Header Ads

test

ಆ ಫ್ರಿಜ್‌ನಲ್ಲಿ ಇರುವ ಆಹಾರವನ್ನು ಯಾರೇ ಆಗಲಿ ಉಚಿತವಾಗಿ ತಿನ್ನಬಹುದು. ಯಾಕೆ ಗೊತ್ತಾ..?

ಹಸಿವಾದರೆ ಮನೆಯಲ್ಲಿ ಅಡುಗೆ ಮಾಡಿಕೊಂಡು ತಿನ್ನುತ್ತೇವೆ. ಅದು ಇಷ್ಟವಾಗಲಿಲ್ಲ ಎಂದರೆ ಹೊರಗೆ ಯಾವುದಾದರೂ ಹೋಟೆಲ್‌ಗೆ ಹೋಗಿ ಇಷ್ಟವಾದ ಆಹಾರ ಪಾರ್ಸಲ್ ತಂದು ತಿನ್ನುತ್ತೇವೆ. ಆದರೆ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದವರ ಪರಿಸ್ಥಿತಿ ಏನು..? ಅವರಿಗೆ ಯಾರು ಅನ್ನ ಹಾಕುತ್ತಾರೆ..? ಎಂದರೆ ಅದಕ್ಕೊಂದು ಉತ್ತರ ಸಿಗಲ್ಲ. ಆದರೆ ಆ ಪ್ರದೇಶದಲ್ಲಿ ಮಾತ್ರ ಆಹಾರ ಯಾರು ಇಡುತ್ತಾರೆ ಎಂದರೆ...ಅಲ್ಲಿರುವ ಫ್ರಿಜ್ ಹೆಸರು ಹೇಳುತ್ತಾರೆ. ಯಾಕೆಂದರೆ ಅದೇ ಅಲ್ಲಿನ ಬಡವರಿಗೆ ಊಟ ಕೊಡುತ್ತದೆ. ಇದೇನಿದು ಫ್ರಿಜ್ ಊಟ ಕೊಡುತ್ತದೆ ಎಂದರೆ ಏನರ್ಥ..? ಎಂದು ಚಕಿತರಾಗುತ್ತಿದ್ದೀರಾ..! ಹೌದು ಫ್ರಿಜ್ ಆಹಾರ ಇಡುತ್ತದೆ. ಆದರೆ ಅದನ್ನು ನೋಡಿಕೊಳ್ಳುವುದು ಮಾತ್ರ ಒಬ್ಬ ಮಹಿಳಾ ವೈದ್ಯೆ. ಆಕೆಯ ಪ್ರಯತ್ನದಿಂದಲೇ ಆ ಫ್ರಿಜ್ ನಡೆಯುತ್ತದೆ. ಅದರ ಸಹಾಯದಿಂದ ಬಡವರಿಗೆ ಹೊಟ್ಟೆ ತುಂಬ ಊಟ ಹಾಕುತ್ತಾರೆ.


ಆಕೆ ಹೆಸರು ಇಸಾ ಫಾಮಿಮಾ ಜಾಸ್ಮಿನ್. ಚೆನ್ನೈ ನಿವಾಸಿ. ಈಕೆ ಒಬ್ಬ ಆರ್ಥೋ ಡೆಂಟಿಸ್ಟ್. ಆದರೆ ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಒಳ್ಳೆಯ ಮನಸ್ಸುಳ್ಳವರು. ನಮ್ಮ ದೇಶದಲ್ಲಿ ಮನೆಯಲ್ಲಾಗಲಿ, ಹೋಟೆಲ್ಸ್, ರೆಸ್ಟೋರೆಂಟ್‌ಗಳಲ್ಲಾಗಲಿ ತಯಾರಿಸಿದ ಆಹಾರ ಶೇ.50ರಷ್ಟು ವ್ಯರ್ಥವಾಗುತ್ತಿದೆ ಎಂದು ಹಲವು ಸಂಸ್ಥೆಗಳು ಹೇಳುತ್ತಿವೆ. ಆದರೆ ಅದೇ ಆಹಾರವನ್ನು ಬಿಸಾಡದಂತೆ ಬಡವರಿಗೆ ಇಟ್ಟರೆ ಅದರಿಂದ ದೇಶದಲ್ಲಿ ಯಾರೂ ಹಸಿವಿನಿಂದ ನರಳಬೇಕಾದ ಅಗತ್ಯ ಇರಲ್ಲ ಎಂದು ಫಾತಿಮಾ ಭಾವಿಸಿದರು. ಈ ಹಿನ್ನೆಲೆಯಲ್ಲಿ ಆ ರೀತಿಯ ಆಹಾರವನ್ನು ಸಂಗ್ರಹಿಸಿ ಆಕೆ ಚೆನ್ನೈನ ಬೀಚ್‌ನಲ್ಲಿ ಒಂದು ಕಮ್ಯುನಿಟಿ ಫ್ರಿಜ್ ಇಟ್ಟಿದ್ದಾರೆ.

ಆ ಭಾಗದ ಸುತ್ತಮುತ್ತಲಿನವರು, ಹೋಟೆಲ್‌ನವರು ತಮ್ಮ ಬಳಿ ಉಳಿದ ಆಹಾರವನ್ನು ಇದರಲ್ಲಿ ಇಡಲು ಪ್ರಾರಂಭಿಸಿದರು. ಆ ವಿಷಯ ಗೊತ್ತಾದ ಬಡವರು ಫ್ರಿಜ್ ಬಳಿಗೆ ಬಂದು ಅದರಲ್ಲಿರುವ ಆಹಾರವನ್ನು ತೆಗೆದುಕೊಂಡು ತಿನ್ನಲು ಪ್ರಾರಂಭಿಸಿದರು. ಆ ರೀತಿ ಈ ಸುದ್ದಿ ಬಹಳಷ್ಟು ಮಂದಿಗೆ ಗೊತ್ತಾಗಿ ಈಗ ಹೆಚ್ಚಿನ ಪ್ರಮಾಣದ ಆಹಾರವನ್ನು ಅಲ್ಲಿನ ಬಡವರಿಗೆ ನೀಡುತ್ತಿದ್ದಾರೆ. ಕೇವಲ ಆಹಾರವಷ್ಟೇ ಅಲ್ಲ, ಕೆಲವರು ಹಣ್ಣುಗಳು, ಜ್ಯೂಸ್‌ನಂತಹವನ್ನೂ ಇಡುತ್ತಿದ್ದಾರೆ. ಅದರ ಪಕ್ಕದಲ್ಲೇ ಒಂದು ಷಲ್ಫ್ ಸಹ ಏರ್ಪಡಿಸಿದ್ದಾರೆ. ಅದರದಲ್ಲಿ ಹಳೆ ಪುಸ್ತಕಗಳು, ಬಟ್ಟೆ, ಬೊಂಬೆ, ಶೂಸ್, ಚಪ್ಪಲಿಯಂತಹ ವಸ್ತುಗಳನ್ನೂ ಇಡಲು ಪ್ರಾರಂಭಿಸಿದರು. ಇದರಿಂದ ಆ ವಸ್ತುಗಳನ್ನೂ ಸಹ ಬಡವರು ತೆಗೆದುಕೊಳ್ಳುತ್ತಿದ್ದಾರೆ. ಕಮ್ಯುನಿಟಿ ಫ್ರಿಜ್ ಎಂಬ ಐಡಿಯಾ ಸಕ್ಸಸ್ ಆದಕಾರಣ ಇನ್ನಷ್ಟು ಕಡೆ ಈ ರೀತಿ ಏರ್ಪಡಿಸಿದರೆ ಚೆನ್ನಾಗಿರುತ್ತದೆಂದು ಫಾತಿಮಾ ಭಾವಿಸುತ್ತಿದ್ದಾರೆ. ಆಕೆಯ ಪ್ರಯತ್ನ ನೆರವೇರಬೇಕೆಂದು ನಾವೂ ಬಯಸೋಣ..!

No comments