತ್ತವೆ.
ಮಾರನೇ ದಿನ, ತಡವಾಗಿ ಮನೆಗೆ ಬಂದ ಆತನಿಗೆ ತನ್ನ ಹೆಂಡತಿ ಏನನ್ನೋ ಬರೆಯುತ್ತಿರುವುದನ್ನು ನೋಡಿದ. ಆ ದಿನ ಆತ ತನ್ನ ಪ್ರೇಯಸಿ ಜಾನೂವಿನೊಂದಿಗೆ ತಿರುಗಾಡಿದ್ದರಿಂದ ಸುಸ್ತಾಗಿ ಊಟವನ್ನೂ ಮಾಡದೆ ನಿದ್ದೆ ಮಾಡಿದ. ಎಚ್ಚರಗೊಂಡು ನೋಡಿದಾಗ ಆಕೆ ಟೇಬಲ್ ನ ಬಳಿ ಕುಳಿತು ಇನ್ನೂ ಬರೆಯುತ್ತಲೇ ಇದ್ದಳು. ಆದರೂ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಮತ್ತೆ ಪಕ್ಕಕ್ಕೆ ತಿರುಗಿ ಮಲಗಿದ.

ಬೆಳಿಗ್ಗೆ, ಆಕೆ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಕೆಲವು ನಿಬಂಧನೆಗಳನ್ನು ಹೇಳಿದಳು. ಆಕೆ ಆತನಿಂದ ಏನನ್ನೂ ಬಯಸುತ್ತಿಲ್ಲ. ಆದರೆ ವಿಚ್ಛೇದನಕ್ಕೆ ಮುಂಚೆ ಒಂದು ತಿಂಗಳ ಕಾಲ ತನ್ನೊಂದಿಗೆ ಇರಬೇಕೆಂದು ಹೇಳಿದಳು. ಈ 1 ತಿಂಗಳು ಸಾಧಾರಣವಾದ ಜೀವನವನ್ನು ನಡೆಸಬೇಕೆಂದು ಹೇಳಿದಳು.ತನ್ನ ಮಗನಿಗೆ ಇನ್ನು ಒಂದು ತಿಂಗಳಲ್ಲಿ ಪರೀಕ್ಷೆಗಳು ನಡೆಯುತ್ತವೆ. ಆದ್ದರಿಂದ ಅವನ ವಿದ್ಯಾಭ್ಯಾಸಕ್ಕೆ ನಮ್ಮ ವಿಚ್ಛೇದನ ಅಡ್ಡಿಯಾಗಬಾರದೆಂದು ತನ್ನ ಪತಿಯನ್ನು ಕೋರಿದಳು.
ಅದಕ್ಕೆ ಆತ ಒಪ್ಪಿಗೆ ನೀಡಿದ. ಆತನಿಗೆ ಇನ್ನೊಂದು ವಿಷಯವನ್ನು ನೆನಪಿಸುತ್ತಾ ಹೀಗೆ ಕೇಳಿದಳು. ನೀವು ನಮ್ಮ ಮುದುವೆ ದಿನದಂದು ಕೊಠಡಿಯೊಳಗೆ ಹೇಗೆ ಕರೆದುಕೊಂಡು ಹೋಗಿದ್ದಿರೋ ಅದೇರೀತಿ ಈ 1 ತಿಂಗಳು ಕಾಲ ಪ್ರತಿದಿನ ಬೆಳಗ್ಗೆ ನನ್ನನ್ನು ಎತ್ತಿಕೊಂಡು ಬೆಡ್ ರೂಮ್ ನಿಂದ ಹಾಲ್ ನವರೆಗೂ ಹೋಗಬೇಕೆಂದು ಕೋರಿದಳು. ಆಕೆಯ ಈ ಮಾತುಗಳನ್ನು ಕೇಳಿ ಆಕೆಗೆ ಮತಿಗೆಟ್ಟಿದೆ ಎಂದುಕೊಂಡು, ನಾವಿಬ್ಬರೂ ಒಂದುಗೂಡಿ ಇರುವ ಕೊನೆಯ ದಿನಗಳಲ್ಲಿ ಆಕೆ ಕೇಳಿದ ಕೊನೆಯ ಆಸೆ ಎಂದು ತಿಳಿದುಕೊಂಡು ಅದಕ್ಕೆ ಒಪ್ಪಿಕೊಂಡನು. ಈ ವಿಷಯವನ್ನು ಆತನ ಪ್ರೇಯಸಿ ಜಾನೂಗೆ ಹೇಳಿದ. ಆಕೆ ವಿಚಿತ್ರವಾಗಿ ನಕ್ಕಳು. ಆ ನಗುವಿಗೆ ಅರ್ಥವಿಲ್ಲವೆಂಬಂತೆ ಆತ ಭಾವಿಸಿದ. ನಿನ್ನ ಹೆಂಡತಿ ವಿಚ್ಛೇದನ ನೀಡಲು ಇಷ್ಟವಿಲ್ಲದೆ ನಾಟಕವಾಡುತ್ತಿದ್ದಾಳೆ ಎಂದು ಜಾನೂ ಹೇಳಿದಳು.ವಿಚ್ಛೇದನದ ಪ್ರಸ್ತಾವನೆ ಬಂದ ಮೇಲೆ ಅವರಿಬ್ಬರ ನಡುವೆ ಎಂತಹ ಶಾರೀರಿಕ ಸಂಬಂಧವೂ ಇರಲಿಲ್ಲ.

ಮೊದಲನೇ ದಿನ ಆಕೆಯನ್ನು ಎತ್ತಿಕೊಂಡಾಗ ಸಂಕೋಚವೆನೆಸಿತು. ಅವರ ಮಗ "ಹೇ...! ಅಪ್ಪಾ, ಅಮ್ಮನನ್ನು ಎತ್ತಿಕೊಂಡಿದ್ದಾರೆ ಎಂದು ಸಂತೋಷದಿಂದ ಚಪ್ಪಾಳೆ ಹೊಡೆಯುತ್ತಾ ಕೇಕೆ ಹಾಕತೊಡಗಿದ. ಆ ಮಾತು ಆತನಲ್ಲಿ ಬೇಸರ ಮೂಡಿಸಿದರೂ ನಕ್ಕು ಸುಮ್ಮನಾದ. ಆಕೆ ಕಣ್ಣು ಮುಚ್ಚಿಕೊಂಡು ಹೀಗೆ ಹೇಳಿದಳು "ನಮ್ಮ ವಿಚ್ಛೇದನ ದ ಬಗ್ಗೆ ನಮ್ಮ ಮಗನಿಗೆ ಹೇಳಲಿಲ್ಲ". ಆ ಮಾತಿಗೆ ಆತ ಮೆಲ್ಲಗೆ ನಕ್ಕ. ನಂತರ ಆಕೆ ಆಫೀಸ್ ಬಸ್ಸಿಗಾಗಿ ಬಾಗಿಲ ಬಳಿ ಬಂದು ಎದರು ನೋಡುತ್ತಾ ನಿಂತಳು. ಆತ ಕಾರಿನಲ್ಲಿ ಆಫೀಸಿಗೆ ಹೊರಟ.ಎರಡನೇ ದಿನ, ಇಬ್ಬರಲ್ಲೂ ಸ್ವಲ್ಪ ಹೊಂದಾಣಿಕೆಯಾಯಿತು. ಆಕೆಯ ತಲೆ ಆತನ ಎದೆಗೆ ಹತ್ತಿರವಾಗಿ ಬಂದಾಗ ಅವಳ ಹತ್ತಿರದಿಂದ ಬರುತ್ತಿರುವ ಸುವಾಸನೆಯ ಅರಿವಾಗುತ್ತಿದೆ. ಇತ್ತೀಚೆಗೆ ತನ್ನ ಹೆಂಡತಿಯನ್ನು ಗಮನಿಸಲಿಲ್ಲ. ವಯಸ್ಸಾದಂತೆ ಕಾಣುತ್ತಿದ್ದಾಳೆ ಎಂದುಕೊಂಡನು. ಮುಖ ಸುಕ್ಕುಗಟ್ಟಿದಂತಿದೆ. ನಮ್ಮ ಮದುವೆಗೆ ಮೌಲ್ಯ ಕಟ್ಟುತ್ತಿರುವೆ ಎಂದು ಭಾವಿಸುತ್ತಿದ್ದೀರಾ ಎಂದು ಕೇಳಿದಳು. ಆ ಮಾತಿಗೆ ಒಂದು ನಿಮಿಷ ಯೋಚಿಸುತ್ತಾ ಆಶ್ಚರ್ಯಗೊಂಡನು.

ನಾಲ್ಕನೇ ದಿನ, ಆಕೆಯನ್ನು ಎತ್ತಿಕೊಂಡಾಗ ಅವರಿಬ್ಬರ ನಡುವೆ ಅನ್ಯೋನ್ಯತೆ ಕಾಣಿಸಿತು. 10 ವರ್ಷಗಳಿಂದ ಈಕೆಯೊಂದಿಗೆ ಜೀವಿಸುತ್ತಿದ್ದೀನಾ ಎಂದೆನಿಸಿತು.ಐದನೇ ಮತ್ತು ಆರನೇ ದಿನ, ಅವರಿಬ್ಬರ ನಡುವೆ ಸಾಮೀಪ್ಯತೆ ಬೆಳೆಯುತ್ತಿದೆ ಎಂದು ತಿಳಿದುಕೊಂಡನು. ಈ ವಿಷಯವನ್ನು ಜಾನು ಗೆ ಹೇಳಲಿಲ್ಲ. ಹೀಗೆ ತಿಂಗಳ ಕಾಲ ತನ್ನ ಹೆಂಡತಿಯನ್ನು ಎತ್ತಿಕೊಂಡು ಹೋಗುವುದು ಸುಲಭವಾಯಿತು. ದಿನಾ ಹೀಗೆ ಮಾಡುವುದರಿಂದ ಬಲಬಂದಂತೆ, ಬಲಾಢ್ಯನಾದಂತೆ ಅನಿಸಿತು.

ಒಂದು ದಿನ ಬೆಳಗ್ಗೆ ಯಾವ ಉಡುಪು ಧರಿಸಬೇಕೆಂದು ಹುಡುಕುತ್ತಿದ್ದಳು. ಯಾವ ಉಡುಪು ಧರಿಸಿದರೂ ಚೆನ್ನಾಗಿ ಕಾಣಲಿಲ್ಲ. ಎಲ್ಲವೂ ಸಡಿಲವಾಗಿಬಿಟ್ಟಿವೆ. ಆಕೆ ಸಣ್ಣಗಾಗಿದ್ದಾಳೆ ಎಂದು ಆತನಿಗೆ ತಿಳಿದು ಆದ್ದರಿಂದಲೇ ಸುಲಭವಾಗಿ ಆಕೆಯನ್ನು ಹೊತ್ತಿಕೊಂಡು ಹೋಗಲು ಸಾಧ್ಯವಾಯಿತೆಂದು ತಿಳಿಯಿತು. ಆಕೆ ಎಷ್ಟು ಸಂಕಟಪಟ್ಟಿರಬಹುದು ಎಂದು ತಿಳಿಯಿತು. ಆತನಿಗೆ ತಿಳಿಯದಂತೆ ತನ್ನ ಕೈ ಆಕೆಯ ತಲೆಯನ್ನು ಸ್ಪರ್ಶಿಸಿತು. ಅಷ್ಟರಲ್ಲೆ ಅವರ ಮಗ ಬಂದ. ಆ ದೃಶ್ಯವನ್ನು ಕಂಡ ಆ ಹುಡುಗ ಅವರ ತಂದೆಯೊಂದಿಗೆ ಹೀಗೆ ಹೇಳಿದನು. "ಅಪ್ಪ, ಅಮ್ಮನನ್ನು ಹೊರಗೆ ಕರೆದುಕೊಂಡು ಹೋಗುವ ಸಮಯ ಈಗ ಬಂದಿದೆ". ಎಂದು ಹೇಳಿದ. ಹೀಗೆ ಅವರ ಅಮ್ಮನನ್ನು, ಅವರ ತಂದೆ ನೋಡಿಕೊಳ್ಳುತ್ತಿರುವುದು ಅತ್ಯಂತ ಅಮೂಲ್ಯವಾದ, ಅಪರೂಪದ ಘಟನೆಯಾಗಿತ್ತು.

ಆಕೆ ಮಗನನ್ನು ಹತ್ತಿರ ಕರೆದಳು. ಅವನು ಅಮ್ಮನ ಬಳಿ ಬಂದ. ಆಕೆ ಮಗನನ್ನು ಗಟ್ಟಿಯಾಗಿ ತಬ್ಬಿಕೊಂಡಳು. ಅವನ ತಂದೆ, ಕೊನೆಯ ನಿಮಿಷದಲ್ಲಿ ತನ್ನ ಮನಸ್ಸು ಬದಲಾಗುತ್ತದೆಯೇನೋ ಎಂದು ಹೆದರಿ ತನ್ನ ಮುಖವನ್ನು ಪಕ್ಕಕ್ಕೆ ತಿರುಗಿಸಿಕೊಂಡ.ಎಂದಿನಂತೆ ಆಕೆಯನ್ನು ಬೆಡ್ ರೂಂ ನಿಂದ ಎತ್ತಿಕೊಂಡು ಬರುವಾಗ ಆಕೆ ಪ್ರೀತಿಯಿಂದ ಕೈಗಳಿಂದ ಸಹಜವಾಗಿ ಆತನ ಕತ್ತನ್ನು ಬಳಸಿದಳು. ಆ ಕ್ಷಣದಲ್ಲಿ ಆತನಿಗೆ ಅವರ ಮದುವೆ ದಿನಗಳು ನೆನಪಾದವು. ಆದರೆ ಆಕೆ ಸಹಜವಾಗಿದ್ದುದರಿಂದ ಸ್ವಲ್ಪ ಬೇಸರವೆನಿಸಿತು.ಕೊನೆಯ ದಿನ, ಆಕೆಯನ್ನು ಎತ್ತಿಕೊಂಡು ನಡೆಯುತ್ತಿದ್ದರೆ ಒಂದೊಂದು ಹೆಜ್ಜೆಯೂ ಭಾರವಾದಂತೆ ಅನಿಸಿತು. ಮಗನು ಶಾಲೆಗೆ ಹೊರಟಿದ್ದನು. ಹೆಂಡತಿಯನ್ನು ಗಟ್ಟಿಯಾಗಿ ಹಿಡಿದು ಹೀಗೆ ಹೇಳಿದನು. " ನಮ್ಮ ಜೀವನದಲ್ಲಿ ಸಾಮೀಪ್ಯತೆ, ಅನ್ಯೋನ್ಯತೆಗಳ ಲೋಪವಾಗಿವೆ" ಎಂದು ಹೇಳಿ ಆಫೀಸಿಗೆ ಹೊರಟ. ವೇಗವಾಗಿ ಕಾರಿನಿಂದ ಇಳಿದು ಬಾಗಿಲನ್ನು ಮುಚ್ಚದೆ ಒಳಗೆ ಹೋದನು. ನಿಧಾನವಾದಷ್ಟೂ ತನ್ನ ಮನಸ್ಸು ಎಲ್ಲಿ ಬದಲಾಗುತ್ತದೆಯೋ ಎಂಬ ಭಯ ಪ್ರಾರಂಭವಾಯಿತು.

ಜಾನು ಇರುವ ಕ್ಯಾಬಿನ್ಗೆ ಹೋಗಿ ಆಕೆಯ ಬಳಿ ಕ್ಷಮೆ ಯಾಚಿಸುತ್ತಾ, ತನ್ನ ಹೆಂಡತಿಯಿಂದ ವಿಚ್ಚೇದನ ಪಡೆಯುತ್ತಿಲ್ಲವೆಂದು ಹೇಳಿದನು. ಜಾನು ಆಶ್ಚರ್ಯದಿಂದ ನೋಡುತ್ತಾ ನೀನು ಹುಷಾರಾಗೇ ಇದ್ದೀಯ ಅಲ್ಲವೆ? ಎಂದು ಪ್ರಶ್ನಿಸಿದಳು. ಅದಕ್ಕೆ ಆತ..ನಾನು ನನ್ನ ಹೆಂಡತಿಯ ಪ್ರೀತಿಯ ಮೌಲ್ಯ, ಅವಳ ದೊಡ್ಡ ಮನಸ್ಸನ್ನು ಅರಿಯಲಿಲ್ಲ. ನಾವಿಬ್ಬರೂ ಪ್ರೀತಿಯಿಂದ ಮಾತಾಡಿಕೊಳ್ಳುತ್ತಿರಲಿಲ್ಲ. ಆದ್ದರಿಂದಲೇ ಬೆರೆತು ಹೇಗೆ ಜೀವಿಸಬೇಕೆಂದು ಅರ್ಥವಾಗಲಿಲ್ಲ. ನಾನು ಆಕೆಯನ್ನು ಎತ್ತಿಕೊಳ್ಳಲು ಪ್ರಾರಂಭವಾದಾಗಿನಿಂದ ನನಗನಿಸಿತು. ನಮ್ಮ ಮದುವೆಯಾ ಆರಂಭದಲ್ಲಿ ಹೇಗೆ ಇದ್ದೆವೊ ಹಾಗೆಯೇ ಸಾಯುವವರೆಗೂ ನೋಡಿಕೊಳ್ಳಬೇಕೆಂದು ಎಂದು ಹೇಳಿದ.
ಜಾನು ತಟ್ಟನೆ ಎದ್ದು ನಿಂತು ಆತನ ಕೆನ್ನೆಗೆ ಹೊಡೆದಳು, ಅಳುತ್ತಾ ಅವನನ್ನು ಹೊರಗೆ ತಳ್ಳಿ ಬಾಗಿಲು ಮುಚ್ಚಿದಳು.

ಆತ ಮನೆಗೆ ಹೋಗುತ್ತಾ ದಾರಿಯಲ್ಲಿ ಹೆಂಡತಿಗೆ ಪುಷ್ಪಗುಚ್ಚವನ್ನು , ತೆಗೆದುಕೊಂಡನು. ಕಾರ್ಡ್ ಮೇಲೆ ಏನು ಬರೆಯಬೇಕೆಂದು ಸೇಲ್ಸ್ ಗರ್ಲ್ ಕೇಳಲು,ನಗುತ್ತಾ "ಮರಣ ನಮ್ಮನ್ನು ದೂರ ಮಾಡುವವರೆಗೂ ನಾನು ನಿನ್ನನ್ನು ಹೀಗೆ ಹೊತ್ತುಕೊಂಡು ಹೋಗುತ್ತಿರಬೇಕು ಎಂದುಕೊಂಡಿದ್ದೇನೆ". ಎಂದು ಬರೆಯಲು ಹೇಳಿದ.ಆ ದಿನ ಸಂಜೆ ಬೇಗ ಮನೆಗೆ ಹೊರಟ. ಮುಗುಳ್ನಗುತ್ತಾ ಕೈಯಲ್ಲಿ ಪ್ಲವರ್ ಬೊಕೆ ಇಟ್ಟುಕೊಂಡು ಮೆಟ್ಟಿಲು ಹತ್ತಿ ಮೇಲೆ ಹೋಗಲು ಮಂಚದ ಮೇಲೆ ಮಲಗಿದ್ದ ತನ್ನ ಹೆಂಡತಿಯನ್ನು ಕಂಡನು. ಈಗಾಗಲೇ ಆಕೆ ಸತ್ತುಹೋಗಿದ್ದಾಳೆ.... ಆತನಿಗೆ ಏನೂ ತೋಚದೆ ತನಗೇ ತಿಳಿಯದಂತೆ ಕಣ್ಣೀರು ಬರುತ್ತಿದೆ. ತನ್ನ ಹೆಂಡತಿ ಕೆಲವು ತಿಂಗಳುಗಳಿಂದ ಕ್ಯಾನ್ಸರ್ ನಿಂದ ಬಳಳುತ್ತಿದ್ದಾಳೆ. ತಾನು ಜಾನು ನೊಂದಿಗೆ ಬಿಜೀ ಆಗಿರುವುದರಿಂದ ಈ ವಿಷಯವನ್ನು ಗಮನಿಸಿರಲಿಲ್ಲ. ಆಕೆ ಮೊದಲೇ ತಾನು ಬದುಕುವುದಿಲ್ಲವೆಂದು ತಿಳಿದು ವಿಚ್ಛೇದನದ ವಿಷಯವನ್ನು ಮಗನಿಗೆ ತಿಳಿಸದೇ ಆತ ಹೆಂಡತಿಯನ್ನು ಪ್ರೀತಿಸುವ ಗಂಡನಾಗಿರಬೇಕೆಂದುಕೊಂಡಿದ್ದಳು.

ಜೀವನದಲ್ಲಿ ನಡೆಯುವ ಕೆಲವು ಚಿಕ್ಕ ವಿಷಯಗಳೇ ನಿಮ್ಮ ಬಾಳಿನ ನಂಟಿಗೆ ಅರ್ಥವನ್ನು ತಿಳಿಸುತ್ತವೆ. ಬಂಗಲೆ, ಕಾರು, ಆಸ್ತಿ, ಬ್ಯಾಂಕಿನಲ್ಲಿರುವ ಹಣ ಇವ್ಯಾವುವೂ ಬಾಳಿನ ನಂಟಿಗೆ ಸಂಬಂಧಿಸಿದ್ದವಲ್ಲ. ಇವೆಲ್ಲವೂ ಸಂತೋಷಕ್ಕೆ ಬೇಕಾದ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸುವುದಕ್ಕೆ ಮಾತ್ರವಷ್ಟೆ. ಆದರೆ ನಿಜವಾದ ಸಂತೊಷವನ್ನು ಕೊಡಲಾರವು.ನಿಮ್ಮ ಬಾಳಿನ ಸಂಗಾತಿಯೊಂದಿಗೆ ಸಾಧ್ಯವಾದಷ್ಟೂ ಸಮಯವನ್ನು ಮೀಸಲಿಟ್ಟು, ಒಬ್ಬರಿಗೊಬ್ಬರು ಸಂತೋಷವಾಗುವಂತೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರೆ ಇಬ್ಬರ ನಡುವೆ ಸ್ನೇಹ ಹೆಚ್ಚುತ್ತದೆ. ಆಗಲೇ ನಿಜವಾದ ವಿವಾಹದ ನಂಟು ಗಟ್ಟಿಯಾಗುತ್ತದೆ.ನಾವು ಏನೇ ಮಾಡಿದರೂ, ಎಷ್ಟು ಪ್ರೀತಿಯಿಂದ ನೊಡಿಕೊಂಡರೂ ಅವರು ಇದ್ದಾಗಲೇ ಮಾಡಬೇಕು. ಅವರು ತೀರಿಕೊಂಡ ಮೇಲೆ ನಾವು ಪ್ರೀತಿ ತೋರಿಸಬೇಕೆಂದರೂ ಅವರು ನಮ್ಮೊಂದಿಗೆ ಇರುವುದಿಲ್ಲ.ತುಂಬಾ ಜನರು ಕೇವಲ ಅಪಾರ್ಥಗಳಿಂದ ಬೇರೆಯಾಗುತ್ತಿದ್ದಾರೆ. ಇದನ್ನು ಓದಿದ ಕೆಲವು ಜನರಾದರೂ ಅವರ ತಪ್ಪನ್ನು ತಿಳಿದುಕೊಂಡು ಅವರ ಜೀವನವನ್ನು ಸಂತೋಷಮಯ ವಾಗಿಸುತ್ತಾರೆಂದು ಭಾವಿಸುತ್ತೇನೆ.

No comments