Header Ads

test

ಈ ಹಣ್ಣುನ್ನು ಊಟಕ್ಕೆ ಮೊದಲು ತಿಂದರೆ ಎಲ್ಲ ತರದ ಅನಾರೋಗ್ಯ ಸಮಸ್ಯೆಗಳು ಗುಣವಾಗುತ್ತವೆ.!

ಅಂಜೂರ.ಈ ಹಣ್ಣಿನ ಬಗ್ಗೆ ನೀವು ಕೇಳಿಯೇ ಇರುತ್ತೀರ. ಇದನ್ನು ಕನ್ನಡದಲ್ಲಿ ಅತ್ತಿಹಣ್ಣು ಎಂದು ಸಹ ಕರೆಯುತ್ತಾರೆ. ಚೆನ್ನಾಗಿ ಮಾಗಿದ ಈ ಹಣ್ಣನ್ನು ಒಣಗಿಸಿ ಡ್ರೈ ಫ್ರೂಟ್ಸ್ ರೂಪದಲ್ಲಿ ಸಹ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಆದರೆ ಈ ಹಣ್ಣನ್ನು ಹೇಗೆ ತಿಂದರೂ ಸಹ ನಮಗೆ ಅದರಿಂದ ಅನೇಕ ರೀತಿಯ ಪ್ರಯೋಜನಗಳು ಉಂಟಾಗುತ್ತವೆ. ಮುಖ್ಯವಾಗಿ ಒಂದೆರಡು ಅಂಜೂರ ಹಣ್ಣುಗಳನ್ನು ನಿತ್ಯ ಊಟಕ್ಕೆ ಮುನ್ನ ತಿಂದರೆ ಅದರಿಂದ ಸಾಕಷ್ಟು ಲಾಭಗಳನ್ನು ಪಡೆಯಬಹುದು. ಅವು ಏನು ಎಂದು ಈಗ ನೋಡೋಣ.



1. ಅಂಜೂರ ಹಣ್ಣಿನಲ್ಲಿ ಫೈಬರ್ ಬೇಕಾದಷ್ಟು ಇರುತ್ತದೆ. ಇದು ನಾವು ತಿಂದ ಆಹಾರವನ್ನು ಸುಲಭವಾಗಿ ಜೀರ್ಣ ಮಾಡಲು ಉಪಯೋಗಕ್ಕೆ ಬರುತ್ತದೆ. ಜೀರ್ಣ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡುತ್ತದೆ. ಗ್ಯಾಸ್, ಅಸಿಡಿಟಿ, ಮಲಬದ್ಧತೆಯಂತಹ ಜೀರ್ಣ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.

2. ಅಂಜೂರದಲ್ಲಿ ಪೊಟ್ಯಾಷಿಯಂ, ಸೋಡಿಯಂ ಹೇರಳವಾಗಿದೆ. ಇದು ರಕ್ತದ ಒತ್ತಡ (ಬಿಪಿ) ಸಮಸ್ಯೆಯಿಂದ ಉಪಶಮನ ನೀಡುತ್ತದೆ. ಬಿಪಿಯನ್ನು ಕಂಟ್ರೋಲ್‌ನಲ್ಲಿ ಇಡುತ್ತದೆ.

3. ರಕ್ತಹೀನತೆ ಸಮಸ್ಯೆ ಇಂದು ಬಹಳಷ್ಟು ಮಂದಿಯನ್ನು ಕಾಡುತ್ತಿದೆ. ಆದರೆ ಅಂತಹವರು ನಿತ್ಯ ಎರಡು ಅಂಜೂರವನ್ನು ಊಟಕ್ಕೂ ಮುನ್ನ ತಿಂದರೆ ಅವರಲ್ಲಿ ರಕ್ತ ಹೆಚ್ಚುತ್ತದೆ. ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ. ಮಲೇರಿಯಾ, ಟೈಫಾಯಿಡ್, ಡೆಂಗ್ಯೂನಂತಹ ವಿಷಮ ಜ್ವರದಿಂದ ಬಳಲುತ್ತಿರುವವರಲ್ಲಿ ಪ್ಲೇಟ್‌ಲೆಟ್‌ಗಳು ಕಡಿಮೆಯಾದವರಿಗೆ ತಿನ್ನಿಸಿದರೆ ಕೂಡಲೆ ಪ್ಲೇಟ್‌ಲೆಟ್‍ಗಳು ಹೆಚ್ಚುತ್ತವೆ.

4. ಅಧಿಕ ತೂಕದ ಸಮಸ್ಯೆ ಸಹ ಈಗ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂಜೂರ ಹಣ್ಣನ್ನು ಎರಡು ಹೊತ್ತು ಊಟಕ್ಕೂ ಮುನ್ನ ತಿಂದರೆ ಅದರಿಂದ ಹೊಟ್ಟೆ ತುಂಬಿದ ಭಾವನೆ ಉಂಟಾಗುತ್ತದೆ. ಇದರಿಂದ ಹೆಚ್ಚಾಗಿ ತಿನ್ನುವುದು ತಪ್ಪುತ್ತದೆ. ಪ್ರತಿಫಲವಾಗಿ ತೂಕ ಕಡಿಮೆಯಾಗುತ್ತಾರೆ. ಅಷ್ಟೇ ಅಲ್ಲ ಅಂಜೂರದಲ್ಲಿ ಇರುವ ಪೋಷಕಗಳು ನಮ್ಮ ದೇಹದಲ್ಲಿನ ಕೆಟ್ಟ ಕೊಲೆಸ್ಟರಾಲನ್ನು ಸಹ ಕಡಿಮೆ ಮಾಡುತ್ತವೆ.

5. ನಿತ್ಯ ಅಂಜೂರ ಹಣ್ಣನ್ನು ತಿನ್ನುತ್ತಿದ್ದರೆ ಹೃದಯ ಸಂಬಂಧಿ ಸಮಸ್ಯೆಗಳು ಸಹ ದೂರವಾಗುತ್ತವೆ. ಅಂಜೂರ ಹಣ್ಣಿನಲ್ಲಿ ಇರುವ ಪೆಕ್ಟಿನ್ ಎಂಬ ಪದಾರ್ಥ ದೇಹದಲ್ಲಿನ ವ್ಯರ್ಥ ಪದಾರ್ಥಗಳನ್ನು ತೊಲಗಿಸುತ್ತದೆ. ರಕ್ತವನ್ನು ಸ್ವಚ್ಛಗೊಳಿಸುತ್ತದೆ.

6. ಅಂಜೂರ ಹಣ್ಣಿನಲ್ಲಿ ಮೆಗ್ನಿಷಿಯಂ, ಮ್ಯಾಂಗನೀಸ್, ಜಿಂಕ್ ಸಮೃದ್ಧವಾಗಿ ಇದೆ. ಇವು ಸಂತಾನ ಬಯಸಿರುವವರಿಗೆ ಒಳಿತು ಮಾಡುತ್ತವೆ.

7. ದೇಹದ ರೋಗ ನಿರೋಧಕ ವ್ಯವಸ್ಥೆ ಚೆನ್ನಾಗಿ ಆಗುತ್ತದೆ. ಕ್ಯಾನ್ಸರ್‌ಗೆ ಕಾರಣವಾಗುವ ಪದಾರ್ಥಗಳು ನಾಶವಾಗುತ್ತವೆ.

8. ಅಂಜೂರ ಹಣ್ಣು ಮಧುಮೇಹ ಇರುವವರಿಗೆ ಅದೆಷ್ಟೋ ಒಳಿತು ಮಾಡುತ್ತದೆ. ಊಟಕ್ಕೆ ಮುನ್ನ ಇವನ್ನು ತಿಂದರೆ ಆ ಬಳಿಕ ರಕ್ತದಲ್ಲಿ ಸಕ್ಕರೆ ಪ್ರಮಾಣ ಅಷ್ಟಾಗಿ ಹೆಚ್ಚಾಗಲ್ಲ.

9. ಅಸ್ತಮಾ ದಂತಹ ಶ್ವಾಸಕೋಶ ಸಮಸ್ಯೆಗಳು ಇರುವವರು ಅಂಜೂರದ ಹಣ್ಣು ತಿಂದರೆ ಆ ಅನಾರೋಗ್ಯ ಸಮಸ್ಯೆಗಳಿಂದ ಉಪಶಮನ ಪಡೆಯಬಹುದು.

10. ಅಂಜೂರ ಹಣ್ಣಿನಲ್ಲಿ ಕ್ಯಾಲ್ಸಿಯಂ ಸಹ ಹೇರಳವಾಗಿ ಇರುತ್ತದೆ. ಇವನ್ನು ತಿನ್ನುವುದರಿಂದ ಮೂಳೆಗಳು ದೃಢವಾಗುತ್ತವೆ. ಮೂಳೆ ಮುರಿದುಕೊಂಡವರಿಗೆ ಇಟ್ಟರೆ ಮೂಳೆಗಳು ಶೀಘ್ರವಾಗಿ ಕೂಡಿಕೊಳ್ಳುತ್ತವೆ.

11. ಗಂಟಲು ನೋವು ಇರುವವರು ಅಂಜೂರ ಹಣ್ಣನ್ನು ತಿಂದರೆ ಕೂಡಲೆ ಉಪಶಮ ಲಭಿಸುತ್ತದೆ. ಕೆಮ್ಮು ಕಡಿಮೆಯಾಗುತ್ತದೆ.

12, ಜ್ವರ, ಕಿವಿ ನೋವು, ಹೊಟ್ಟೆನೋವಿನಂತಹ ಸಮಸ್ಯೆಗಳು ಇದ್ದರೆ ಅಂಜೂರ ಹಣ್ಣನ್ನು ತಿನ್ನಬೇಕು. ಇದರಿಂದ ಆಯಾ ಸಮಸ್ಯೆಗಳಿಂದ ಉಪಶಮ ಲಭಿಸುತ್ತದೆ.

No comments