Header Ads

test

ಹದಿನಾರನೇ ವಯಸ್ಸಿಗೆ ಗರ್ಭದರಿಸಿದೆ.! ಆದರೂ ನನಗೆ ಬಾಳನ್ನು ಕರುಣಿಸಿದ ಡಾಕ್ಟರ್.!

ನನ್ನ ಹೆಸರು ಸಂಧ್ಯಾ, 16 ನೇ ವಯಸ್ಸಿನಲ್ಲಿ .ನಾನೊಬ್ಬ ಹುಡುಗನ ಕೈಲಿ ಮೋಸಹೋದೆ.! ಸೆಕ್ಸ್ ಫೀಲಿಂಗ್ಸ್ ಹೆಚ್ಚಾಗಿದ್ದ ಆ ಟೀನೇಜ್‌ನಲ್ಲಿ.ಏನೇನೋ ಹೇಳಿ ನನ್ನ ವಶಪಡಿಸಿಕೊಂಡ.! ಅದರ ಫಲವಾಗಿ ನಾನು ಗರ್ಭಿಣಿಯಾಗಿದ್ದೆ . ಈ ವಿಷಯದ ಬಗ್ಗೆ ಹುಡುಗನನ್ನು ಕೇಳಿದರೆ.. ನನಗೇನು ಸಂಬಂಧ ಇಲ್ಲ. ನಿನಗೆ ಬೇಕಾದವರಿಗೆ  ಹೇಳಿಕೋ ಎಂದು.. ಫ್ಯಾಮಿಲಿ ಸಮೇತ ನಮ್ಮೂರು ಬಿಟ್ಟು  ಹೋದ. ಈ ಸಂಗತಿ ಮನೆಯಲ್ಲಿ ಗೊತ್ತಾಗಿ.ನನ್ನನ್ನು ಮನೆಯಿಂದ ಓಡಿಸಿದರು.! ಎಲ್ಲಿಗೆ  ಹೋಗಬೇಕೋ ಗೊತ್ತಿಲ್ಲ, ಏನು ಮಾಡಬೇಕೋ ಗೊತ್ತಿಲ್ಲ.?



ನನ್ನ ಗೆಳತಿಯ ಮನೆಗೆ ಹೋದೆ.ವಿಷಯ ತಿಳಿದು  ಅವರ ಪೇರೆಂಟ್ಸ್ ಇನ್ನೊಮ್ಮೆ ನಮ್ಮ ಮನೆಗೆ ಬರಬೇಡ ಎಂದು ಮುಖದ ಮೇಲೆ ಹೊಡೆದಂತೆ ಹೇಳಿದರು. ಆ ಹುಡುಗಿ ಜತೆ ನಿನಗೇನು ಗೆಳೆತನ  ಎಂದು ನನ್ನ ಗೆಳತಿಯನ್ನೂ ಬೈದರು. ಎರಡು ದಿನಗಳ ಕಾಲ ಊಟ ಮಾಡದೆ.. ಗುಡಿಗಳಲ್ಲಿ ತಲೆಮರೆಸಿಕೊಳ್ಳುತ್ತಾ ಕಳೆದ.! ಸಾವೊಂದೇ ದಾರಿ ಎಂದುಕೊಂಡು.ಕ್ರಿಮಿನಾಶಕ ಸೇವಿಸಿ ರಸ್ತೆ ಮೇಲೆ ಬಿದ್ದುಬಿಟ್ಟೆ.! ಕಣ್ಣು ತೆರೆದು ನೋಡಿದರೆ ಆಸ್ಪತ್ರೆ ಬೆಡ್ ಮೇಲೆ ಇದ್ದೆ.

ನರ್ಸ್.ನನಗೇನಾಗಿದೆ? ನನ್ನನ್ನು ಇಲ್ಲಿ ಯಾರು ಸೇರಿಸಿದರು? ಎಂದು ಕೇಳಿದೆ.ಈ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿರುವ ಸತೀಶ್ ನಿಮ್ಮನ್ನು ಇಲ್ಲಿ ಅಡ್ಮಿಟ್ ಮಾಡಿದರು. ನೀವು ರಸ್ತೆ ಮೇಲೆ ತಲೆಸುತ್ತಿ ಬಿದ್ದಿದ್ದಾಗ. ಅವರೇ ಸ್ವತಃ ತಮ್ಮ  ಕಾರಿನಲ್ಲಿ ಕರೆತಂದು ಇಲ್ಲಿ ಜಾಯಿನ್ ಮಾಡಿದರು. ನಿಮಗೆ ಅರ್ಜೆಂಟ್ ಆಗಿ ಅಬಾರ್ಷನ್ ಮಾಡಬೇಕಾಯಿತು.ಹಾಗಾಗಿ ಅವರು ಹತ್ತಿರದಲ್ಲೇ ಇದ್ದು ನೋಡಿಕೊಂಡು ನಿಮಗೆ ಅಬಾರ್ಷನ್ ಮಾಡಿಸಿದರು. ಇಲ್ಲದಿದ್ದರೆ ನಿಮ್ಮ ಪ್ರಾಣಕ್ಕೆ ಅಪಾಯ ಕಾದಿತ್ತು.! ಎಂದು ಹೇಳಿದರು. ಅಷ್ಟರಲ್ಲಿ.ಹೇಗಿದ್ದೀಯಮ್ಮಾ? ಎಂದು ಡಾಕ್ಟರ್ ಸತೀಶ್ ನನ್ನ ಬಳಿ ಬಂದು ಕೇಳಿದರು.

ಪರ್ವಾಗಿಲ್ಲ ಸಾರ್.ನಿಮಗೆ ಥ್ಯಾಂಕ್ಸ್ ಎಂದು ನಮಸ್ಕಾರ ಮಾಡಿದೆ.ನನ್ನ ವಿವರಗಳನ್ನು ಕೇಳಿದರು, ನನ್ನ ಕಥೆಯನ್ನು ಅವರಿಗೆ  ಹೇಳಿದೆ.ನನ್ನ ಪರಿಸ್ಥಿತಿಯನ್ನು ಅವರು  ಅರ್ಥ ಮಾಡಿಕೊಂಡರು . ಅದೇ ಆಸ್ಪತ್ರೆಯಲ್ಲಿ ತನ್ನ ರೆಫರೆನ್ಸ್‌ನಿಂದ ಕೆಲಸ ಕೊಡಿಸಿದರು. ಬಳಿಕ ನಮ್ಮ ಮನೆಗೆ ಬಂದು ತಂದೆತಾಯಿ ಜತೆ ಮಾತನಾಡಿದರು. ನಾನೀಗ ನಮ್ಮ ತಂದೆತಾಯಿ ಮಾತು ಕೇಳುತ್ತಾ ನನ್ನ ಕೆಲಸ ಮಾಡಿಕೊಂಡು ಹಾಯಾಗಿ ಇದ್ದೇನೆ.!

ನಾನು ಹೇಳಬೇಕೆಂದಿರುವುದು :ಟೀನೇಜ್‌ನಲ್ಲಿ ಮನಸ್ಸು ನಮ್ಮ ಹಿಡಿತದಲ್ಲಿ     ಇರುವುದಿಲ್ಲ.  ಎಲ್ಲರೂ ಒಳ್ಳೆಯವರೇ ಎಂದು ಅನ್ನಿಸುತ್ತದೆ. ಆದರೆ.ಸ್ವಲ್ಪ  ಎಚ್ಚರ ದಿಂದ ಇರಬೇಕಾದ ವಯಸ್ಸದು.! ಹೆಜ್ಜೆ ತಪ್ಪಿದರೆ.ಜೀವನವೇ ತಲೆಕೆಳಗಾಗುತ್ತದೆ. ಎಲ್ಲರಿಗೂ ಸತೀಶ್ ನಂತಹವರು ಸಿಗುವುದಿಲ್ಲವಲ್ಲವೇ.!

No comments