Header Ads

test

ಗಂಡ ಪ್ರತಿದಿನ ಹೊಡೆಯುತ್ತಾನೆಂದು ಮಹಿಳೆ ಔಷಧಿಯನ್ನು ನೀಡಲು ಕೇಳಿದಳು.ವೈದ್ಯರು ನೀಡಿದ ಔಷಧಿ ಎಷ್ಟುಪವರ್ ಫುಲ್ ಎಂದು ತಿಳಿದರೆ.

ಒಬ್ಬ ಮಹಿಳೆ ಅಳುತ್ತಾ ವೈದ್ಯರ ಬಳಿಗೆ ಬಂದಳು. ಆಕೆಯನ್ನು ಕಂಡ ವೈದ್ಯರು ಮೈಯೆಲ್ಲಾ ಈ ಗಾಯಗಳೇನಮ್ಮಾ ಎಂದು ಕೇಳಿದರು. ಅದಕ್ಕೆ ಆ ಮಹಿಳೆ ಅಳುತ್ತಾ 'ನನ್ನ ಪತಿ ಪ್ರತಿದಿನ ಮನೆಗೆ ಬಂದರೆ ನನ್ನನ್ನು ಈ ರೀತಿ ಹೊಡೆಯುತ್ತಾರೆ' ಡಾಕ್ಟರ್ ಎಂದಳು. ತಕ್ಷಣವೇ ವೈದ್ಯರು ಔಷಧಿ ಬರೆದುಕೊಟ್ಟು, ಪುನಃ ಆಕೆಗೆ ಈ ಪರಿಸ್ಥಿತಿ ಬರಬಾರದು ಎಂದುಕೊಂಡರು.ನಿನ್ನ ಪತಿ ಮನೆಗೆ ಬಂದಾಗ ನೀನು ನಿನ್ನ ಬಾಯಿ ತುಂಬಾ ನೀರಿಟ್ಟುಕೊಂಡ ಆತ ಮಲಗಿದ ನಂತರ ನೀರನ್ನು ಉಗಿದುಬಿಡು. ಹೀಗೆ ಮಾಡುವುದರಿಂದ ತಪ್ಪದೇ ನಿನ್ನ ಪತಿ ಎಂದಿಗೂ ನಿನ್ನನ್ನು ಹೊಡೆಯುವುದಿಲ್ಲ ಎಂದು ಸಲಹೆ ನೀಡಿದರು. ಆಕೆಗೆ ಈ ನೀರಿನ ಚಿಕಿತ್ಸೆ ಏನೆಂದು ಅರ್ಥವಾಗದಿದ್ದರೂ, ಸರಿ ಎಂದು ತಲೆಯಾಡಿಸಿ ಮನೆಗೆ ಬಂದಳು.


ವೈದ್ಯರು ಹೇಳುವುದನ್ನು ಮಾಡಿ ನೋಡೋಣ ಎಂದು ಯೋಚಿಸಿ ಅದೇ ರೀತಿ ಮಾಡಿದಳು. ಆ ದಿನ ರಾತ್ರಿ ಕುಡಿದು ಬಂದ ಪತಿಯನ್ನು ಆಕೆ ಏನೂ ಮಾತನಾಡದೆ ಮೌನವಾಗಿ ಊಟ ಬಡಿಸಿದಳು. ಆಶ್ಚರ್ಯವೇನೆಂದರೆ ಆ ದಿನ ಆಕೆಗೆ ಹೊಡೆತ ತಿನ್ನುವುದು ತಪ್ಪಿತು. ನಂತರ ಆಕೆ ವೈದ್ಯರ ಬಳಿಗೆ ಬಂದು, ಬಾಯಲ್ಲಿರುವ ನೀರಿಗೂ, ಆತ ಹೊಡೆಯದೇ ಇರುವುದಕ್ಕೂ ಸಂಬಂಧ ಏನೆಂದು ಆಶ್ಚರ್ಯದಿಂದ ಪ್ರಶ್ನಿಸಿದಳು.ಅದಕ್ಕೆ ವೈದ್ಯರು ನಗುತ್ತಾ.ಹೀಗೆ ಬಾಯಿ ಮುಚ್ಚಿಕೊಳ್ಳುವುದರಿಂದ ಎಂತಹ ಸಮಸ್ಯೆಗಳೂ ಬರುವುದಿಲ್ಲ. ಆತ ಮನೆಗೆ ಬಂದಾಗ ನೀನು ಹೆಚ್ಚಾಗಿ ಮಾತಾಡುತ್ತಲೇ ಇರುವುದರಿಂದ ಮಾತಿಗೆ ಮಾತು ಬೆಳೆಯುತ್ತಾ ಕುಡಿದ ಅಮಲಿನಲ್ಲಿರುವ ಆತನಿಗೆ ಕೋಪ ಹೆಚ್ಚಾಗಿ ಹೊಡೆಯುವವರೆಗೂ ಹೋಗುತ್ತದೆ. ಆದ್ದರಿಂದಲೇ ಬಾಯನ್ನು ಹತೋಟಿಯಲ್ಲಿಟ್ಟುಕೊಂಡರೆ ಒಳ್ಳೆಯದು ಎಂದು ಹೇಳಿದರು.

ಇದು ಕೇವಲ ತಮಾಷೆಗಾಗಿ ಹೇಳಿದ ಕತೆಯಷ್ಟೆ. ಯಾರನ್ನೂ ಉದ್ದೇಶಿಸಿ ಹೇಳಿದ್ದಲ್ಲ. ಬಹುಶಃ ಆ ಪತಿಯಾದವನು ಇದೇ ಪರಿಸ್ಥಿತಿಯಲ್ಲಿ ವೈದ್ಯರ ಬಳಿಗೋ, ಸ್ನೇಹಿತರ ಬಳಿಗೋ ಅಥವಾ ಹಿರಿಯರನ್ನು ಬೇಟಿಯಾದರೂ ಇದೇ ಉತ್ತರವನ್ನು ಪಡೆಯಬೇಕಾಗುತ್ತದೆ. ಯಾಕೆಂದರೆ ಎರಡೂ ಕೈ ಸೇರಿದರೇನೆ ಚಪ್ಪಾಳೆ ಎನ್ನುವ ಹಾಗೆ ಗಂಡ-ಹೆಂಡತಿಯರ ನಡುವೆ ಚಿಕ್ಕ ಚಿಕ್ಕ ವಿಷಯಗಳಲ್ಲಿ ಬರುವ ಜಗಳಗಳೇ ದೊಡ್ಡ ಜಗಳಕ್ಕೆ ದಾರಿಯಾಗುತ್ತವೆ. ಅಂತಹವರ ನಡವಳಿಕೆಯಲ್ಲಿ ಬದಲಾವಣೆ ಕಂಡುಬರದಿದ್ದಲ್ಲಿ ಅದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು. ಇಲ್ಲದಿದ್ದಲ್ಲಿ ಡಾಕ್ಟರರೇ ಆಗಲೀ, ನಾವೇ ಆಗಲೀ ಇಂತಹ ತಾತ್ಕಾಲಿಕ ಪರಿಹಾರಗಳನ್ನು ಕೇಳುವುದನ್ನು ಬಿಟ್ಟರೆ ಮಾಡುವುದೂ ಏನೂ ಇರುವುದಿಲ್ಲ.

No comments