Header Ads

test

ಕಂಪ್ಯೂಟರ್ ಕೀ ಬೋರ್ಡ್‍ನ "F" ಮತ್ತು "J" ಅಕ್ಷರಗಳ ಮೇಲೆ ಈ ರೀತಿ ಉಬ್ಬಿದ ಗೆರೆ ಇರುತ್ತದೆ ಯಾಕೆ ಗೊತ್ತಾ?

ನಾವೆಲ್ಲಾ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಕೀ ಬೋರ್ಡ್ ಬಳಸುತ್ತಿರುತ್ತೇವೆ. ಟೈಮ್ ಮಾಡುತ್ತಿರುತ್ತೇವೆ, ಆದರೆ ಆ ಕೀಬೋರ್ಡನ್ನು ಅಷ್ಟಾಗಿ ಗಮನಿಸಿರುವುದಿಲ್ಲ. ಯಾವುದೇ ಕೀಬೋರ್ಡ್ ಮೇಲೆ "F" ಮತ್ತು "J" ಅಕ್ಷರಗಳ ಮೇಲೆ ಉಬ್ಬಿದ ಗೆರೆಯೊಂದನ್ನು ಗಮನಿಸಿರುತ್ತೀರ. ಯಾಕೆ ಆ ರೀತಿ ಉಬ್ಬಿದ ಗೆರೆ ಕೀಬೋರ್ಡ್ ಮೇಲಿನ ಈ ಎರಡು ಅಕ್ಷರಗಳ ಮೇಲೆ ಇರುತ್ತದೆ? ಒಂದು ವೇಳೆ ನೀವು ಟೈಪಿಂಗ್ ಸರಿಯಾಗಿ ಮಾಡುತ್ತಿಲ್ಲ ಎಂದಾದದರೆ ಈ ಎರಡು ಕೀ ಗಳ ಬಗ್ಗೆ ತಿಳಿದುಕೊಂಡರೆ ಮುಂದೆ ಆ ರೀತಿ ತಪ್ಪು ಮಾಡುವ ಸಾಧ್ಯತೆಗಳು ಇರಲ್ಲ. ಕೀ ಬೋರ್ಡ್ ಪಕ್ಕಾ ಬಳಸುವುದು ಹೇಗೆ ಎಂಬುದು ಗೊತ್ತಾಗುತ್ತದೆ.


"F" ಮತ್ತು "J" ಅಕ್ಷರಗಳ ಮೇಲೆ ಉಬ್ಬಿದ ಗೆರೆ ಯಾಕಿರುತ್ತದೆ? ನಿಮ್ಮ ಕೀಬೋರ್ಡನ್ನು ಸೂಕ್ಷ್ಮವಾಗಿ ಗಮನಿಸಿ "F" ಮತ್ತು "J" ಅಕ್ಷರಗಳ ಮೇಲೆ ಈ ಉಬ್ಬಿದ ಗೆರೆಗಳಿರುತ್ತವೆ. ಎಲ್ಲಾ ಮಾರ್ಡನ್ ಕೀ ಬೋರ್ಡ್‌ಗಳ ಮೇಲೆಯೂ ಈ ರೀತಿ ಇರುತ್ತದೆ. ಕೀಬೋರ್ಡ್ ಮೇಲೆ ಈ ರೀತಿ "F" ಮತ್ತು "J" ಅಕ್ಷರಗಳ ಮೇಲೆ ಉಬ್ಬಿದ ಗೆರೆಯನ್ನು 2002ರಲ್ಲಿ ಜೂನ್ ಇ ಬೋಟಿಚ್ ಎಂಬುವವರು ಕಂಡುಹಿಡಿದರು. ಇದಕ್ಕೆ ಕಾರಣವೂ ಇಲ್ಲದಿಲ್ಲ.

ಕೀಬೋರ್ಡ್ ಮೇಲೆ ನಮ್ಮ ಕೈಬೆರಳುಗಳನ್ನು ಕರೆಕ್ಟ್ ಆಗಿ ಇಡಲು ಈ ಎರಡು ಅಕ್ಷರಗಳು ಸಹಕಾರಿ. ಕೀ ಬೋರ್ಡ್ ಕಡೆಗೆ ನೋಡದೇನೆ ನಮ್ಮ ಎರಡೂ ಕೈಗಳ ತೋರು ಬೆರಳುಗಳನ್ನು "F" ಮತ್ತು "J" ಅಕ್ಷರಗಳ ಮೇಲೆ ಇಡಲು ಈ ಉಬ್ಬಿದ ಗೆರೆ ಉಪಯುಕ್ತ. ನಾವು ಸರಿಯಾಗಿ ಟೈಪ್ ಮಾಡಲು ಸಾಧ್ಯವಾಗುತ್ತದೆ.

ನಮ್ಮ ಎಡ ಕೈಬೆರಳನ್ನು ASDF ಹಾಗು ಬಲಗೈ ಕೈಬೆರಳುಗಳನ್ನು JKL: ಕೀಗಳ ಮೇಲೆ ಇಟ್ಟು ಟೈಪ್ ಮಾಡುವುದರಿಂದ ಕರೆಕ್ಟಾಗಿ, ವೇಗವಾಗಿ ಟೈಪಿಸಬಹುದು. ಎರಡೂ ಕೈನ ಹೆಬ್ಬೆರಳುಗಳು ಸ್ಪೇಸ್ ಬಾರ್ ಬಳಕೆಗೆ ಮಾತ್ರ. ಇದು ಕೀಬೋರ್ಡ್‌ನ ಸರಿಯಾಗಿ ಬಳಸುವ ವಿಧಾನವೂ ಹೌದು. ಕೈ ಬೆರಳುಗಳನ್ನು ಈ ರೀತಿ ಇಟ್ಟು ಟೈಪಿಸುವುದರಿಂದ ಕೀಬೋರ್ಡ್ ಮೇಲೆ ನಾವು ಹಿಡಿತ ಸಾಧಿಸಿದಂತಾಗುತ್ತದೆ.

No comments