Header Ads

test

ಸಾಯುವುದಕ್ಕೂ ಮುನ್ನ ತಾಯಿ ತನ್ನ ಮಗನಿಗೆ ಬರೆದ ಪತ್ರ..! ಅದನ್ನು ಓದಿದರೆ ಕಣ್ಣೀರು ಬರುತ್ತದೆ..!

ದಂಪತಿಗಳು ಹೋಟೆಲ್ ಒಂದರಲ್ಲಿ ಕುಳಿತು ತಿಂಡಿ ತಿನ್ನುತ್ತಿದ್ದಾರೆ. ಯಾವಾಗಲೂ ಬಿಝಿ ಬಿಝಿಯಾಗಿರುತ್ತಾ ತನ್ನನ್ನು ಸರಿಯಾಗಿ ನೋಡಿಕೊಳ್ಳದ ಗಂಡನ ವರ್ತನೆಯಲ್ಲಿ ಸ್ವಲ್ಪ ಸಮಯದಿಂದ ಬದಲಾವಣೆ ಬಂದಿತ್ತು. ಅದನ್ನೇ ಆತನನ್ನು ಕೇಳೋಣ ಎಂದುಕೊಂಡಳು... ಇದೇ ಸರಿಯಾದ ಸಂದರ್ಭ ಎಂದು ಗಂಡನನ್ನು ಇದೆ ಸಂಗತಿ ಕೇಳಿದಳು.. ಇತ್ತೀಚೆಗೆ ನಿಮ್ಮಲ್ಲಿ ಬಹಳಷ್ಟು ಬದಲಾವಣೆ ಬಂದಿದೆ. ನಮ್ಮನ್ನು ನಿತ್ಯ ಹೊರಗೆ ಕರೆದೊಯ್ಯುತ್ತಿದ್ದೀರಿ... ನನ್ನ ಇಷ್ಟಕಷ್ಟಗಳನ್ನು ವಿಚಾರಿಸುತ್ತಾ ಹಾಯಾಗಿ ಕಳೆಯುತ್ತಿದ್ದೀರಿ. ನಿಜ ಹೇಳಿ ನಿಮ್ಮ ಮುಖದಲ್ಲಿ, ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಕಾಣಿಸುತ್ತಿದೆ ಎಂದು ಗಂಡನನನ್ನು ಕೇಳಿದಳು... ಅದಕ್ಕೆ ಉತ್ತರ ನೀಡಲು ಸ್ವಲ್ಪ ಹೊತ್ತು ತಡಬಡಾಯಿಸಿದರೂ ಕೊನೆಗೆ ಹೇಳುವುದು ತಪ್ಪಿದ್ದಲ್ಲ ಎಂದು ತನ್ನ ಡೈರಿಯಿಂದ ಒಂದು ಕಾಗದ ತೆಗೆದು ಪತ್ನಿಗೆ ಕೊಟ್ಟ... ತನ್ನ ಅತ್ತೆ ಗಂಡನಿಗೆ ಬರೆದ ಪತ್ರ ಅದು.. ಅದನ್ನು ತೆರೆದು ಓದಲು ಆರಂಭಿಸಿದಳು.ಪ್ರೀತಿಯ ಪುತ್ರನಿಗೆ.
ಎಂದೋ ಒಂದು ದಿನ ಈ ಕಾಗದ ನಿನ್ನ ಕೈಗೆ ಸಿಗುತ್ತದೆ ಎಂಬ ಆಸೆಯಿಂದ ಬರೆಯುತ್ತಿದ್ದೇನೆ. ಸ್ವಲ್ಪ ಬಿಡುವು ಮಾಡಿಕೊಂಡು ಈ ಪತ್ರವನ್ನು ಸಂಪೂರ್ಣವಾಗಿ ಓದಿ, ಈ ತಾಯಿ ಮನಸ್ಸನ್ನು ಅರ್ಥ ಮಾಡಿಕೊಳ್ಳುತ್ತೀಯ ಎಂದು ಆಶಿಸುತ್ತಿದ್ದೇನೆ. ನಿಮ್ಮ ತಂದೆಯನ್ನು ಮದುವೆಯಾಗುವುದಕ್ಕೂ ಮುನ್ನ ನಾನೊಬ್ಬ ಲೆಕ್ಚರರ್... ಮದುವೆ ಬಳಿಕ ಸಹ ಉದ್ಯೋಗ ಮಾಡಿದೆ...ನೀನು ಹುಟ್ಟಿದ ಬಳಿಕ ನಿಮ್ಮ ತಂದೆಗೆ ಬಿಝಿನೆಸ್‌ನಲ್ಲಿ ಅದೃಷ್ಟ ಕೂಡಿಬಂತು. ನಿನ್ನ ತಂಗಿ ಹುಟ್ಟುದ ಬಳಿಕ ನಾನು ಉದ್ಯೋಗ ಮಾಡುವುದನ್ನು ಬಿಟ್ಟೆ. ಇನ್ನೊಂದು ಕಡೆ ವ್ಯಾಪಾರದಲ್ಲಿ ನಿಮ್ಮ ತಂದೆ ತುಂಬಾ ಬಿಝಿಯಾದರು. ಮದುವೆ ಬಳಿಕ ಮೊದಲ ವರ್ಷದಲ್ಲಿ ಯಾವುದೇ ಕಷ್ಟ ಆಗಲಿಲ್ಲ. ಆ ಬಳಿಕ ಎಲ್ಲವೂ ನಿರೀಕ್ಷೆಗಳೇ. ನಿಮ್ಮ ತಂದೆಗಾಗಿ ನಿರೀಕ್ಷೆ. ಆದಾಯ ಮೇಲಿನ ಮಮಕಾರದಿಂದ ನಿಮ್ಮ ತಂದೆ ಸಮಯಕ್ಕೆ ಮನೆಗೆ ಬರುತ್ತಿರಲಿಲ್ಲ. ನೀನು, ತಂಗಿಯೇ ನನಗೆ ದಿಕ್ಕು. ನಿಮ್ಮೊಂದಿಗೇ ನನ್ನ ಸಂತೋಷ. ಬೆಳಗ್ಗೆ ಎದ್ದ ಕೂಡಲೆ ನೀವು ಸಿದ್ಧರಾಗಿ ಸ್ಕೂಲಿಗೆ ಹೋಗುತ್ತೀರ. ನಿಮ್ಮ ಬರುವಿಕೆಗಾಗಿ ನಿರೀಕ್ಷೆ..

ಆ ರೀತಿ ನೀವು ದೊಡ್ದವರಾದಿರಿ. ನನ್ನೊಂದಿಗೆ ಮಾತನಾಡಲೂ ಸಹ ನಿಮಗೆ ಸಮಯ ಇರುತ್ತಿರಲಿಲ್ಲ. ಅಗತ್ಯಕ್ಕೆ ಮಾತ್ರ ಮಾತನಾಡುತ್ತಿದ್ದಿರಿ. ಮಕ್ಕಳಾದರೂ ನನ್ನೊಂದಿಗೆ ಮಾತನಾಡುತ್ತೀರಿ ಎಂಬ ನಿರೀಕ್ಷೆ. ಆದರೆ ನಿಮಗೆ ಉದ್ಯೋಗ ಸಿಕ್ಕಿದ ಬಳಿಕ ನೀವಾಯಿತು ನಿಮ್ಮ ಕೆಲಸವಾಯಿತು. ನೀವು ಆಫೀಸಿನಿಂದ ಮನೆಗೆ ಬರುವವರೆಗೂ ನಿರೀಕ್ಷೆ. ಮನೆಗೆ ಬಂದ ಕೂಡಲೆ ಊಟ ಮಾಡಿ ಮಲಗುತ್ತೀರಿ. ಅಡುಗೆ ಚೆನ್ನಾಗಿದೆ ಎಂದಾಗಲಿ... ಚೆನ್ನಾಗಿಲ್ಲ ಎಂದಾಗಲಿ ಹೇಳಲೂ ನಿಮಗೆ ಸಮಯ ಇರುತ್ತಿರಲಿಲ್ಲ. ಕನಿಷ್ಠ ಅಮ್ಮಾ ನಿಂದು ಊಟ ಆಯ್ತಾ ಎಂದು ಕೇಳುತ್ತೀರೋ ಎಂದು ನಿರೀಕ್ಷಿಸುತ್ತಿದ್ದೆ... ಆದರೆ ಪ್ರತಿ ಸಲವೂ ನಿರಾಸೆ ನನ್ನನ್ನು ಹಂಗಿಸುತ್ತಿತ್ತು. ನಿಮ್ಮ ತಂದೆ ವ್ಯಾಪಾರವನ್ನು ನಿನಗೆ ವಹಿಸಿದ. ನೀನೂ ಬಿಝಿ ಆದೆ. ತಂಗಿ ಮದುವೆ ಮಾಡಿಕೊಂಡು ಗಂಡನ ಜತೆಗೆ ವಿದೇಶಕ್ಕೆ ಹೊರಟು ಹೋದಳು. ತನ್ನ ಗಂಡ, ತನ್ನ ಕುಟುಂಬ, ತನ್ನ ಜೀವನ. ವಾರಕ್ಕೆ ಒಂದೆರಡು ನಿಮಿಷ ಮಾತ್ರ ಫೋನಲ್ಲಿ ಮಾತನಾಡುತ್ತಿದ್ದಳು. ಆಕೆ ಫೋನ್‍ಗಾಗಿ ನಿರೀಕ್ಷೆ. ನಿಮ್ಮ ತಂದೆಗೆ ಆರೋಗ್ಯ ಕೆಟ್ಟು ಮನೆಯಲ್ಲಿದ್ದರೆ ಅವರಿಗೆ ಸಮಯಕ್ಕೆ ಸರಿಯಾಗಿ ಔಷಧಿ ನೀಡಲು ನಿರೀಕ್ಷಿಸುತ್ತಾ ಕಳೆಯುತ್ತಿದ್ದೆ. ನೋಡಿದೆಯಾ ನನ್ನ ಬದುಕೆಲ್ಲಾ ನಿರೀಕ್ಷೆಯಲ್ಲೇ ಮುಗಿದುಹೋಯಿತು...

ನಿಮ್ಮ ತಂದೆ ಆರೋಗ್ಯ ಚೆನ್ನಾಗಿಲ್ಲದೆ ಮಾತ್ರೆ ಕೊಡುತ್ತೀಯಾ... ಊಟ ಇಡ್ತೀಯಾ..? ಅಷ್ಟೇ... ಪೇಪರ್ ಓದಲು ಸಮಯ ಇರುತ್ತದೆ. ನನ್ನೊಂದಿಗೆ ಮಾತನಾಡಲು ಸಮಯ ಇರುತ್ತಿರಲಿಲ್ಲ ನಿಮ್ಮ ತಂದೆಗೆ. ನಿಮ್ಮ ಸಂಗತಿ ಸರಿ. ವಯಸ್ಸಲ್ಲಿ ಸಂಪಾದನೆಯ ಮೋಜಿಗೆ ಬಿದ್ದು ನನ್ನೊಂದಿಗೆ ಮಾತನಾಡಲೂ ಸಮಯ ಇರಲ್ಲ ನಿಮಗೆ. ಇನ್ನು ಈ ವಯಸ್ಸಲ್ಲಿ ಮಾತನಾಡಲು ಏನಿರುತ್ತದೆ. ನಿರೀಕ್ಷೆ... ನಿರೀಕ್ಷೆ ನಿರೀಕ್ಷೆ... ಈಗ ಸಾವಿಗಾಗಿ ನನ್ನ ನಿರೀಕ್ಷೆ. ನಿನಗೆ ಒಂದು ಸಂಗತಿಯನ್ನು ಬದುಕಿದ್ದಾಗ ಹೇಳಲು ಆಗಲಿಲ್ಲ. ನನ್ನಂತೆ ನಿನ್ನ ಮಗಳೊ... ಮಗನೋ ಈ ರೀತಿ ಪತ್ರ ಬರೆಯಬಾರದು ಎಂಬ ಉದ್ದೇಶದಿಂದ ಸಾಯುವ ಮುನ್ನ ಈ ಪತ್ರ ಬರೆಯುತ್ತಿದ್ದೇನೆ. ಮನೆಯಲ್ಲಿರುವ ಹೆಂಗಸರಿಗೂ ಮನಸ್ಸು ಇರುತ್ತದೆ, ನಮಗಾಗಿಯೇ ಬದುಕುತ್ತಿದ್ದಾಳೆ ಎಂಬುದನ್ನು ಗ್ರಹಿಸು. ನಾನು ನಿರೀಕ್ಷಿಸಿದಂತೆ ನಿನ್ನ ಹೆಂಡತಿ ಸಹ ನಿರೀಕ್ಷಿಸುವಂತೆ ಮಾಡಬೇಡ. ಮನಸು ಬಿಚ್ಚಿ ಎಲ್ಲವನ್ನೂ ಆಕೆಯೊಂದಿಗೆ ಹಂಚಿಕೋ... ನಿನ್ನ ಹೆಂಡತಿ ಜತೆಗೆ ಮಕ್ಕಳ ಜತೆಗೆ ಸ್ವಲ್ಪ ಸಮಯ ಕಳಿ. ಧನಾರ್ಜನೆಯಿಂದ ಅವರನ್ನು ನಿರ್ಲಕ್ಷಿಸಬೇಡ... ನನ್ನ ಸೊಸೆಗೆ ನನ್ನಂತಹ ಪರಿಸ್ಥಿತಿ ಬಾರದಂತೆ ನೋಡಿಕೋ.. ಆಕೆಗೂ ನನ್ನಂತಹ ಮನಸ್ಸು ಇರುತ್ತದೆ ಎಂಬುದನ್ನು ಗಮನಿಸು. ಆಕೆ ಸಹ ನನ್ನಂತೆ ನಿರೀಕ್ಷೆಯಲ್ಲೇ ಸಾಯುವಂತೆ ಮಾಡಬೇಡ. ನಿನ್ನ ಕುಟುಂಬದ ಜತೆಗೆ ಹಾಯಾಗಿ ಕಳಿ. ಅವರ ಮನಸ್ಸನ್ನು ಬದುಕಿದ್ದಾಲೇ ಗೆದ್ದುಕೋ. ನಿನ್ನ ಕುಟುಂಬವೇ ನಿನಗೆ ಎಲ್ಲದರಲ್ಲೂ ಜತೆಯಾಗಿರುತ್ತದೆ ಎಂಬುದನ್ನು ಮರೆಯಬೇಡ. ಸೊಸೆ., ಮೊಮ್ಮಗ, ಮೊಮ್ಮಗಳು ಎಚ್ಚರ...

ಇಂತಿ..
ನಿನ್ನ ಅಮ್ಮ

ಈ ಕಾಗದ ಓದಿದ ಸೊಸೆ ಒಮ್ಮೆಲೆ ಕಣ್ಣೀರಾದಳು.. ಅತ್ತೆಯ ಜೀವನ ಕಣ್ಣ ಮುಂದೆ ಓಡಾಡಿದಂತಾಯಿತು. ಗಂಡನ ಪ್ರೀತಿಗಾಗಿ, ಮಕ್ಕಳ ಪ್ರೀತಿಗಾಗಿ ತಾನು ಅನುಭವಿಸಿದ ಮನೋವೇದನೆ ಅರ್ಥವಾಯಿತು... ಅತ್ತೆಯಾಗಿದ್ದು ತನ್ನ ಸೊಸೆ ಬಗ್ಗೆ, ಮೊಮ್ಮಕ್ಕಳ ಬಗ್ಗೆ ಅಷ್ಟೆಲ್ಲಾ ಆಲೋಚಿಸಿದ ಆ ತಾಯಿ ಮನಸ್ಸಿಗೆ ಮನಸ್ಸಿನಲ್ಲೇ ಪಾದಾಭಿವಂದನೆ ಮಾಡಿದಳು... ಪ್ರೀತಿಯಿಂದ ಹತ್ತಿರ ಬರಸೆಳೆದು ಕಣ್ಣೀರು ವರೆಸುತ್ತಿರುವ ತನ್ನ ಗಂಡನಿಗೆ ಇನ್ನಷ್ಟು ಹತ್ತಿರವಾಗಿ ತನ್ನ ಹೃದಯದಲ್ಲಿ ಹುದುಗಿ ಹೋದಳು... ಆ ಗಂಡ ಯಾವಾಗಲೂ ತನ್ನ ಕುಟುಂಬವನ್ನು ನಿರ್ಲಕ್ಷಿಸಲ್ಲ.. ಯಾಕೆಂದರೆ ತಾಯಿ ಅಷ್ಟೊಂದು ಕಾಳಜಿಯಿಂದ ಹೇಳಿದ ಬಳಿಕ ಹೇಗೆ ಮಾಡಲು ಸಾಧ್ಯ.

No comments