Header Ads

test

ದಿನವೆಲ್ಲಾ ಆಕ್ಟೀವ್ ಆಗಿ ಇರಬೇಕಾದರೆ ಏನು ಮಾಡಬಾರದು ಗೊತ್ತಾ.?

ಬೆಳಗಿನಿಂದ ಸಂಜೆ ತನಕ ಅದೆಷ್ಟೋ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ ಹೆಂಗಸರು. ದಿವೆಲ್ಲಾ ಉತ್ಸಾಹದಿಂದ ಕೆಲಸ ಮಾಡಬೇಕು ಅಂದರೆ, ಆರೋಗ್ಯವಾಗಿ ಇರಬೇಕು ಎಂದರೆ ಕೆಲವು ಕೆಲಸಗಳಿವೆ. ಹಾಗೆಯೇ ಮಾಡಬಾರದ ಕೆಲಸಗಳೂ ಇವೆ. ಅವುಗಳ ಬಗ್ಗೆ ಈಗ ತಿಳಿದುಕೊಳ್ಳೋಣ ಬನ್ನಿ.

* ತುಂಬಾಜನ ಬೆಳಗ್ಗೆ ಎದ್ದ ಕೂಡಲೆ ಕೆಲಸ ಶುರು ಆರಂಭಿಸುತ್ತಾರೆ. ಹಾಗೆ ಮಾಡುವುದು ಒಳ್ಳೆಯ ಅಭ್ಯಾಸ ಅಲ್ಲ. ನಮ್ಮ ದೇಹ ಚುರುಕಾಗಿ ಇರಬೇಕಾದರೂ, ಶಕ್ತಿಸಾಮರ್ಥ್ಯ ಹೆಚ್ಚಾಗಬೇಕಾದರೂ ಸ್ವಲ್ಪ ವ್ಯಾಯಾಮ ಬೇಕು. ಜಾಗಿಂಗ್, ವಾಕಿಂಗ್, ಯೋಗ ಯಾವುದಾರೂ ಒಂದನ್ನ ಮಾಡಬೇಕು. ಸ್ಟ್ರೆಚಿಂಗ್ ವ್ಯಾಯಾಮ ಮಾಡಿದರೂ ಉತ್ತಮ.


* ಬೆಳಗ್ಗೆ ಎದ್ದ ಕೂಡಲೆ ಮೊಬೈಲ್ ಫೋನ್ ಇಲ್ಲಾ ಟ್ಯಾಬ್ಲೆಟ್ ನೋಡೋ ಅಭ್ಯಾಸ ಇದೆಯೇ? ಆ ಅಭ್ಯಾಸವನ್ನು ಆದಷ್ಟು ಬಿಡುವುದು ಒಳ್ಳೇದು. ಯಾಕಂದ್ರೆ ಇ-ಮೇಲ್ಸ್, ಎಸ್ಸೆಮ್ಮೆಸ್ ಗಳನ್ನ ನಿದ್ದೆಯಿಂದ ಎದ್ದ ಕೂಡಲೆ ನೋಡುವುದರಿಂದ, ನಮ್ಮ ಮಿದುಳು ಅವುಗಳ ಬಗ್ಗೆನೇ ಆಲೋಚಿಸುತ್ತಿರುತ್ತೆ. ಒಮ್ಮೊಮ್ಮೆ ಅದು ಮನಶ್ಯಾಂತಿಯನ್ನ ಕೆಡಿಸುತ್ತೆ.

* ನಿದ್ದೆಯಿಂದ ಎದ್ದ ಕೂಡಲೆ ಒಂದ್ ಕಪ್ಪು ಕಾಫಿ ಆಮೇಲೆ ಸಿಹಿ ಪದಾರ್ಥಗಳು, ಬ್ರೆಡ್ ತರಹದನ್ನು ಆಯ್ಕೆ ಮಾಡಿಕೊಳ್ಳುವುದನ್ನು ಬಹಳಷ್ಟು ಮಂದಿ ಮಾಡ್ತಾರೆ. ಇವುಗಳಿಂದ ದಿನವೆಲ್ಲಾ ದೇಹಕ್ಕೆ ಶಕ್ತಿ ಸಿಗಲ್ಲ. ದೇಹದಲ್ಲಿ ನಿಧಾನಕ್ಕೆ ಬಿಡುಗಡೆಯಾಗುವ ಸಂಕ್ಲಿಷ್ಟ ಹಿಟ್ಟಿನ ಪದಾರ್ಥಗಳು, ಫೈಬರ್, ಪ್ರೋಟೀನ್ ಇರೋ ಆಹಾರ ತಗೋಬೇಕು. ಓಟ್ ಮೀಲಲ್ಲಿ ಹಣ್ಣುಗಳು ಮತ್ತು ನಟ್ಸ್ ಹಾಕಿಕೊಂಡು ತಿಂದ್ರೂ ಒಳ್ಳೇದು.

* ಕೆಲವರು ನಿದ್ದೆಯಿಂದ ಎದ್ದ ಮೇಲೆ ಕಾಫಿ ಕುಡೀತಾ ಟಿವಿ ಮುಂದೆ ಕುಳಿತುಕೊಳ್ಳುತ್ತಾರೆ. ನಮಗೆ ಗೊತ್ತಿಲ್ಲದೇನೆ ಹೆಚ್ಚಿನ ಸಮಯ ಟಿವಿ ಮುಂದೆ ಕಳೆದು, ಉಳಿದ ಕೆಲಸಗಳನ್ನು ಮುಂದೂಡುತ್ತೀವಿ. ಇದರಿಂದ ಆತಂಕ ಹೆಚ್ಚುತ್ತೆ. ಹಾಗಾಗಿ ಇದೂ ಒಳ್ಳೇ ಅಭ್ಯಾಸ ಅಲ್ಲ. ಇವಿಷ್ಟನ್ನು ಬಿಟ್ಟರೆ ಜೀವನದಲ್ಲಿ ಆಕ್ಟೀವ್ ಆಗಿ ಇರಬಹುದು.

No comments