Header Ads

test

ವಿದ್ಯಾರ್ಥಿಯನ್ನು ಮೊಳಕಾಲ ಮೇಲೆ ಬೇಡಿಕೊಳ್ಳುತ್ತಿರುವ ಹೆಡ್ ಮಾಸ್ಟರ್.! ಯಾಕೆ ಗೊತ್ತಾ.? ನಿಜವಾಗಿಊಹಿಸಿರಲ್ಲ.!

ತರಗತಿ ಕೋಣೆಯಲ್ಲಿ ಒಬ್ಬ ವಿದ್ಯಾರ್ಥಿ ಮೊಳಕಾಲ ಮೇಲೆ ನೆಲದ ಮೇಲೆ ಕುಳಿತಿದ್ದಾನೆ. ಆತನ ಪಕ್ಕದಲ್ಲಿ ಹೆಡ್ ಮಾಸ್ಟರ್ ಸಹ ಅದೇ ರೀತಿ ಕುಳಿತು ಆ ವಿದ್ಯಾರ್ಥಿಗೆ ಕೈಮುಗಿಯುತ್ತಿದ್ದಾನೆ. ಈ ವಿಧವಾಗಿ ಇರುವ ಫೋಟೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.. ಆ ಸ್ಟುಡೆಂಟ್ ತಪ್ಪು ಮಾಡಿದ ಕಾರಣ ಶಿಕ್ಷೆ ಅನುಭವಿಸುತ್ತಿದ್ದಾನೆಂದು ಭಾವಿಸೋಣ. ಹಾಗಿದ್ದರೆ ಅವರ್ಯಾಕೆ ಆ ರೀತಿ ಕುಳಿತಿದ್ದಾರೆ?ಯಾಕೆ ಕೈಮುಗಿಯುತ್ತಿದ್ದಾರೆ.? ಇಷ್ಟಕ್ಕೂ ಅವರ್ಯಾಕೆ ನಮಸ್ಕರಿಸುತ್ತಿದ್ದಾರೆ ಎಂದು ಗೊತ್ತಾದರೆ ನಾವು ಅವರಿಗೆ ಕೈಮುಗಿಯಲೇಬೇಕು ಅನ್ನಿಸುತ್ತದೆ.!



ವಿಲ್ಲುಪುರದಲ್ಲಿನ ಸರಕಾರಿ ಪಾಠಶಾಲೆ ಹೆಡ್‌ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ ಬಾಲು. ಅವರ ವಯಸ್ಸು 56 ವರ್ಷಗಳು, 30 ವರ್ಷಗಳಿಂದ ಉಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣದಲ್ಲಿ ಆಸಕ್ತಿ ಇಲ್ಲದೆ ಕೆಲಸ ಬಿಟ್ಟ ಹುಡುಗರು, ಶಾಲೆಗೆ ಗುಡ್ ಬೈ ಹೇಳಿ ಅಲೆದಾಡುವ ಮಕ್ಕಳು, ಓದನ್ನು ನಿರ್ಲಕ್ಷ್ಯ ಮಾಡುವ ಮಕ್ಕಳ ಮನೆಗೆ ಅವರು ಪ್ರತಿನಿತ್ಯ ಹೋಗುತ್ತಾರೆ. ವಿಚಿತ್ರ ಏನೆಂದರೆ ಆ ಮಕ್ಕಳು ನಾವು ಓದಿಕೊಳ್ಳಲ್ಲ ಎಂದು ಗೋಗರೆಯುತ್ತಾರೆ. ಎಷ್ಟು ಹೇಳಿದರೂ ಕೇಳದಿದ್ದರೆ ಕೈಹಿಡಿದು ಬೇಡಿಕೊಳ್ಳುತ್ತಾರೆ. ಅಲ್ಲಿಗೂ ದಾರಿಗೆ ಬರದಿದ್ದರೆ ವಿದ್ಯಾರ್ಥಿಗಳ ಕಾಲುಗಳನ್ನು ಹಿಡಿದು ಓದಿಕೊಳ್ರೋ ಎಂದು ಕಣ್ಣೀರಾಕುತ್ತಾರೆ. ಆ ಫೋಟೋದಲ್ಲಿರುವ ಬಾಲಕ 12ನೇ ತರಗತಿ ಓದಿಕೊಂಡಿದ್ದಾನೆ. ಶಾಲೆಗೆ ಬರದೆ ಚಕ್ಕರ್ ಹಾಕುವ ವಿದ್ಯಾರ್ಥಿಯನ್ನು ಬೇಡಿಕೊಳ್ಳುತ್ತಿದ್ದಾರೆ. ವಿಲ್ಲುಪುರಂ ಸುತ್ತಮುತ್ತಲೆಲ್ಲಾ ಮೀನುಗಾರ ಕುಟುಂಬಗಳೇ ಇರುವ ಕಾರಣ ಓದಿಕೊಳ್ಳದೆ ಕೆಲಸ ಮಾಡುತ್ತಿರುತ್ತಾರೆ. ಅಂತಹವರನ್ನೆಲ್ಲಾ ಕರೆತಂದು ಬಾಲು ಮಾಸ್ಟರ್ ಶಿಕ್ಷಣ ಕೊಟ್ಟ ಕಾರಣ ಅವರೆಲ್ಲಾ ಇಂಜಿನಿಯರ್‌ಗಳು, ಡಾಕ್ಟರ್‌ಗಳು ಆಗಿದ್ದಾರೆ.

ಈ ಹಿಂದೆ ಪ್ಲಸ್ 2 ಪರೀಕ್ಷೆಗಳಲ್ಲಿ ಶೇ.25 ಮಾತ್ರ ಉತ್ತೀರ್ಣರಾಗುತ್ತಿದ್ದರು, ಈಗ ಅದು ಶೇ.65ರಷ್ಟು ಹೆಚ್ಚಾಗಿದೆ. ಇದು ಖಚಿತವಾಗಿ ಬಾಲು ಮಾಸ್ಟರ್ ಕೃಷಿಯಿಂದ ಸಾಧ್ಯವಾಗಿದೆ. ವಿದ್ಯಾರ್ಥಿಗಳನ್ನು ಬೇಡಿಕೊಳ್ಳುವುದನ್ನು ತಾನು ಅವಮಾನ ಎಂದು ಭಾವಿಸಲ್ಲ ಎನ್ನುತ್ತಾರವರು. ಆ ರೀತಿ ತನ್ನ ಬಳಿ ಶಿಕ್ಷಣ ಪಡೆದ ವಿದ್ಯಾರ್ಥಿಗಳೆಲ್ಲಾ ಉನ್ನತ ಸ್ಥಾನದಲ್ಲಿ ಇರುವುದು ತನಗೆ ಸಂತೋಷದ ಸಂಗತಿ ಎನ್ನುತ್ತಾರೆ ಅವರು. ಗುರು ಬ್ರಹ್ಮ.ಗುರು ವಿಷ್ಣು.ಗುರು ದೇವೋ ಮಹೇಶ್ವರ.ಎಂಬ ಮಾತಿಗೆ ಅರ್ಥಗಳು ಬದಲಾಗಿದ್ದರೂ. ಗುರುಗಳೆಂದರೆ ಜೋಕರ್ ಆಗಿ ತೋರಿಸುವ ಸಿನಿಮಾಗಳು, ಧಾರಾವಾಹಿಗಳು ಒಂದು ಕಡೆ.ಓದು ವ್ಯಾಪಾರಿ ಸರಕಾಗಿರುವುದು.. ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು, ಅವರು ಬೆಳೆದ ಪರಿಸ್ಥಿತಿಗಳು ಓದಿನ ಕಡೆಗೆ, ಗುರುವಿನ ಕಡೆಗೆ ಗೌರವ ಇಲ್ಲದಂತೆ ಮಾಡುತ್ತಿವೆ. ಮಕ್ಕಳು ಶಾಲೆಗೆ ಬರದಿದ್ದರೆ ಕೈಲಿ ಬಡಿಗೆ ಹಿಡಿಯುವ ಮಾಸ್ಟರ್‌ಗಳನ್ನು ನೋಡಿದ್ದೇವೆ. ಕೈಮುಗಿಯುವ ಮೇಷ್ಟ್ರುಗಳಿರುವುದು ನಿಜವಾಗಿಯೂ ಗ್ರೇಟ್ ಅಲ್ಲವೇ.. ಹ್ಯಾಟ್ಸಾಪ್ ಸಾರ್.

2 comments: