ರಾತ್ರಿ ಕೆಟ್ಟ ಕನಸು ಬೀಳಬಾರದು ಎಂದರೆ ಏನು ಮಾಡಬೇಕು ಗೊತ್ತಾ.?
ಜಗತ್ತೆಲ್ಲಾ ಇಂದು ಬಹಳ ವೇಗವಾಗಿ ಮುಂದೆ ಸಾಗುತ್ತಿದೆ. ಹಾಗಾಗಿ ನಮಗೆ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳಲು ದಿನಕ್ಕೆ 24 ಗಂಟೆಗಳ ಸಮಯ ಸಾಕಾಗುತ್ತಿಲ್ಲ. ಅಷ್ಟು ಬಿಝಿಯಾಗಿ ನಾವು ಕೆಲಸ ಮಾಡಿಕೊಳ್ಳುತ್ತಿದ್ದೇವೆ. ಆ ರೀತಿ ಬಿಝಿ ಆಗಿ ನಿದ್ದೆಯನ್ನೂ ಸರಿಯಾಗಿ ಮಾಡಲಾಗುತ್ತಿಲ್ಲ. ನಿತ್ಯ ಕನ್ನಿಷ್ಟ 8 ಗಂಟೆಗಳ ಅಲ್ಲ, 6 ಗಂಟೆ ಸಹ ಗುಣಮಟ್ಟದಿಂದ ಕೂಡಿದ ನಿದ್ದೆ ಮಾಡಲಾಗುತ್ತಿಲ್ಲ. ಕೆಲಸದ ಒತ್ತಡ, ಅನಾರೋಗ್ಯ ಸಮಸ್ಯೆಗಳ ಕಾರಣ ಬಹಳಷ್ಟು ಮಂದಿ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಪ್ರತಿಫಲವಾಗಿ ಅದು ಲೈಫ್ಸ್ಟೈಲ್ ಖಾಯಿಲೆಗಳಿಗೆ ಕಾರಣವಾಗುತ್ತಿದೆ. ಆದರೆ ಕೆಳಗೆ ನಾವು ಕೊಟ್ಟಂತಹ ಸೂಚನೆಗಳನ್ನು ಪಾಲಿಸಿದರೆ ನಿದ್ದೆಯನ್ನು ಚೆನ್ನಾಗಿ ಮಾಡಬಹುದು. ಆ ಸೂಚನೆಗಳು ಏನು ಎಂದು ಈಗ ತಿಳಿದುಕೊಳ್ಳೋಣ.
1. ಏಲಕ್ಕಿ
ಸ್ವಲ್ಪ ಏಲಕ್ಕಿ ತೆಗೆದುಕೊಂಡು ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಆ ವಸ್ತ್ರವನ್ನು ನಿಮ್ಮ ದಿಂಬಿನ ಪಕ್ಕದಲ್ಲಿ ಇಟ್ಟುಕೊಳ್ಳಿ. ಇದರಿಂದ ನಿದ್ದೆ ಚೆನ್ನಾಗಿ ಬರುತ್ತದೆ. ಹಾಸಿಗೆಗೆ ಹೊರಳಿದ ಕೂಡಲೆ ನಿದ್ದೆಗೆ ಜಾರುತ್ತೀರ. ಅಷ್ಟೇ ಅಲ್ಲ ಈ ರೀತಿ ಮಾಡುವುದರಿಂದ ಕೆಟ್ಟ ಕನಸುಗಳು ಬೀಳಲ್ಲ. ಬಹಳ ಹಾಯಾಗಿ ನಿದ್ರಿಸಬಹುದು.
2. ಪೊಸಿಷನ್
ದಕ್ಷಿಣದ ಕಡೆ ತಲೆಯಿಟ್ಟು, ಉತ್ತರದ ಕಡೆ ಕಾಲು ಇಟ್ಟು ನಿದ್ರಿಸಿದರೆ ಚೆನ್ನಾಗಿ ನಿದ್ದೆ ಬರುತ್ತದೆ. ವಾಸ್ತುಪ್ರಕಾರ ಅಂದುಕೊಂಡ ಕೆಲಸಗಳು ನೆರವೇರುತ್ತವೆ. ಲಕ್ ಕೂಡಿಬರುತ್ತದೆ.
3. ಧ್ಯಾನ
ನಿದ್ದೆ ಹೋಗುವ ಮುನ್ನ ಕನಿಷ್ಠ 5 ನಿಮಿಷಗಳ ಕಾಲ ಧ್ಯಾನ ಮಾಡಿದರೆ ಉತ್ತಮ ಪ್ರತಿಫಲ ಸಿಗುತ್ತದೆ. ಕಣ್ಣು ಮುಚ್ಚಿಕೊಂಡು ಯಾವುದಾದರೂ ಒಂದು ವಸ್ತುವಿನ ಮೇಲೆ ದೃಷ್ಟಿ ಕೇಂದ್ರೀಕರಿಸಬೇಕು. ಮನಸ್ಸನ್ನು ಆ ವಸ್ತುವಿನ ಮೇಲೆ ಕೇಂದ್ರೀಕರಿಸಬೇಕು. ಮನಸ್ಸಿನಲ್ಲಿ ಯಾವುದೇ ಇತರೆ ಆಲೋಚನೆ ಬರಲು ಬಿಡಬಾರದು. ಇದರಿಂದ ಮನಸ್ಸು ಪ್ರಶಾಂತವಾಗಿ, ಹಗುರವಾಗಿ ಒಳ್ಳೆಯ ನಿದ್ದೆ ಬರುತ್ತದೆ.
4. ರಾಗಿ ಪಾತ್ರೆ
ಒಂದು ರಾಗಿ ಚೆಂಬು ಅಥವಾ ಪಾತ್ರೆ, ಗ್ಲಾಸ್ನಲ್ಲಿ ನೀರು ತುಂಬಿಡಬೇಕು. ಬಳಿಕ ಅದನ್ನು ದಿಂಬಿನ ಪಕ್ಕ ಟೇಬಲ್ ಮೇಲೆ ಇಟ್ಟುಕೊಂಡು ನಿದ್ರಿಸಬೇಕು. ಈ ರೀತಿ ಮಾಡುವುದರಿಂದ ಒಳ್ಳೆಯ ನಿದ್ದೆ ಬರುತ್ತದೆ. ವಾಸ್ತುದೋಷ ನಿವಾರಣೆಯಾಗುತ್ತದೆ. ಕೆಟ್ಟ ಕನಸು ಬೀಳಲ್ಲ. ಆದರೆ ಈ ರೀತಿ ಇಟ್ಟುಕೊಂಡ ನೀರನ್ನು ಕುಡಿಯಬಾರದು. ಗಿಡಗಳಿಗೆ ಹಾಕಿದರೆ ಒಳ್ಳೆಯದಾಗುತ್ತದೆ.
5.ಶೂಸ್
ನಿದ್ರಿಸುವ ಹಾಸಿಗೆ ಸಮೀಪವೇ ಚಪ್ಪಲಿ, ಬೂಟುಗಳನ್ನು ಬಿಡಬಾರದು. ಅದೇ ರೀತಿ ಅವುಗಳನ್ನು ಇಡುವ ರ್ಯಾಕ್ಸ್ ಸಹ ಹಾಸಿಗೆಯಿಂದ ದೂರ ಇಡಬೇಕು. ಅವುಗಳನ್ನು ಬೆಡ್ ಪಕ್ಕದಲ್ಲಿ ಇಟ್ಟುಕೊಳ್ಳಬಾರದು. ಇಟ್ಟರೆ ನೆಗಟೀವ್ ಎನರ್ಜಿ ಪ್ರಸಾರವಾಗುತ್ತದೆ. ಅದು ವಾಸ್ತು ದೋಷಗಳನ್ನು ಉಂಟು ಮಾಡುತ್ತದೆ. ನಿದ್ದೆಗೆ ಭಂಗವಾಗುತ್ತದೆ. ದುಃಸ್ವಪ್ನಗಳು ಬೀಳುತ್ತವೆ.

Post a Comment