Header Ads

test

ರೈಲು ಹಳಿಗಳ ಕೆಳಗೆ, ಸುತ್ತಲೂ ಜಲ್ಲಿಕಲ್ಲು ಯಾಕೆ ಹಾಕುತ್ತಾರೆ ಗೊತ್ತೆ.?

ರೈಲು ಹಳಿಗಳ ಪಕ್ಕದಲ್ಲಿ ಎಂದಾದರೂ ನೀವು ನಡೆದಾಡಿದ್ದೀರಾ.? ನಡೆದಿದ್ದೇವೆ.ಆದರೆ ಏನೀಗ ಅಂತೀರಾ.? ಏನೂ ಇಲ್ಲ.ರೈಲು ಹಳಿ ಪಕ್ಕ ಜಲ್ಲಿಕಲ್ಲಿನ ಮೇಲೆ ನಡೆಯುತ್ತಿದ್ದರೆ ನಿಜವಾಗಿಯೂ ಅದೊಂದು ತರಹ ಅನುಭವ. ಯಮ ವೇಗದಲ್ಲಿ ನುಗ್ಗಿಬರುವ ರೈಲಿನ ಸಪ್ಪಳಕ್ಕೆ ಆ ಸಮಯದಲ್ಲಿ ದಂಗಾಗುತ್ತೇವೆ. ಆದರೂ ಟ್ರ್ಯಾಕ್ ಮೇಲಿನ ಕಲ್ಲುಗಳ ಮೇಲೆ ನಡೆಯುವುದು ಅಷ್ಟು ಸುಲಭವಲ್ಲ. ರೈಲು ಹಳಿ ನಡುವೆ, ಪಕ್ಕದಲ್ಲಿ, ಸುತ್ತಲೂ.ರೈಲು ಹಳಿಗಳು ಜಲ್ಲಿಕಲ್ಲಿನಿಂದ ಯಾಕೆ ತುಂಬಿದೆ ಗೊತ್ತಾ? ಜಲ್ಲಿಕಲ್ಲನ್ನು ಹಳಿಗಳ ಕೆಳಗೆ ಯಾಕೆ ಹಾಕುತ್ತಾರೋ, ಅವುಗಳನ್ನು ಕ್ರಮಬದ್ಧವಾಗಿ ಯಾಕೆ ಅಳವಡಿಸುತ್ತಾರೋ.ಅದನ್ನೇ ತಿಳಿದುಕೊಳ್ಳೋಣ ಬನ್ನಿ.!


ರೈಲು ಹಳಿ ಕೆಳಗೆ, ಸುತ್ತಲೂ ಇರುವ ಜಲ್ಲಿ ಕಲ್ಲನ್ನು ಬಲ್ಲಾಸ್ಟ್ ಅಂತಾರೆ. ಈಗ ಹಳಿಗಳ ನಡುವೆ ಕಾಂಕ್ರೀಟ್ ದಿಮ್ಮಿಗಳನ್ನು ಹಾಕಲಾಗುತ್ತಿದೆ, ಒಂದ್ ಕಾಲದಲ್ಲಿ ಮರದ ದಿಮ್ಮಿಗಳನ್ನು ಬಳಸುತ್ತಿದ್ದರು. ಮರದ ದಿಮ್ಮಿಯಾದರೂ ಕಾಂಕ್ರೀಟ್ ಆದರೂ ಚಿತ್ರದಲ್ಲಿ ತೋರಿಸಿರುವಂತೆ ಸ್ಲಿಪರ್ಸ್‌ ಜತೆಗೆ ಒಂದಕ್ಕೊಂದು ಫಿಟ್ ಮಾಡ್ತಾರೆ. ಇದರ ಜತೆಗೆ ಹಳಿಗಳಿಗೆ ದಿಮ್ಮಿಗಳನ್ನು ಸಹ ಅಳವಡಿಸುತ್ತಾರೆ. ಈ ರೀತಿ ಅಳವಡಿಸಿದ ಬಳಿಕ ಆ ದಿಮ್ಮಿಗಳು, ಹಳಿಗಳು ಸರಿಯಾದ ಪೊಸಿಷನ್‍ನಲ್ಲಿ ಇರಲು ಸುತ್ತಲೂ, ಕೆಳಗೆ ಜಲ್ಲಿಕಲ್ಲು ಹಾಕಿ ಅದನ್ನು ಸಮಗೊಳಿಸುತ್ತಾರೆ. ಇದರಿಂದ ಹಳಿಗಳು, ದಿಮ್ಮಿಗಳು, ಸ್ಲಿಪರ್ಸ್ ಒಂದೇ ಸ್ಥಾನದದಲ್ಲಿ ಫಿಕ್ಸ್ ಆಗಿರುತ್ತವೆ. ಅವು ಅತ್ತ ಇತ್ತ ಅಲುಗಾಡಲ್ಲ.

ಆದರೆ.ಹಳಿಗಳ ಪಕ್ಕದಲ್ಲೂ ಜಲ್ಲಿಕಲ್ಲು ಹಾಕುತ್ತಾರೆ ಅಲ್ಲವೆ.. ಎಂದರೆ ಅದಕ್ಕೂ ಕಾರಣ ಇದೆ. ಸಾಮಾನ್ಯವಾಗಿ ರೈಲು ಹಳಿಯನ್ನು ಭೂಭಾಗದಿಂದ ಸ್ವಲ್ಪ ಎತ್ತರದಲ್ಲಿ ಜಲ್ಲಿಕಲ್ಲಿನ ಮೇಲೆ ಏರ್ಪಾಟು ಮಾಡ್ದಲಾಗಿರುತ್ತದೆ. ಅದಕ್ಕೆ ಜತೆಯಾಗಿ ಹಳಿ ಪಕ್ಕದಲ್ಲಿ ಜಲ್ಲಿಕಲ್ಲು ಹಾಕುತ್ತಾರೆ. ಹಾಗೆ ಮಾಡುವುದರಿಂದ ಮಳೆ ನೀರು ಸುಲಭವಾಗಿ ಭೂಮಿಯಲ್ಲಿ ಇಂಗುತ್ತದೆ. ಹಳಿಗಳ ಮೇಲೆ ನೀರು ನಿಲ್ಲುವುದಿಲ್ಲ. ಇದರಿಂದ ರೈಲುಗಳ ಸಂಚಾರಕ್ಕೆ ತೊಂದರೆಯಾಗುವುದಿಲ್ಲ. ಅತಿವೃಷ್ಟಿಯಿಂದ ಹಳಿಗಳು ಕೊಚ್ಚಿಕೊಂಡು ಹೋಗುವುದಿಲ್ಲ. ಆ ರೀತಿ ಮಾಡುವುದರಿಂದ ಗಿಡಗಂಟೆಗಳು ಬೆಳೆಯುವುದಿಲ್ಲ. ಕೆಳಗೆ ಕಸ ಸೇರಿಕೊಳ್ಳುವುದಿಲ್ಲ. ಹಳಿ ಕ್ಲಿಯರ್ ಆಗಿ ಕಾಣಿಸುತ್ತದೆ.

No comments