Header Ads

test

ಆ ಕಾಲದಲ್ಲಿ 'ಸ್ತನ'ಗಳಿಗೂ ತೆರಿಗೆ( TAX) ವಿಧಿಸಿದರು.ತೆರಿಗೆಯನ್ನು ಕಟ್ಟಲಾಗದ ಬಾಣಂತಿ ಏನು ಮಾಡಿದಳುಗೊತ್ತೆ ?

17 ನೇ ಶತಮಾನದಲ್ಲಿ ಟ್ರಾವೆಂಕೂರ್ (ತಿರುವನಂತಪುರಂ) ಅನ್ನು ಆಳಿದ ರಾಜರುಗಳು,ಮಹಿಳೆಯರ ಸ್ತನಗಳ ಮೇಲೆ ವಿಧಿಸಿದ ತೆರಿಗೆ 'ಮುಲಕರಂ' ಅತಿ ಹೀನವಾದದ್ದು.ಮಹಿಳೆಯರ ಸ್ತನಗಳ ಗಾತ್ರಕ್ಕೆ ಅನುಗುಣವಾಗಿ ತೆರಿಗೆ ವಿಧಿಸುವುದು ಇನ್ನೂ ಹೇಯಕರ.ಮಾತೆಯರು ತಮ್ಮ ಮಕ್ಕಳಿಗೆ ಹಾಲುಣಿಸ ಬೇಕಾದರೆ ಮೊದಲಿಗೆ ತೆರಿಗೆ ಕಟ್ಟಬೇಕು. ಸ್ತನಗಳ ಗಾತ್ರಕ್ಕೆ ಅನುಗುಣವಾಗಿ ತೆರಿಗೆ ವಿಧಿಸುವ 'ಮುಲಕರಂ' ಪದ್ಧತಿಯನ್ನು ಪ್ರಜೆಗಳು ವಿರೋಧಿಸುತ್ತಿದ್ದರು. ಟ್ರಾವೆಂಕೂರ್ ಸಂಸ್ಥಾನಕ್ಕೆ ಸೇರಿದ 'ಚೆರಿತಾಲ' ಗ್ರಾಮದ 'ಕಾಪುಂತಲ' ಎಂಬ ದಲಿತ ವರ್ಗಕ್ಕೆ ಸೇರಿದ'ನಾಗೆಳ್ಳಿ'ಎಂಬ ಹೆಸರಿನ ಮಹಿಳೆ ತೆರಿಗೆಯನ್ನು ಕಟ್ಟದೆ ತನ್ನ ಮಗನಿಗೆ ಹಾಲುಣಿಸಿದಳು. ವಿಷಯವನ್ನರಿತು ಅಲ್ಲಿಗೆ ಬಂದ ರಾಜಾಧಿಕಾರಿಗಳು, 'ನಾಗೆಳ್ಳಿ'ಗೆ ಛೀಮಾರಿ ಹಾಕಿ ತೆರಿಗೆ ಕಟ್ಟದೆ ಹಾಲುಣಿಸಿದ್ದು ಅಪರಾಧವೆಂದು ವಾದಿಸಿದರು.ಮನೆಯೊಳಗೆ ಹೋದ ನಾಗೆಳ್ಳಿ ತೆರಿಗೆ ಹಣ ತರುತ್ತಾಳೆಂದು ಅಧಿಕಾರಿಗಳು ಹೊರಗೆ ಕಾಯುತ್ತಿದ್ದರು.ಆದರೆ,ಯಾರೂ ಊಹಿಸಲಾರದ ಘಟನೆಯೊಂದು ನಡೆಯಿತು.ಮನೆಯೊಳಗಿನಿಂದ ಹೊರಗೆ ಬಂದ ಆ ತಾಯಿ, ಎಲ್ಲರೂ ನೋಡುತ್ತಿರುವಾಗಲೇ ತನ್ನ ಎರಡೂ ಸ್ತನಗಳನ್ನು ಕೊಯ್ದು ರಾಜಾಧಿಕಾರಿಗಳ ಪಾದದಲ್ಲಿಟ್ಟು ,ಕುಸಿದು ಬಿದ್ದು ಇಹ ಲೋಕ ತ್ಯಜಿಸಿದಳು.ಆ ಮಹಿಳೆಯ ಜ್ಞಾಪಕಾರ್ಥ ಆ ಗ್ರಾಮಕ್ಕೆ 'ಮುಲಚ್ಚಿ ಪುರಂಬು'(ಸ್ತನ ಕೊಯ್ದುಕೊಂಡ ಮಹಿಳೆ) ಎಂಬ ಹೆಸರು ಬಂದಿತು.



ಮಹಿಳೆಯರ ಸ್ತನಗಳ ಮೇಲೆ ವಿಧಿಸಿದ ತೆರಿಗೆ 'ಮುಲಕರಂ' ಅತಿ ಹೀನವಾದದ್ದು.ಮಹಿಳೆಯರ ಸ್ತನಗಳ ಗಾತ್ರಕ್ಕೆ ಅನುಗುಣವಾಗಿ ತೆರಿಗೆ ವಿಧಿಸುವುದು ಇನ್ನೂ ಹೇಯಕರ.ಮಾತೆಯರು ತಮ್ಮ ಮಕ್ಕಳಿಗೆ ಹಾಲುಣಿಸ ಬೇಕಾದರೆ ಮೊದಲಿಗೆ ತೆರಿಗೆ ಕಟ್ಟಬೇಕು. ಸ್ತನಗಳ ಗಾತ್ರಕ್ಕೆ ಅನುಗುಣವಾಗಿ ತೆರಿಗೆ ವಿಧಿಸುವ 'ಮುಲಕರಂ' ಪದ್ಧತಿಯನ್ನು ಪ್ರಜೆಗಳು ವಿರೋಧಿಸುತ್ತಿದ್ದರು. ಟ್ರಾವೆಂಕೂರ್ ಸಂಸ್ಥಾನಕ್ಕೆ ಸೇರಿದ 'ಚೆರಿತಾಲ' ಗ್ರಾಮದ 'ಕಾಪುಂತಲ' ಎಂಬ ದಲಿತ ವರ್ಗಕ್ಕೆ ಸೇರಿದ'ನಾಗೆಳ್ಳಿ'ಎಂಬ ಹೆಸರಿನ ಮಹಿಳೆ ತೆರಿಗೆಯನ್ನು ಕಟ್ಟದೆ ತನ್ನ ಮಗನಿಗೆ ಹಾಲುಣಿಸಿದಳು.

No comments