Header Ads

test

ನೆಟಿಗೆ ಮುರಿದಾಗ ಟಪ್ ಎಂಬ ಶಬ್ದ ಯಾಕೆ ಬರುತ್ತದೆ? ನಿತ್ಯ ನೆಟಿಕೆ ಮುರಿಯುವುದು ಒಳ್ಳೆಯದಾ?

ಸಾಮಾನ್ಯವಾಗಿ ನಮ್ಮ ದೇಹ ರಿಲ್ಯಾಕ್ಸ್ ಮಾಡಿಕೊಳ್ಳಲು ಆಗಾಗ ಏನು ಮಾಡುತ್ತೇವೆ? ಮೈಮುರಿಯುವುದು, ಸ್ವಲ್ಪ ಎದ್ದು ಅತ್ತಿತ್ತ ಓಡಾಡುವುದು, ಅಥವಾ ಟೀ, ಕಾಫಿಯಂತಹವನ್ನು ಕುಡಿಯುವುದು ಮುಂತಾದ ಕೆಲಸಗಳನ್ನು ಮಾಡುತ್ತೇವೆ. ಆದರೆ ಇವುಗಳ ಜತೆಗೆ ಇನ್ನೊಂದು ಸಹ ಪಟ್ಟಿಯಲ್ಲಿದೆ. ಅದೇ ನೆಟಿಗೆ ಮುರಿಯುವುದು. ಚೆನ್ನಾಗಿ ನೋವಿದ್ದಾಗ ಅಥವಾ ಕಂಪ್ಯೂಟರ್ ಕೀಬೋರ್ಡ್ ಮೇಲೆ ಹೆಚ್ಚಾಗಿ ಕೆಲಸ ಮಾಡುವವರು ತಮ್ಮ ಕೈ ಬೆರಳುಗಳನ್ನು ಹೆಚ್ಚಾಗಿ ಮುರಿಯುತ್ತಾರೆ. ಈ ರೀತಿ ಮುರಿಯುವ ಕ್ರಮದಲ್ಲಿ ಟಕ್ ಎಂಬ ಶಬ್ದ ಸಹ ಬರುತ್ತದೆ. ಆ ಶಬ್ದ ಯಾಕೆ ಬರುತ್ತದೆ? ಅದರಿಂದ ಲಾಭವೇ? ನಷ್ಟವೇ? ತಿಳಿದುಕೊಳ್ಳೋಣ ಬನ್ನಿ.


ಕೈ ಬೆರಳಿನ ಜಾಯಿಂಟ್‌ಗಳಲ್ಲಿ ಸೈನೋವಿಯಲ್ ದ್ರವ ಇರುತ್ತದೆ. ಇದರಲ್ಲಿ ಒಂದು ವಿಧವಾದ ಗ್ಯಾಸ್ ಆಗಾಗ ತುಂಬುಕೊಳ್ಳುತ್ತಿರುತ್ತದೆ. ಇದರಿಂದ ಕೈ ಬೆರಳುಗಳನ್ನು ಮುರಿದಾಗ ಈ ಗ್ಯಾಸ್ ನಿವಾರಣೆಯಾಗಿ ಅದರ ಜಾಗದಲ್ಲಿ ನಮಗೆ ಶಬ್ದ ಕೇಳುತ್ತದೆ. ಆದರೆ ಈ ರೀತಿ ಕೈ ಬೆರಳುಗಳನ್ನು ಮುರಿಯುವುದರಿಂದ ನಮಗೆ ಲಾಭವೇ ಆಗುತ್ತದಂತೆ. ನಷ್ಟ ಎಂದುಕೊಂಡರೆ ಅದು ಕೇವಲ ಊಹಾಪೋಹ ಅಷ್ಟೆ. ಈ ರೀತಿ ಮಾಡುವುದರಿಂದ ಕೀಲುನೋವು, ಸಂಧಿವಾತದಂಥ ಸಮಸ್ಯೆಗಳು ಬರಲ್ಲ.
ಕೆಲವು ಸಂಶೋಧಕರು ಇದೇ ವಿಷಯದ ಮೇಲೆ ’ಫುಲ್ ಮೈ ಫಿಂಗರ್ ಸ್ಟಡಿ’ ಹೆಸರಿನಲ್ಲಿ ಸಂಶೋಧನೆಯೊಂದನ್ನು ಮಾಡಿದರು. ಈ ಹಿನ್ನೆಲೆಯಲ್ಲಿ ಅವರು ಒಬ್ಬ ವ್ಯಕ್ತಿ ತನ್ನ ಕೈ ಬೆರಳನ್ನು ಮುರಿದಾಗ ಏನು ನಡೆಯುತ್ತದೆ ಎಂದು ತಿಳಿದುಕೊಳ್ಳಲು ಎಂಆರ್‌ಐ ಸಲಕರಣೆ ಮೂಲಕ ದಾಖಲು ಮಾಡಿದರು. ಈ ಸಂಶೋಧನೆಗೆ ಗ್ರೆಗ್‌ಚಕ್ ಎಂಬ ಶಾಸ್ತ್ರಜ್ಞ ನಾಯಕತ್ವ ವಹಿಸಿದ.

ವ್ಯಾಕ್ಯೂಮ್‌ನಿಂದ ತುಂಬಿರುವ ವಿಶೇಷವಾದ ಕೇಬಲ್ ಒಂದನ್ನು ಸಂಶೋಧನೆಯಲ್ಲಿ ಪಾಲ್ಗೊಂಡ ವ್ಯಕ್ತಿ ಬೆರಳುಗಳಿಗೆ ಹಾಕಿದರು. ಇದನ್ನು ಎಂಆರ್‌ಐ ಸಲಕರಣೆಗೆ ಜೋಡಿಸಿದರು. ಈ ಕ್ರಮದಲ್ಲಿ ಆ ವ್ಯಕ್ತಿ ಕೈ ಬೆರಳುಗಳನ್ನು ಮುರಿದಾಗ ಜೋಡಿಸಿದ ಕೇಬಲ್ ಎಳೆಯಲ್ಪಟ್ಟು ಎಂಆರ್‌ಐ ಸಲಕರಣೆ ಸ್ಕ್ಯಾನಿಂಗ್ ಮಾಡಿ ದಾಖಲು ಮಾಡಿತು. ಎಂದಿನಂತೆ ಈ ಬಾರಿಯೂ ಟಕ್ ಎಂಬ ಶಬ್ದ ಕೇಳಿಸಿತು. ಆದರೆ ಈ ಪ್ರಯೋಗ ಮಾತ್ರ ಸಾಕಷ್ಟು ಉಪಯಕ್ತವಾಗುತ್ತದೆಂದು ಆ ಶಾಸ್ತ್ರಜ್ಞರು ಹೇಳಿದ್ದಾರೆ. ಈ ರೀತಿ ಕೈ ಬೆರಳು ಮುರಿಯುವುದರಿಂದ ಇನ್ನೂ ಅನೇಕ ಲಾಭ, ನಷ್ಟಗಳನ್ನು ತಿಳಿದುಕೊಳ್ಳಬಹುದು ಎಂದಿದ್ದಾರೆ ಶಾಸ್ತ್ರಜ್ಞರು.

No comments