Header Ads

test

ತಾಳಿಕಟ್ಟುವ ಮೊದಲು ವರನಿಗೆ ಆ ವಧು ಏನು ಷರತ್ತು ಹಾಕಿದಳು ಗೊತ್ತಾ..? ಆ ಹೊಡೆತಕ್ಕೆ ಮದುವೆಗೆಬಂದವರೆಲ್ಲಾ..!

ಆಕೆ ಹೆಸರು ಪೂನಮ್, ಆಕೆಯದು ಹರ್ಯಾಣ ರಾಜ್ಯದಲ್ಲಿನ ಬಿಲಾವಲ್ ಎಂಬ ಗ್ರಾಮ.... ಅವರ ತಂದೆ ಒಬ್ಬ ಸರಕಾರಿ ಶಿಕ್ಷಕ. ಇನ್ನೇನು ಸ್ವಲ್ಪ ದಿನಗಳಲ್ಲಿ ಸಂದೀಪ್ ಕುಮಾರ್ ಎಂಬ ವ್ಯಕ್ತಿಯೊಂದಿಗೆ ಆಕೆ ಮದುವೆ ನೆರವೇರಲಿದೆ. ಆದರೆ ಅಲ್ಲಿನ ಸಂಪ್ರದಾಯದ ಪ್ರಕಾರ ಯುವಕರೇ ದಕ್ಷಿಣೆಯಾಗಿ ಹುಡುಗಿಯರಿಗೆ ವಧು ದಕ್ಷಿಣೆ ನೀಡುವ ಆಚಾರ ಇದೆ. ಸೋ ಹುಡುಗಿಯರ ಕಡೆಯ ಬಂಧುಗಳು, ಹುಡುಗನ ಕಡೆಯವರು ಕುಳಿತು ಆ ವಿಚಾರವಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಹುಡುಗಿಗೆ ನಾವು ಬಂಗಾರ ಮಾಡಿಸುತ್ತೇವೆ... ಅದೂ ಇದೂ ಎಂದು ಪಟ್ಟಿ ಬರೆಯುತ್ತಿದ್ದಾರೆ ಹುಡುಗನ ತಂದೆ ತಾಯಿ.


ಅಲ್ಲಿಯವಗೂ ಕೂಲ್ ಆಗಿ ಇದ್ದ ಆ ಹುಡುಗಿ... ನಿಮ್ಮ ಹುಡುಗ ನನ್ನ ಕೊರಳಲ್ಲಿ ಮೂರು ಗಂಟು ಹಾಕುವುದಕ್ಕೂ ಮುನ್ನವೇ ಒಂದು ಕೆಲಸ ಮಾಡಬೇಕೆಂದು ಷರತ್ತು ವಿಧಿಸಿದಳು ಆ ಯುವತಿ. ಏನು ಆ ಷರತ್ತು ಎಂದು ಎಲ್ಲರೂ ಆ ಕಡೆಗೆ ಅಚ್ಚರಿಯಿಂದ ನೋಡಿದರು ಹುಡುಗನ ಕಡೆಯ ಬಂಧುಗಳು... ಆಗ ಪೂನಮ್.... "ನೀವು ನನ್ನ ಕೊರಳಿಗೆ ತಾಳಿ ಕಟ್ಟುವ ಮೊದಲು 11 ಮಂದಿ ಬಾಲಕಿಯರಿಗೆ ಶಿಕ್ಷಣದ ಜವಾಬ್ದಾರಿ ವಹಿಸಿಕೊಳ್ಳಬೇಕು. ನಿಮ್ಮಿಂದ ನನಗೆ ಒಂದೇ ಒಂದು ಬಿಡಿಗಾಸು ಬೇಡ. ನನಗೇನು ಕೊಡಬೇಕು ಎಂದುಕೊಂಡಿದ್ದೀರೋ.. ಅದೆಲ್ಲಾ ಒಂದು 11 ಮಂದಿ ಅಸಹಾಯಕರಾದ ಬಾಲಕಿಯರ ಹೆಸರಿನಲ್ಲಿ ಡಿಪಾಸಿಟ್ ಮಾಡಿ, ಅದರಿಂದ ಬರುವ ಬಡ್ಡಿಯಲ್ಲಿ ಅವರ ಶಿಕ್ಷಣ ಸಕ್ರಮವಾಗಿ ಸಾಗುವಂತೆ ಮಾಡುತ್ತೇನೆ ಎಂಬ ಭರವಸೆ ನೀಡಿದರೆ ಸಾಕು... ನಾನು ಸಂತೋಷದಿಂದ ಕೊರಳೊಡ್ಡಿ ನಿಮ್ಮಿಂದ ತಾಳಿ ಕಟ್ಟಿಸಿಕೊಳ್ಳುತ್ತೇನೆ ಎಂದಳು.

ಯುವತಿಯರು ಶಿಕ್ಷಣ ಪಡೆಯದ ಕಾರಣಕ್ಕೇ ದೇಶ ಹಿಂದಿಳಿಯುತ್ತಿದೆ ಎಂದು ಆಕೆ ಬಲವಾಗಿ ನಂಬಿದ್ದಾಳೆ. ಓರ್ವ ಶಿಕ್ಷಕರ ಮಗಳಾಗಿ ಈ ವಿಷಯದ ಬಗ್ಗೆ ಆಕೆಗೆ ಸಂಪೂರ್ಣ ಹಿಡಿತ ಸಹ ಇದೆ. ಹಾಗಾಗಿ ಮದುವೆಗೆ ಮುನ್ನ ಗಂಡನಿಗೆ ಈ ಕಂಡೀಷನ್ ಹಾಕಿದಳು. ಮೈ ತುಂಬಾ ಆಭರಣಗಳು ಬೇಕು. ಲಕ್ಷಾಂತರ ರೂ. ಬ್ಯಾಂಕ್ ಅಕೌಂಟ್‌‌ನಲ್ಲಿ ಡಿಪಾಸಿಟ್ ಮಾಡಬೇಕು ಎಂದುಆಲೋಚಿಸುವ ಈ ದಿನಗಳಲ್ಲಿ ಪೂನಂ ನಿರ್ಧಾರವನ್ನು ಎಲ್ಲರೂ ಸ್ವಾಗತಿಸಬೇಕು ಅಲ್ಲವೇ..?

ಇಂತಹವರು ಎಲ್ಲೋ ನೂರಕ್ಕೆ ಒಬ್ಬರು ಮಾತ್ರ ಸಿಗುತ್ತಾರೆ. ಅದೇನೇ ಇರಲಿ ಇಂತಹವರನ್ನು ಪತ್ನಿಯಾಗಿ ಪಡೆಯುತ್ತಿರುವ ಆ ಯುವಕನೇ ಧನ್ಯ...! ಅವರಿಬ್ಬರಿಗೂ ಒಳ್ಳೆಯದಾಗಲಿ. ಸಾಕಷ್ಟು ಮಂದಿ ಇಂದು ತಾವಾಯಿತು ತಮ್ಮ ಕೆಲಸವಾಯಿತು ಎಂದು ಬಯಸುವವರೇ.... ಅದರಲ್ಲೂ ತಾನು ತನ್ನ ಹೆಂಡತಿ ಮಕ್ಕಳು ಚೆನ್ನಾಗಿದ್ದರೆ ಸಾಕು ಎಂಬು ಭಯಸುವ ಸ್ವಾರ್ಥರತ್ನರು ಬಹಳಷ್ಟು ಮಂದಿ ಕಾಣುತ್ತಾರೆ... ಅಂತಹದ್ದಲ್ಲಿ ಇಂತಹವರು ಅಪರೂಪ ಅಲ್ಲವೇ...!

No comments