Header Ads

test

ಸ್ಮಾರ್ಟ್‌ಫೋನ್ ಮೇಲ್ಭಾಗದಲ್ಲಿರುವ ರಂಧ್ರವನ್ನು ಎಂದಾದರೂ ಗಮನಿಸಿದ್ದೀರಾ.? ಅದೇನು ಗೊತ್ತಾ.?

ಇಂದು ಬಳಕೆದಾರರಿಗೆ ಲಭಿಸುತ್ತಿರುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಹೇಳಬೇಕೆಂದರೆ.ಬಹಳಷ್ಟು ಸೌಲಭ್ಯಗಳು ಅವುಗಳಲ್ಲಿವೆ. ಈಗ ಫೋನ್ ಕೊಳ್ಳುವವರು ಡಿಸ್‌ಪ್ಲೇ ಸೇರಿದಂತೆ ಬ್ಯಾಟರಿವರೆಗೂ ಎಲ್ಲಾ ಫೀಚರ್‌ಗಳನ್ನು ಎಚ್ಚರಿಕೆಯಿಂದ ನೋಡಿ ಕೊಳ್ಳುತ್ತಿದ್ದಾರೆ. ಪರದೆ ಸೈಜ್ ಎಷ್ಟು, ರ‍್ಯಾಮ್ ಎಷ್ಟು, ಪ್ರಾಸೆಸರ್ ಎಷ್ಟು, ಕೆಮರಾ ಸಾಮರ್ಥ್ಯ, ಸ್ಟೋರೇಜ್, 4ಜಿ, ಆಪರೇಟಿಂಗ್ ಸಿಸ್ಟಂ, ಬ್ಯಾಟರಿ ಕೆಪಾಸಿಟಿಯಂತಹ ಅನೇಕ ಫೀಚರ್‌ಗಳನ್ನು ನೋಡಿ ಫೋನ್ ಕೊಳ್ಳುತ್ತಿದ್ದಾರೆ. ಇವೆಲ್ಲಾ ಬಳಕೆದಾರರಿಗೆ ಗೊತ್ತಿರುವಂತಹವೇ. ಆದರೆ ಬಹಳಷ್ಟು ಮಂದಿಗೆ ಗೊತ್ತಿಲ್ಲದ ಒಂದು ಫೀಚರ್ ಇದೆ. ಅದೇನು ಅಂತ ಗೊತ್ತಾ.? ಕೆಳಗೆ ನೋಡಿ.!


ಮೇಲೆ ಕೊಟ್ಟಿರುವ ಚಿತ್ರದಲ್ಲಿ ನೋಡಿದಿರಲ್ಲವೇ, ಸ್ಮಾರ್ಟ್‌ಫೋನ್ ಮೇಲ್ಭಾಗದಲ್ಲಿ ಹೆಡ್‌ಫೋನ್ ಜಾಕ್ ಪಕ್ಕದಲ್ಲಿ ಒಂದು ಸಣ್ಣ ರಂಧ್ರ ಇದೆ. ಇಂದು ಮಾರುಕಟ್ಟೆಗೆ ಬರುತ್ತಿರುವ ಬಹಳಷ್ಟು ಸ್ಮಾರ್ಟ್‌ಫೋನ್‌ಗಳಿಗೆ ಇಂತಹ ರಂಧ್ರ ಇರುತ್ತದೆ. ಯಾಕಾಗಿ ಈ ರಂಧ್ರ? ಅದನ್ನೇ ಈಗ ತಿಳಿದುಕೊಳ್ಳೋಣ. ಏನೂ ಇಲ್ಲ ರೀ.ಅದನ್ನು ನಾಯ್ಸ್ ಕ್ಯಾನ್ಸಲೇಷನ್ ಮೈಕ್ ಅಂತಾರೆ.

ಸಹಜವಾಗಿ ನಮಗೆ ಫೋನ್ ಕೆಳಗಿನ ಭಾಗದಲ್ಲಿ ಸ್ಪೀಕರ್ ಪಕ್ಕದಲ್ಲೇ ಮೈಕ್ ಒಂದು ಇರುತ್ತದೆ ಅಲ್ಲವೆ. ನಾವು ಮಾತನಾಡುವುದು ಅದರಿಂದ ಆಕಡೆ ವ್ಯಕ್ತಿಗಳಿಗೆ ಕೇಳಿಸುತ್ತದೆ. ಆದರೆ ನಾವು ನಿಶ್ಯಬ್ದವಾಗಿರುವ ವಾತಾವರಣದಲ್ಲಿ ಫೋನ್ ಕಾಲ್ ಮಾಡಲು ಸಾಧ್ಯವಾಗುವುದಿಲ್ಲ ಅಲ್ಲವೇ, ಕೆಲವು ಸಲ ಶಬ್ದ ಹೆಚ್ಚಾಗಿರುವ ಪ್ರದೇಶಗಳಲ್ಲಿ, ಟ್ರಾಫಿಕ್‌ನಲ್ಲಿ, ಥಿಯೇಟರ್‌ನಲ್ಲಿ ಇರುವಾಗ ಸಹ ಕರೆ ಮಾಡಿ ಮಾತನಾಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ನಾವು ಮಾತನಾಡುವ ಮಾತುಗಳು ಆ ಕಡೆಯ ವ್ಯಕ್ತಿಗೆ ಸರಿಯಾಗಿ ಕೇಳಿಸಲ್ಲ. ಆದರೆ ಮೇಲೆ ತಿಳಿಸಿದ ನಾಯ್ಸ್ ಕ್ಯಾನ್ಸಲೇಷನ್ ಮೈಕ್‌ನಿಂದ ನಾವು ಆ ರೀತಿ ಶಬ್ದ ಹೆಚ್ಚಾಗಿರುವ ಪ್ರದೇಶಗಳಿಂದ ಮಾತನಾಡಿದಾಗ ನಮ್ಮ ಸುತ್ತಲೂ ಇರುವ ಶಬ್ದಗಳು ಆಕಡೆ ವ್ಯಕ್ತಿಗೆ ಕೇಳದಂತೆ ಈ ಮೈಕ್ ತಡೆಯುತ್ತದೆ. ಹಾಗಾಗಿ ಆಕಡೆ ವ್ಯಕ್ತಿಗೆ ನಮ್ಮ ವಾಯ್ಸ್ ಕ್ಲಿಯರ್ ಆಗಿ ಕೇಳಿಸುತ್ತದೆ. ಹಾಗಾಗಿ ಅವರು ನಮ್ಮ ಧ್ವನಿಯನ್ನು ಸುಲಭವಾಗಿ ಕೇಳುವಂತಾಗುತ್ತದೆ. ಯಾವುದೇ ಡಿಸ್ಟರ್ಬೆನ್ಸ್ ಇರಲ್ಲ. ಗೊತ್ತಾಯಿತಲ್ಲವೇ ಆ ರಂಧ್ರದ ಉಪಯೋಗ ಏನು ಅಂತ. ಆದರೆ ಕೆಲವು ಫೋನ್‌ಗಳಿಗೆ ಮೇಲ್ಭಾಗದಲ್ಲಿ ಅಲ್ಲದೆ ಹಿಂಬದಿಯಲ್ಲಿ ಕ್ಯಾಮೆರಾ ಪಕ್ಕದಲ್ಲಿ, ಕೆಲವಕ್ಕೆ ಸೈಡ್‌ನಲ್ಲಿ ಕೊಟ್ಟಿರುತ್ತಾರೆ. ಆದಕಾರಣ ನಿಮ್ಮ ಫೋನಲ್ಲಿ ಈ ರಂಧ್ರ ಎತ್ತಕಡೆ ಇದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಈ ಸಲ ಫೋನ್‌ನಲ್ಲಿ ಮಾತನಾಡಬೇಕಾದರೆ ಇದಕ್ಕೆ ಅಡ್ಡಲಾಗಿ ಹಿಡಿಯದೆ ಮಾತನಾಡಿ ನೋಡಿ, ನಿಮ್ಮ ಧ್ವನಿ ಆಕಡೆ ವ್ಯಕ್ತಿಗೆ ಸ್ಪಷ್ಟವಾಗಿ ಕೇಳಿಸದಿದ್ದರೆ ಆಗ ಹೇಳಿ.

No comments