Header Ads

test

ಹೊಕ್ಕಳು ಕೆಲವರಿಗೆ ಒಳಕ್ಕೆ, ಕೆಲವರಿಗೆ ಹೊರಕ್ಕೆ ಇರುತ್ತದೆ. ಯಾಕೆ ಗೊತ್ತಾ.?

ಹೊಕ್ಕುಳು ಎಂದ ಕೂಡಲೆ ಇದೇನೋ ಶೃಂಗಾರಕ್ಕೆ ಸಂಬಂಧಿಸಿದ ಅಂಶ ಎಂದು ಭಾವಿಸಬೇಡಿ. ಯಾಕೆಂದರೆ ಇದು ಹೊಕ್ಕುಳ ಬಗ್ಗೆ ಕೆಲವು ವಿಷಯಗಳನ್ನು ತಿಳಿಸುವ ಕುತೂಹಲಕರವಾದ ಕಥನ. ಹೌದು, ಇಷ್ಟಕ್ಕೂ ಹೊಕ್ಕುಳ ಬಗ್ಗೆ ತಿಳಿದುಕೊಳ್ಳುವುದು ಏನಿದೆ.? ಎಂಬುದೇ ತಾನೇ ನಿಮ್ಮ ಸಂದೇಹ.! ನಮ್ಮಲ್ಲಿ ಬಹಳಷ್ಟು ಮಂದಿಗೆ ಹೊಕ್ಕುಳು ನಾನಾ ನಮೂನೆಯಲ್ಲಿರುತ್ತದೆ. ಯಾರಿಗೂ ಒಂದೇ ತರಹ ಇರಲ್ಲ. ಕೆಲವರಿಗೆ ಒಳಕ್ಕೆ ಇದ್ದರೆ, ಕೆಲವರಿಗೆ ಹೊರಕ್ಕೆ ಬಂದಂತೆ ಇರುತ್ತದೆ. ಇನ್ನೂ ಕೆಲವರಿಗೆ ಇನ್ನೊಂದು ತರಹ ಇರುತ್ತದೆ. ಆದರೆ ಆ ರೀತಿ ಯಾಕೆ ಇರುತ್ತದೆ ಗೊತ್ತಾ.? ಅದನ್ನೇ ಈಗ ನೋಡೋಣ.



ಹೊಕ್ಕುಳು ಹೊರಕ್ಕೆ ಇದ್ದರೆ ಅದನ್ನು outie ಎನ್ನುತ್ತಾರೆ. ಅದೇ ಒಳಕ್ಕೆ ಇದ್ದರೆ ಅದನ್ನು innie ಎನ್ನುತ್ತಾರೆ. ಆದರೆ ನಿಜವಾಗಿ ಇದು ಹುಟ್ಟಿನಿಂದ ಬಂದದ್ದಲ್ಲ. ಅವು ಹೇಗೆ ಬರುತ್ತವೆಂದರೆ..ಮಗು ಹುಟ್ಟಿದಾಗ ತಾಯಿಯೊಂದಿಗೆ ಬರುವ ಹೊಕ್ಕುಳ ಬಳ್ಳಿಯನ್ನು ಕತ್ತರಿಸುತ್ತಾರೆ. ಈ ಕ್ರಮದಲ್ಲಿ ಹೊಕ್ಕುಳ ಬಳಿ ಗಾಯ ಆಗುತ್ತದೆ. ಅದು ಬಹಳ ಕಾಲದ ಬಳಿಕ ವಾಸಿಯಾಗುತ್ತದೆ. ಅದೇ ಸಮಯದಲ್ಲಿ ಈ ಹಿಂದೆ ತಿಳಿಸಿದ ಔಟಿ, ಇನ್ನಿ ಉಂಟಾಗಲು ಕಾರಣವಾಗುತ್ತದೆ. ಅದೇ ರೀತಿ ಹೊಕ್ಕುಳ ಸುತ್ತ ಭಾಗ ಬೇಗ ಬೆಳವಣಿಗೆಯಾದರೆ ಅದರಿಂದ ಇನ್ನಿ ಬರುತ್ತದೆ. ಅಂದರೆ ಹೊಕ್ಕುಳು ಒಳಗೆ ಹೋಗುತ್ತದೆ.

ಆ ರೀತಿ ಅಲ್ಲದೆ ಹೊಕ್ಕುಳ ಸುತ್ತ ದೇಹ ನಿಧಾನಕ್ಕೆ ಬೆಳೆದರೆ ಆಗ ಹೊಕ್ಕುಳು ಹೊರಗೆ ಬಂದಂತೆ ಕಾಣಿಸುತ್ತದೆ. ಇನ್ನಿ, ಔಟಿಗಳಷ್ಟೇ ಅಲ್ಲದೆ ಇನ್ನೊಂದು ವಿಧದ ಹೊಕ್ಕುಳು ಸಹ ಇದೆ. ಅದು ಹೇಗೆ ಇರಲಿ ಮಗುವಾಗಿದ್ದಾಗಲೇ ಉಂಟಾಗುತ್ತದೆ. ಅಷ್ಟೇ ಹೊರತು ಹುಟ್ಟಿನಿಂದ ಬರಲ್ಲ. ಕೆಲವು ಸಂದರ್ಭಗಳಲ್ಲಿ ಹೊಕ್ಕುಳು ಇನ್ನೂ ಒಳಕ್ಕೆ ಹೋಗುತ್ತಿರುತ್ತದೆ. ಇದನ್ನು umbilical hernia ಎಂದು ಕರೆಯುತ್ತಾರೆ. ಇನ್ನೂ ಕೆಲವರಿಗಾದರೆ ಹೊಕ್ಕುಳು ಇನ್ನು ಹೊರಗೆ ಬರುತ್ತದೆ. ತುಂಬಾ ದೊಡ್ಡ ಗಡ್ಡೆಯಂತೆ ಹೊರಗೆ ಬಂದು ಕಾಣಿಸುತ್ತದೆ. ಆದರೆ ಇದು ಕಾಯಿಲೆ ಇರುವಷ್ಟು ದಿನ ಇರುತ್ತದೆ. ಅಥವಾ ಕೆಲವು ಸಂದರ್ಭಗಳಲ್ಲಿ ಜೀವನಪರ್ಯಂತ ಇರಬಹುದು. ಈ ರೀತಿ ಹೊಕ್ಕಳು ಇರುವ ಬಹಳಷ್ಟು ಮಂದಿ 2005ರಲ್ಲಿ ಭಾರಿ ಸಂಖ್ಯೆಯಲ್ಲಿ ಸರ್ಜರಿ ಮಾಡಿಸಿಕೊಂಡರಂತೆ. ನಿಜವಾಗಿಯೂ ಇದೊಂದು ವಂಡರ್. ಇನ್ನು ಕೊನೆಯದಾಗಿಇನ್ನೊಂದು ಸಂಗತಿ ಏನೆಂದರೆ.ಗರ್ಭಿಣಿಯರಿಗೆ ತಿಂಗಳು ತುಂಬುತ್ತಿರುವಾಗ ಅವರ ಹೊಕ್ಕುಳು ಹೊರಗೆ ಬಂದಂತೆ ಕಾಣುತ್ತದೆ. ಡೆಲಿವರಿ ಆದ ಬಳಿಕ ನಾರ್ಮಲ್ ಆಗುತ್ತದೆ. ಈ ರೀತಿ ಸಹ ಹೊಕ್ಕುಳ ಸೈಜು, ಶೇಪ್‌ನಲ್ಲಿ ಬದಲಾವಣೆ ಬರುತ್ತದೆ. ಏನೇ ಇರಲಿ ಹೊಕ್ಕುಳ ಬಗೆಗಿನ ಈ ಸಂಗತಿಗಳು ತುಂಬಾ ಕುತೂಹಲಕರವಾಗಿವೆ ಅಲ್ಲವೇ.!

No comments