Header Ads

test

ದೇವಾಲಯಗಳಲ್ಲಿ ನಗ್ನ ಶಿಲ್ಪಗಳು ಯಾಕಿರುತ್ತವೆಂದು ಗೊತ್ತಾ.??

ನಾವು ದೇವಾಲಯಗಳಿಗೆ ಹೋದಾಗ, ಗೋಪುರಗಳನ್ನು ಹಾಗು ಕಂಬಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಹಲವಾರು ಶಿಲ್ಪಗಳಿರುತ್ತವೆ. ಅವುಗಳ ನಡುವೆ ಕೆಲವು ನಗ್ನ ಶಿಲ್ಪಗಳೂ ಇರುತ್ತವೆ. ಇವುಗಳಲ್ಲಿ ಹೆಚ್ಚಿನವು ಕಾಮ ಸೂತ್ರಕ್ಕೆ ಸಂಬಂಧಿಸಿದವುಗಳಾಗಿರುತ್ತವೆ. ಹೀಗೆ ನಗ್ನ ಶಿಲ್ಪಗಳನ್ನು ಯಾಕಾಗಿ ಕೆತ್ತಿರುತ್ತಾರೆಂದು ಬಹಳಷ್ಟು ಮಂದಿಗೆ ತಿಳಿಯದು.  ಇಂತಹ ಶಿಲ್ಪಗಳನ್ನು ನೋಡಿ ಮೂಗು ಮುರಿಯುವವರೂ ಇಲ್ಲದಿಲ್ಲ. ಹೀಗೆ ನಗ್ನ ಶಿಲ್ಪಗಳನ್ನು ಕೆತ್ತುವ ಹಿಂದೆ ಹಲವು ಉದ್ದೇಶಗಳು ಹಾಗೂ ರಹಸ್ಯಗಳಿವೆ.  ನಮ್ಮ ಪೂರ್ವಜರು ಸಂಭೋಗವನ್ನೂ ಸಹ ಪವಿತ್ರ ಕಾರ್ಯವನ್ನಾಗಿ ಭಾವಿಸುತ್ತಿದ್ದರು. ಆದುದರಿಂದಲೇ ಅವರು ದೇವಾಲಯಗಳನ್ನು ಕ್ರೀಡಾ ಮಂದಿರಗಳನ್ನಾಗಿ ಉಪಯೋಗಿಸುತ್ತಿದ್ದರಂತೆ. ಇದಕ್ಕೆ ಸಾಕ್ಷಿಗಳಿವೆ. ಹಾಗೆಯೇ, ರಥೋತ್ಸವ ಸಮಯದಲ್ಲಿ, ರಥ ನಿಂತಾಗ ಬಯ್ಯುತ್ತಾರಂತೆ. ಹೀಗೆ ಮಾಡದವರು ಪಾಪಾತ್ಮರಂತೆ.


ಒಂದು ಕಾಲದಲ್ಲಿ ಸ್ತ್ರೀ,ಪುರುಷರ ಅವಯವಗಳನ್ನು ಹೋಲುವ ಭಕ್ಷ್ಯಗಳನ್ನು ಮಾಡಿ, ಎಲ್ಲರೊಂದಿಗೂ ಹಂಚಿಕೊಂಡು ತಿನ್ನುತ್ತಿದ್ದರಂತೆ. ಹೀಗೆ ಮಾಡುವುದರಿಂದ ಸ್ತ್ರೀ,ಪುರುಷರ ದೋಷಗಳು ನಿವಾರಣೆಯಾಗುತ್ತವಂತೆ. ಭಾರತ ದೇಶದಲ್ಲಿ ಇಂದಿಗೂ ಮಹಿಳೆಯರು ರಜಸ್ವಲೆಯಾದಾಗ ಚಿಗಳಿ ಹಿಟ್ಟಿನಿಂದ ಸ್ತ್ರೀ ರೂಪವನ್ನು ಮಾಡಿ ಹಂಚುತ್ತಾರೆ. ಅದೇ ರೀತಿ ಯಾವಾಗಲೂ ದೇವರ ಸ್ಮರಣೆಯಲ್ಲೇ ಇದ್ದುಕೊಂಡು, ಸೃಷ್ಟಿ ಕಾರ್ಯವನ್ನು ಮರೆಯಬಾರದಂತೆ. 'ಕಾಮಿಯಾಗದವನು ಮೋಕ್ಷಗಾಮಿ ಆಗಲಾರ' ಎಂದು ಮಹಾವಿಷ್ಣುವೇ ಹೇಳಿದ್ದಾರಂತೆ. ಆದುದರಿಂದಲೇ ದೇವಾಲಯಗಳಲ್ಲಿ ನಗ್ನ ಶಿಲ್ಪಗಳನ್ನು ಕೆತ್ತಿರುತ್ತಾರಂತೆ .

No comments