Header Ads

test

ಚರ್ಮ ಸಂರಕ್ಷಣೆಗಾಗಿ ಅಷ್ಟೇ ಅಲ್ಲ... ವ್ಯಾಸಲೀನ್ ಈ ರೀತಿಯೂ ನಮಗೆ ಉಪಯೋಗಕ್ಕೆ ಬರುತ್ತದೆ ಗೊತ್ತಾ...?

ವ್ಯಾಸಲೀನ್. ಚಳಿಗಾಲ ಬಂತೆಂದರೆ ಸಾಕು ಇದನ್ನು ಬಹಳಷ್ಟು ಮಂದಿ ಬಳಸುತ್ತಾರೆ. ಒಡೆದ ಚರ್ಮಕ್ಕೆ ರಕ್ಷಣೆ ನೀಡುವ ಸಲುವಾಗಿ, ಚರ್ಮ ಮೃದುವಾಗಿ ಬದಲಾಗಲು, ಒಣ ಚರ್ಮ ಮೃದುವಾಗಲು ಇದನ್ನು ಬಳಸಲಾಗುತ್ತದೆ. ಆದರೆ ನಿಮಗೆ ಗೊತ್ತಾ...? ವ್ಯಾಸಲೀನ್ ಕೇವಲ ಈ ಕೆಲಸಕ್ಕಷ್ಟೇ ಅಲ್ಲ, ಇನ್ನೂ ಹಲವು ರೀತಿಯ ಕೆಲಸಗಳಿಗೆ ಸಹ ಇದು ನಮಗೆ ಉಪಯುಕ್ತ. ಆ ಕೆಲಸಗಳು ಏನು ಎಂಬುದು ಗೊತ್ತಾದರೆ ನೀವು ಚಕಿತರಾಗುತ್ತೀರ. ಹಾಗಿದ್ದರೆ ವ್ಯಾಸಲೀನ್ ನಾವು ಯಾವೆಲ್ಲಾ ರೀತಿ ಬಳಸಬಹುದು ಎಂಬುದನ್ನು ಈಗ ತಿಳಿದುಕೊಳ್ಳೋಣವೇ...!


1. ಮೇಕಪ್ ರಿಮೂವರ್

ಮೇಕಪ್ ತೆಗೆಯಲು ಮಹಿಳೆಯರಿಗೆ ಮಾರುಕಟ್ಟೆಯಲ್ಲಿ ನಾನಾ ರೀತಿಯ ಮೇಕಪ್ ರಿಮೂವರ್ಸ್ ಸಿಗುತ್ತವೆ. ಆದರೆ ಅವುಗಳ ಗೊಡವೆ ಇಲ್ಲದೆ ಕೇವಲ ವ್ಯಾಸಲೀನ್ ಮೂಲಕ ಮೇಕಪನ್ನು ತೆಗೆಯಬಹುದು. ಇದಕ್ಕಾಗಿ ಏನು ಮಾಡಬೇಕೆಂದರೆ ಸ್ವಲ್ಪ ವ್ಯಾಸಲೀನ್ ತೆಗೆದುಕೊಂಡು ಮುಖದ ಮೇಲೆ ಮಸಾಜ್ ಮಾಡಿದಂತೆ ಮಾಡಬೇಕು. ಬಳಿಕ ಟಿಶ್ಯೂ ಪೇಪರ್‌ನಿಂದ ವರೆಸಿ ನೀರಿನಲ್ಲಿ ತೊಳೆಯಬೇಕು. ಇದರಿಂದ ಮೇಕಪ್ ಹೋಗುತ್ತದೆ.

2. ವಕ್ಷೋಜಗಳು
ಕೆಲವು ಮಹಿಳೆಯರು ತಮ್ಮ ವಕ್ಷೋಜಗಳು ತುಂಬಾ ಚಿಕ್ಕದಾಗಿವೆ ಎಂದು ಕೊರಗುತ್ತಿರುತ್ತಾರೆ. ಆದರೆ ಅವರು ವ್ಯಾಸಲೀನ್ ಬಳಸಿ ತಮ್ಮ ವಕ್ಷೋಜಗಳ ಸೈಜನ್ನು ಬೆಳೆಸಿಕೊಳ್ಳಬಹುದು. ನಿತ್ಯ ಸ್ವಲ್ಪ ವ್ಯಾಸಲೀನ್ ತೆಗೆದುಕೊಂಡು ವಕ್ಷೋಜಗಳಿಗೆ ಹಚ್ಚಿ 5 ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳಬೇಕು. ಈ ರೀತಿ ಮಾಡಿದರೆ ಸ್ವಲ್ಪ ದಿನಗಳಿಗೆ ವಕ್ಷೋಜಗಳ ಸೈಜ್ ಹೆಚ್ಚಾಗುತ್ತದೆ.

3. ಪರ್‌ಫ್ಯೂಮ್
ಇಂದು ನಮಗೆ ಮಾರುಕಟ್ಟೆಯಲ್ಲಿ ಸಾಕಷ್ಟು ರೀತಿಯ ಅತ್ತರು ಲಭಿಸುತ್ತಿವೆ. ಆದರೆ ಯಾವುದೇ ಅತ್ತರು ಬಳಸಿದರೂ ಅದನ್ನು ಸಿಂಪಡಿಸಿಕೊಂಡ ಸ್ವಲ್ಪ ಹೊತ್ತಿನವರೆಗೆ ಮಾತ್ರ ವಾಸನೆ ಇರುತ್ತದೆ. ಆದರೆ ವ್ಯಾಸಲೀನ್‌ನಿಂದ ಆ ವಾಸನೆ ಹೆಚ್ಚು ಹೊತ್ತು ಇರುವಂತೆ ಮಾಡಬಹುದು. ಇದಕ್ಕೆ ಏನು ಮಾಡಬೇಕೆಂದರೆ.... ಸ್ವಲ್ಪ ವ್ಯಾಸಲೀನ್ ತೆಗೆದುಕೊಂಡು ಕಂಕುಳ ಕೆಳಗೆ ಹಚ್ಚಿಕೊಳ್ಳಬೇಕು. ಬಳಿಕ ಪರ್‌ಫ್ಯೂಮ್ ಸಿಂಪಡಿಸಿಕೊಳ್ಳಬೆಕು. ಇದರಿಂದ ಆದರ ವಾಸನೆ ಹೆಚ್ಚು ಹೊತ್ತು ಇರುತ್ತದೆ.

4. ಕೂದಲು
ಕೆಲವು ಮಹಿಳೆಯರ ಮುಖದ ಮೇಲೆ ಅನಗತ್ಯ ರೋಮಗಳು ಇರುತ್ತವೆ. ಅದನ್ನು ಸುಲಭವಾಗಿ ತೆಗೆಯಲು ವ್ಯಾಸಲೀನ್ ಉಪಯೋಗಕ್ಕೆ ಬರುತ್ತದೆ. ಅದಕ್ಕಾಗಿ ಏನು ಮಾಡಬೇಕೆಂದರೆ ವ್ಯಾಸಲೀನನ್ನು ಕೂದಲ ಮೇಲೆ ಹಚ್ಚಿಕೊಂಡು ಕಿತ್ತರೆ ಸಾಕು, ಉರಿಯಾಗಲ್ಲ, ನೋವು ಕಾಣಿಸಲ್ಲ. ಕೂದಲು ಕೂಡಲೆ ಬರುತ್ತದೆ.

5. ಕಣ್ಣು ರೆಪ್ಪೆಗಳು
ಕಣ್ಣಿನ ರೆಪ್ಪೆಗಳಿಗೆ ಇರುವ ಕೂದಲು ದಟ್ಟವಾಗಿ ಬೆಳೆಯಬೇಕೆಂದು ಕೆಲವರು ಬಯಸುತ್ತಾರೆ. ಇದಕೆ ವ್ಯಾಸಲೀನ್ ಉಪಯೋಗಕ್ಕೆ ಬರುತ್ತದೆ. ನಿತ್ಯ ರಾತ್ರಿ ಮಲಗುವ ಮುನ್ನ ಕಣ್ಣಿನ ರೆಪ್ಪೆಗಳ ಮೇಲೆ ವ್ಯಾಸ್ಸಲೀನ್ ಹಚ್ಚಿಕೊಳ್ಳಬೇಕು. ರಾತ್ರಿಯಲ್ಲಾ ಹಾಗೆಯೇ ಬಿಟ್ಟು ಬೆಳಗ್ಗೆ ತೊಳೆದುಕೊಳ್ಳಬೇಕು. ಇದರಿಂದ ಸ್ವಲ್ಪ ದಿನಗಳಲ್ಲಿ ಕಣ್ಣಿನ ರೆಪ್ಪೆಗಳು ದಟ್ಟವಾಗಿ ಬೆಳೆಯುತ್ತವೆ.

6. ಕೂದಲು
ಕೆಲವರಿಗೆ ಕೂದಲ ಕೊನೆಯಲ್ಲಿ ಸೀಳಿದಂತೆ ಆಗುತ್ತದೆ. ಕೂದಲು ಹೊಳಪು ಕಳೆದುಕೊಳ್ಳುತ್ತದೆ. ಅಂತಹವರು ಏನು ಮಾಡಬೇಕೆಂದರೆ ವ್ಯಾಸಲೀನನ್ನು ಆ ಕೂದಲಿಗೆ ಅಪ್ಲೈ ಮಾಡಿ ಸ್ವಲ್ಪ ಸಮಯದ ಬಳಿಕ ಶಾಂಪೂ ಬಳಸಿ ತಲೆಗೆ ಸ್ನಾನ ಮಾಡಬೇಕು. ಇದರಿಂದ ಕೂದಲು ಸೀಳುವುದು ಕಡಿಮೆಯಾಗುತ್ತದೆ. ಆದರೆ ಪದೇಪದೇ ಈ ರೀತಿ ವ್ಯಾಸಲೀನ್ ಬಳಸಬಾರದು. ಪ್ರತಿಫಲ ಸಿಗುತ್ತಿದ್ದಂತೆ ಈ ರೀತಿ ಬಳಸುವುದನ್ನು ಬಿಡಬೇಕು.

7. ಕೊಯ್ದ ಗಾಯಗಳಿಗೆ
ಕೂದಲನ್ನು ಶೇವ್ ಮಾಡುವಾಗ ಕೆಲವರಿಗೆ ಚರ್ಮ ಹಾನಿಗೊಳಗಾಗುತ್ತದೆ. ಅದರ ಮೇಲೆ ಸ್ವಲ್ಪ ವ್ಯಾಸಲೀನ್ ಅಪ್ಲೈ ಮಾಡಿದರೆ ಸಾಕು, ಉರಿ ಕಡಿಮೆಯಾಗುತ್ತದೆ. ಆ ಗಾಯ ಸಹ ಸ್ವಲ್ಪ ಕಡಿಮೆಯಾಗುತ್ತದೆ.

No comments