Header Ads

test

ವಾಹನಗಳಿಗೆ ನಿಂಬೆಹಣ್ಣು ಮೆಣಸಿಕಾಯಿ ಯಾಕೆ ಕಟ್ಟುತ್ತಾರೆ ಗೊತ್ತಾ?

ನಾವು ಸಾಮಾನ್ಯವಾಗಿ ಹೊಸ ವಾಹನಗಳನ್ನು ಖರೀದಿಸಿದಾಗ ಪೂಜೆ ಮಾಡಿಸಿ ನಿಂಬೆಹಣ್ಣುಗಳನ್ನು ಕಟ್ಟುತ್ತಿರುತ್ತೇವೆ. ಅದೇ ರೀತಿ ಪ್ರತಿ ವಾರ ನಿಂಬೆಹಣ್ಣನ್ನು ಕಟ್ಟುತ್ತಿರುತ್ತೇವೆ. ಇಷ್ಟಕ್ಕೂ ವಾಹನಗಳಿಗೆ ನಿಂಬೆಕಾಯಿ ಯಾಕೆ ಕಟ್ಟುತ್ತಾರೆ ಗೊತ್ತಾ? ಉಗ್ರ ದೇವತೆಯ ಶಾಂತಿಗೆ ನಿಂಬೆಹಣ್ಣನ್ನು, ಕುಂಬಳಕಾಯನ್ನು ಕಟ್ಟುತ್ತಾರೆ. ವಾಹನಗಳಿಗೆ ಅಪಘಾತ ಆಗದಂತೆ ಇರಲು ದೇವತೆಗಳಿಗಿಂತ ಉಗ್ರ ದೇವತೆಗಳ ಮೇಲೆ ಆಧಾರಪಡುತ್ತಾರೆ.

ಸಾಮಾನ್ಯವಾಗಿ ಬಹಳಷ್ಟು ಮಂದಿ ವಾಹನಗಳಿಗೆ ಪೂಜೆಯನ್ನು ಆಂಜನೇಯ ದೇವಸ್ಥಾನದಲ್ಲಿ ಮಾಡಿಸುತ್ತಾರೆ. ಪೂಜೆ ಮಾಡಿಸಿ ಆ ನಿಂಬೆಹಣ್ಣನ್ನು ವಾಹನಗಳಿಗೆ ಕಟ್ಟುತ್ತಾರೆ. ನಿಂಬೆ ಹಣ್ಣಿನಿಂದ ದೃಷ್ಟಿ ತೆಗೆದು ವಾಹನಗಳನ್ನು ಅದರ ಮೇಲೆ ಹತ್ತಿಸುತ್ತಾರೆ.


ಈ ರೀತಿ ಮಾಡಿದರೆ ಯಾವುದೇ ಅಪಘಾತ ಆಗಲ್ಲ ಎಂಬ ನಂಬಿಕೆ. ಅಷ್ಟೇ ಅಲ್ಲದೆ ಹುಳಿಯಾಗಿರುವ ನಿಂಬೆಹಣ್ಣುಗಳು, ಖಾರದಿಂದ ಕೂಡಿರುವ ಒಣ ಮೆಣಸಿನಕಾಯಿ ದೃಷ್ಟಿ ತೆಗೆಯಲು ಹೇಗೆ ಉಪಯೋಗಕ್ಕೆ ಬರುತ್ತವೆ ಗೊತ್ತಾ? ಇವನ್ನು ವಾಹನಗಳಿಗೆ, ಅಂಗಡಿಗಳ ಬಳಿ ಯಾಕೆ ನೇತು ಹಾಕುತ್ತಾರೆ... ಅದಕ್ಕೆ ಒಂದು ಕಾರಣ ಇದೆ. ಗ್ರಹಗಳಲ್ಲಿ ಉಗ್ರ ರೂಪ, ಕೆಂಪಗೆ ಇರುವ ಗ್ರಹ ಕುಜ ಗ್ರಹ.

ಕುಜ ಗ್ರಹ ಅಪಘಾತಗಳಿಗೆ ಕಾರಣವಾಗುತ್ತದೆ. ಕುಜನಿಗೆ ಆದಿ ದೈವ ಆಂಜನೇಯಸ್ವಾಮಿ. ಅದೇ ರೀತಿ ಗ್ರಹಗಳಲ್ಲಿ ಶುಕ್ರ ಗ್ರಹಕ್ಕೆ ಸೇರಿದ ರುಚಿ ಹುಳಿ. ಅಭಿವೃದ್ಧಿಗೆ, ಸಂಪತ್ತಿಗೆ ಶುಕ್ರನು ಅಧಿಪತಿ. ಖಾರ ರವಿ ಗ್ರಹಕ್ಕೆ ಸೇರಿದ್ದು. ಅಧಿಕಾರಕ್ಕೆ ರವಿಕಾರಕನು. ಇವರು ವಾಹನ ಚಾಲಕನ ಕಡೆಗೆ ಶಾಂತವಾಗಿ ಇರಬೇಕೆಂದು ಬಯಸುತ್ತಾ ವಾಹನಗಳಿಗೆ ನಿಂಬೆಹಣ್ಣನ್ನು, ಮೆಣಸಿನ ಕಾಯನ್ನು ಕಟ್ಟುತ್ತಾರೆ.

ನಿಂಬೆಹಣ್ಣು ಮೆಣಸಿನಕಾಯಿ ಬಗ್ಗೆ ಇನ್ನೊಂದಿಷ್ಟು ಸಂಗತಿಗಳು:
* ನಿಂಬೆಹಣ್ಣು ಕಟ್ಟುವುದರಿಂದ ವಾತಾವರಣ ಸ್ವಚ್ಛವಾಗಿರುತ್ತದೆ. ಕ್ರಿಮಿ ಕೀಟಗಳು ನಾಶವಾಗುತ್ತವೆ.
* ನಿಂಬೆಹಣ್ಣಿನ ಪರಿಮಳ ಒಂದು ವಾರದ ತನಕ ಇರುತ್ತದೆ. ಅದಾದ ಬಳಿಕ ಅದು ಒಣಗುತ್ತದೆ. ಹಾಗಾಗಿ ಒಂದು ವಾರದ ಬಳಿಕ ನಿಂಬೆಹಣ್ಣನ್ನು ಬದಲಾಯಿಸಬೇಕು.
* ನಿಂಬೆಹಣ್ಣು ಮತ್ತು ಮೆಣಸಿಕಾಯಿ ಕಟ್ಟುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಸಂಚರಿಸುತ್ತದೆ.
* ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ಶನಿವಾರ ಮಾತ್ರ ನೇತು ಹಾಕಬೇಕು. ಆಗ ಇದರ ಪವರ್ ಹೆಚ್ಚಾಗಿರುತ್ತದೆ ಎನ್ನುತ್ತಾರೆ ವಾಸ್ತು ನಿಪುಣರು.

No comments