Header Ads

test

ಸಲೂನ್‍ನಲ್ಲಿ ಕತ್ತು ತಿರುಗಿಸುವ ಮಸಾಜ್ ಮಾಡಿಸುತ್ತಿದ್ದೀರಾ.? ಆದರೆ ಇದನ್ನು ಓದಿದರೆ ಇನ್ನು ಮುಂದೆ ಆ ಕೆಲಸಮಾಡಲ್ಲ ಗೊತ್ತೇ.!

ಸಲೂನ್‌ನಲ್ಲಿ ಕಟಿಂಗ್ ಮಾಡಿಸಿಕೊಂಡ ಬಳಿಕ ಬಹಳಷ್ಟು ಮಂದಿ ಮಸಾಜ್ ಮಾಡಿಸಿಕೊಳ್ಳುತ್ತಾರೆ.ಆಯಿಲ್‌ನಿಂದ ತಲೆಗೆ ಮಸಾಜ್ ಮಾಡಿಸುತ್ತಾರೆ. ಆ ಬಳಿಕ ಕತ್ತನ್ನು ಮುರಿದಂತೆ ಎರಡೂ ಕಡೆಗೆ ತಿರುಗಿಸುತ್ತಾರೆ. ಇದರಿಂದ ತುಂಬಾ ಹಾಯಾಗಿ ಇರುತ್ತದೆ ಎಂದು ಬಹಳಷ್ಟು ಮಂದಿ ಭಾವಿಸುತ್ತಾರೆ. ಆದರೆ ಹಾಯಾಗಿರುವ ಮಾತು ಬಿಡಿ.ಇಷ್ಟಕ್ಕೂ ಈ ರೀತಿ ಕತ್ತನ್ನು ಮುರಿದಂತೆ ಮಸಾಜ್ ಮಾಡಿಸಿಕೊಳ್ಳುವುದು ಮಾತ್ರ ತುಂಬಾ ಅಪಾಯ ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ. ಬಹಳಷ್ಟು ಮಂದಿ ಸಲೂನ್‌ಗಳಲ್ಲಿ ಈ ರೀತಿ ಕತ್ತು ಮುರಿಯುವ ಮಸಾಜ್ ಮಾಡಿಸಿಕೊಳ್ಳುತ್ತಾರೆ, ಇದರಿಂದ ತುಂಬಾ ಅಪಾಯ ಇದೆ. ಉಸಿರಾಟದ ವ್ಯವಸ್ಥೆಗೆ ಹೊಡೆತ ಬೀಳುತ್ತದೆಂದು ಹೇಳುತ್ತಾರೆ. ಹಾಗಿದ್ದರೆ ಅವರು ಹೀಗೆಕೆ ಹೇಳುತ್ತಿದ್ದಾರೆ ಗೊತ್ತಾ.? ಅದಕ್ಕೆ ಕಾರಣವೂ ಇಲ್ಲದಿಲ್ಲ. ಅದೇನೆಂದರೆ.


ದೆಹಲಿ ಮೂಲದ ಅಜಯ್ ಕುಮಾರ್ (54) ತಿಂಗಳ ಹಿಂದೆ ಕಟಿಂಗ್ ಮಾಡಿಸಿಕೊಂಡು ತಲೆಗೆ ಮಸಾಜ್ ಮಾಡಿಸಿಕೊಂಡ. ಆಗ ಕತ್ತನ್ನು ಜೋರಾಗಿ ತಿರುತಿಸಿದರು. ಆ ಬಳಿಕ ಸ್ವಲ್ಪ ದಿನಗಳಿಗೆ ಆತ ಉಸಿರಾಡುವುದು ಕಷ್ಟವಾಯಿತು. ಹಾಗಾಗಿ ಕುಮಾರ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದರು. ಆತನನ್ನು ಪರೀಕ್ಷಿಸಿದ ವೈದ್ಯರು ಆತನ ಉಸಿರಾಟದ ವ್ಯವಸ್ಥೆ ಕೆಟ್ಟಿದೆ ಎಂದು ಹೇಳಿದರು. ಆತನ ಆರೋಗ್ಯ ಪರಿಸ್ಥಿತಿ ಇನ್ನಷ್ಟು ವಿಷಮಿಸಿತು. ಹಾಗಾಗಿ ಆತನಿಗೆ ವೆಂಟಿಲೇಟರ್‌ನಲ್ಲಿ ವೈದ್ಯರು ಚಿಕಿತ್ಸೆ ನೀಡಲು ಪ್ರಾರಂಭಿಸಿದರು. ಆದರೆ ಅಜಯ್‌ಗೆ ಹೀಗೇಕಾಯಿತು ಎಂದು ಆರಂಭದಲ್ಲಿ ವೈದ್ಯರಿಗೆ ಗೊತ್ತಾಗಲಿಲ್ಲ. ಅನೇಕ ಪರೀಕ್ಷೆಗಳ ಬಳಿಕ ಕೊನೆಗೆ ಗೊತ್ತಾಗಿದ್ದೇನೆಂದರೆ.

ಕತ್ತನ್ನು ಮುರಿದಂತೆ ಮಸಾಜ್ ಮಾಡಿದ ಕಾರಣ ಅಜಯ್ ಕುತ್ತಿಗೆ ಭಾಗದ ನರಗಳಿಗೆ ಹೊಡೆತ ಬಿದ್ದಿದೆ ಎಂದು ವೈದ್ಯರು ಗುರುತಿಸಿದರು. ನಾಡಿ ವ್ಯವಸ್ಥೆಯಲ್ಲಿನ ಫ್ರೆನಿಕ್ ನರಗಳು ಶ್ವಾಸಕೋಶಗಳ ಕೆಳಗಿನ ಭಾಗದಲ್ಲಿ ವಿಭಾಜಕ ಪಟಲದೊಂದಿಗೆ ಬೆರೆತಿರುತ್ತವೆ. ಫ್ರೆನಿಕ್ ನರಗಳು ಘಾಸಿಗೊಂಡ ಕಾರಣ ಉಸಿರಾಟ ಸಮಸ್ಯೆಯಾಗಿದೆ ಎಂದು ವೈದ್ಯರು ತಿಳಿಸಿದರು. ಆಕ್ಸಿಜನ್ ಸರಬರಾಜು ಇಲ್ಲದ ಕಾರಣ ವಿಭಾಜಕ ಪಟಲಕ್ಕೂ ತೊಂದರೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹಾಗಾಗಿ ತಲೆಗೆ ಮಸಾಜ್ ಮಾಡುತ್ತಾ ಅತ್ತಿಂದಿತ್ತ ಜೋರಾಗಿ ತಿರುಗಿಸುವುದು ಅಷ್ಟು ಒಳ್ಳೆಯದಲ್ಲ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಕತ್ತಿನ ಭಾಗ ತುಂಬಾ ಸೂಕ್ಷ್ಮವಾದ ಭಾಗವಾದ ಕಾರಣ ಕುತ್ತಿಗೆಯನ್ನು ಜೋರಾಗಿ ತಿರುಗಿಸುವ ಕಾರಣ ನಾಡಿ ವ್ಯವಸ್ಥೆಗೆ ಸಮಸ್ಯೆಯಾಗುವ ಅವಕಾಶ ಇದೆ ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ. ತಲೆಗೆ ಮಸಾಜ್ ಮಾಡಿಸಿಕೊಳ್ಳಿ.ಆದರೆ ಕುತ್ತಿಗೆಯನ್ನು ಜೋರಾಗಿ ತಿರುಗಿಸದೆ ಇದ್ದರೆ ಉತ್ತಮ ಎಂದು ವೈದ್ಯರು ಸೂಚಿಸಿದ್ದಾರೆ. ಇನ್ನು ಮುಂದೆ ಸಲೂನ್‌ನಲ್ಲಿ ಕುತ್ತಿಗೆಯನ್ನು ತಿರುಗಿಸುವ ಮಸಾಜ್ ಮಾಡಿಸಿಕೊಳ್ಳಬೇಡಿ. ಇಲ್ಲದಿದ್ದರೆ ಪ್ರಾಣಾಪಾಯ ತಪ್ಪಿದ್ದಲ್ಲ.!

No comments