Header Ads

test

ಶಿವ ಮೂರನೇ ಕಣ್ಣು ತೆರೆದ ಸ್ಥಳ ಇದು.ಅಲ್ಲಿ ಭಸ್ಮವಾದ ಗಿಡ ಈಗಲೂ ಕಾಣಬಹುದು!

ಹಿಂದೂ ಪುರಾಣಗಳಲ್ಲಿ ಮನ್ಮಥನ ಬಗ್ಗೆ ಗೊತ್ತಿರಬೇಕಲ್ಲವೇ? ಅಂದವಾದ ರೂಪ, ಕಬ್ಬಿನ ಬಿಲ್ಲು, ಬಾಣ, ಸುವಾಸನೆ ಬೀರುವ ಹೂಗಳೊಂದಿಗೆ ಎಲ್ಲರಲ್ಲೂ ತಾಪ ಉಂಟು ಮಾಡುತ್ತಾರೆ. ಮನ್ಮಥನು ಒಂದಾನೊಂದು ಸಮಯದಲ್ಲಿ ಶಿವನ ಮೂರನೇ ಕಣ್ಣಿಗೆ ಭಸ್ಮವಾಗುತ್ತಾನೆ. ಮನ್ಮಥನು ಆ ರೀತಿ ಭಸ್ಮವಾದ ಪ್ರದೇಶ ನಮ್ಮ ದೇಶದಲ್ಲಿ ಎಲ್ಲಿದೆ ಗೊತ್ತಾ? ಕಾಮೇಶ್ವರ ಧಾಮದಲ್ಲಿ. ಹೌದು ನೀವು ಕೇಳಿದ್ದು ಸರಿ. ಇಷ್ಟಕ್ಕೂ ಶಿವನು ಮನ್ಮಥನನ್ನು ಯಾಕೆ ಭಸ್ಮ ಮಾಡಿದ ಗೊತ್ತಾ.ಅದನ್ನೇ ಈಗ ತಿಳಿದುಕೊಳ್ಳೋಣ ಬನ್ನಿ.


ಒಂದಾನೊಂದು ಕಾಲದಲ್ಲಿ ತಾರಕಾಸುರ ಎಂಬ ರಾಕ್ಷಸ ಭೂಲೋಕದಲ್ಲಷ್ಟೇ ಅಲ್ಲದೆ ದೇವಲೋಕದಲ್ಲೂ ದೇವತೆಗಳಿಗೆ ತೊಂದರೆ ಕೊಡುತ್ತಿರುತ್ತಾನೆ. ಚಿತ್ರಹಿಂಸೆಗೆ ಗುರಿಮಾಡುತ್ತಿರುತ್ತಾನೆ. ತಾರಕಾಸುರನನ್ನು ಹೇಗಾದರೂ ಮಾಡಿ ವಧಿಸಬೇಕೆಂದುಕೊಳ್ಳುತ್ತಾರೆ ದೇವತೆಗಳು. ಆ ಕೆಲಸ ಶಿವನ ಮಗನಿಂದ ಮಾತ್ರ ಸಾಧ್ಯವಾಗುತ್ತದೆ. ಆದರೆ ಆಗ ಶಿವ ಇನ್ನೂ ಬ್ರಹ್ಮಚಾರಿ. ಪಾರ್ವತಿಯನ್ನು ವಿವಾಹ ಮಾಡಿಕೊಂಡಿರಲ್ಲ. ಶಿವ ತಪಸ್ಸಿಗೆ ಕೂತಿರುತ್ತಾನೆ. ಆತನ ತಪಸ್ಸನ್ನು ಭಂಗ ಮಾಡಿ, ಆತನಲ್ಲಿ ಕಾಮ ಸೃಷ್ಟಿಸಿ ಪಾರ್ವತಿಗೆ ಹತ್ತಿರವಾಗಿ ಮಗನನ್ನು ಪಡೆಯಬೇಕೆಂದು ದೇವತೆಗಳು ಯೋಜಿಸುತ್ತಾರೆ. ಶಿವನ ತಪಸ್ಸನ್ನು ಭಂಗ ಮಾಡಲು ದೇವತೆಗಳು ಮನ್ಮಥನನ್ನು ಕಳುಹಿಸುತ್ತಾರೆ.

ಆಗ ತಪಸ್ಸು ಮಾಡುತ್ತಿದ್ದ ಶಿವನ ಮೇಲೆ ಮನ್ಮಥ ಹೂವಿನ ಬಾಣ ಪ್ರಯೋಗಿಸುತ್ತಾನೆ. ಇದರಿಂದ ಕುಪಿತನಾದ ಶಿವ ತನ್ನ ಮೂರನೇ ಕಣ್ಣಿನಿಂದ ಮನ್ಮಥನನ್ನು ಭಸ್ಮ ಮಾಡುತ್ತಾನೆ. ಆ ಬಳಿಕ ದೇವತೆಗಳೆಲ್ಲರೂ ಶಿವನನ್ನು ಪ್ರಾರ್ಥಿಸಿದ ಮೇಲೆ ಸತ್ಯ ತಿಳಿದುಕೊಂಡು ಮನ್ಮಥನನ್ನು ಬದುಕಿಸುತ್ತಾನೆ ಶಿವ. ಆಗ ಮನ್ಮಥನನ್ನು ಭಸ್ಮ ಮಾಡಿದ ಜಾಗವೇ ಈಗ ಕಾಮೇಶ್ವರ ಧಾಮ್ ಆಗಿ ಜನಪ್ರಿಯವಾಗಿದೆ. ಅಲ್ಲಿ ಶಿವನ ಮೂರನೇ ಕಣ್ಣಿನ ಕಾರಣ ಮಾವಿನ ಮರದ ಕಾಂಡ ಅರ್ಧ ಸುಟ್ಟು ಹೋಗುತ್ತದೆ. ಆ ಗಿಡ ಈಗಲೂ ಹಾಗೆಯೇ ಇದೆ. ಅದು ಅರ್ಧ ಸುಟ್ಟುಹೋಗಿರುವುದನ್ನು ನೋಡಬಹುದು. ಈ ಸ್ಥಳವನ್ನು ಶ್ರೀರಾಮ ಒಮ್ಮೆ ದರ್ಶನ ಪಡೆದಿದ್ದಾರೆಂದು ಪುರಾಣಗಳು ಹೇಳುತ್ತವೆ. ಉತ್ತರ ಪ್ರದೇಶದ ಬಲ್ಲಿಯಾ ಎಂಬ ಪ್ರದೇಶದಲ್ಲಿ ಕಾಮೇಶ್ವರ ಧಾಮ ಇದೆ.

No comments