Header Ads

test

ಆ ಯುವಕ ದೂರು ನೀಡಲು ಪೊಲೀಸ್ ಸ್ಟೇಷನ್ ಗೆ ಹೋದ.! ಆದರೆ, ಎಸ್ಐ ಆತನಿಗೆ ಸ್ವೀಟ್ಸ್ ನೀಡಿದ. ಯಾಕೆಂದುಗೊತ್ತಾ.?

ಪೊಲೀಸರೆಂದರೆ ನಮ್ಮ ಸಮಾಜದಲ್ಲಿ ಎಲ್ಲರೂ ಹೆದರುತ್ತಾರೆ. ಖಾಕೀ ಸಮವಸ್ತ್ರದಲ್ಲಿ ಪೊಲೀಸರು ಕಾಣಿಸಿಕೊಂಡರೆ.ಎಲ್ಲರಲ್ಲೂ ಏನೋ ಒಂದು ವಿಧವಾದ ಭಯವುಂಟಾಗುತ್ತದೆ. ಭಯವೊಂದೇ ಅಲ್ಲದೆ ಅವರ ಬಗ್ಗೆ ತಾತ್ಸಾರ ಭಾವನೆ ಸಹ ಮೂಡುತ್ತದೆ. ನಾವೂ ಸಹ ನಿಮ್ಮಂತೆಯೇ ಮನುಷ್ಯರು. ನಮಗೂ ಪ್ರೇಮಾನುರಾಗಗಳು ಇರುತ್ತವೆ ಎಂದು ಎಷ್ಟೇ ಬಾರಿ ನಿರೂಪಿಸಿದರೂ.ಪೊಲೀಸರೆಂದರೆ ಕಠಿನ ಹೃದಯದವರು ಎಂಬ ಭಾವನೆ ಜನರ ಮನಸ್ಸಿನಲ್ಲಿ ಬೇರೂರಿದೆ. ಕೆಲವೊಮ್ಮೆ ನಡೆಯುವ ಘಟನೆಗಳು ಪೊಲೀಸರಲ್ಲಿರುವ ಪ್ರೀತಿಯನ್ನು ತೋರಿಸುತ್ತವೆ. ದೂರು ನೀಡಲು ಹೋದ ಒಬ್ಬ ಯುವಕನಿಗೆ ಪೊಲೀಸರು ಅಚ್ಚರಿ ಮೂಡಿಸಿದರು. ಇದು ನಡೆದದ್ದು ಎಲ್ಲಿ? ಅವರು ನೀಡಿದ ಅಚ್ಚರಿಯಾದರೂ ಏನೆಂದು ಗೊತ್ತಾ.?



ಮುಂಬೈ ನಗರದ ಅನೀಶ್ ದೂರು ನೀಡಲು ಪೊಲೀಸ್ ಸ್ಟೇಷನ್ ಗೆ ಹೋದ. ಸಿಬ್ಬಂದಿಯ ಅಪ್ಪಣೆಯಂತೆ ಒಂದು ಕಾಗದದಲ್ಲಿ ದೂರನ್ನು ಬರೆದುಕೊಟ್ಟ. ಅದರಲ್ಲಿ ತನ್ನ ಎಲ್ಲಾ ವಿವರಗಳನ್ನು ಬರೆದಿದ್ದ. ಪೊಲೀಸ್ ಠಾಣೆಯ ಎಸ್ಐ ಆ ದೂರಿನಲ್ಲಿ ಬರೆದಿದ್ದ ಅಂಶಗಳನ್ನು ಓದಿ, ಸ್ವಲ್ಪ ಸಮಯ ಅಲ್ಲಿಯೇ ಕುಳಿತುಕೊಳ್ಳಲು ಹೇಳಿ ಹೊರಗೆ ಹೋದ. ತನ್ನನ್ನು ಕುಳಿತುಕೊಳ್ಳಲು ಹೇಳಿ ಹೊರಗೆ ಯಾಕೆ ಹೋದರೆಂದು ಗೊತ್ತಾಗದೆ, ಭಯಪಟ್ಟ. ಸ್ವಲ್ಪ ಸಮಯದ ನಂತರ ಹೊರಗೆ ಹೋಗಿದ್ದ ಎಸ್ಐ ಮರಳಿ ಬಂದರು. ಆತನೊಂದಿಗೆ ಪೊಲೀಸ್ ಸಿಬ್ಬಂದಿಯೂ ಇದ್ದಾರೆ. ಏನು ನಡೆಯುತ್ತಿದೆಯೆಂದು ಅರ್ಥಮಾಡಿಕೊಳ್ಳಲಾಗುತ್ತಿಲ್ಲ.

ತಂದ  ಕೇಕ್ ಅನ್ನು ಟೇಬಲ್ ಮೇಲಿಟ್ಟು, ಕ್ಯಾಂಡಲ್ ಗಳನ್ನು ಉರಿಸಿ, ಅಲ್ಲಿಯೇ ಅನೀಶನ ಹುಟ್ಟು ಹಬ್ಬವನ್ನು ಆಚರಿಸಿದರು.ಅನೀಶ್ ಕೊಟ್ಟ ದೂರಿನಲ್ಲಿದ್ದ ವಿವರಗಳನ್ನು ಎಸ್ಐ ಓದುತ್ತಿರುವಾಗ, ಅದರಲ್ಲಿ ಅನೀಶ್ ಹುಟ್ಟು ಹಬ್ಬದ ದಿನಾಂಕವನ್ನು ನೋಡಿ ಈರೀತಿ ಪ್ರತಿಕ್ರಿಯಿಸಿದರು. ಹಠಾತ್ತಾಗಿ ನಡೆದ ಈ ಘಟನೆಯಿಂದ ಆದ ಅನೀಶ್ ಆನಂದಕ್ಕೆ ಪಾರವೇ ಇರಲಿಲ್ಲ. ತನ್ನ ಸಮಸ್ಯೆಯನ್ನು ತಿಳಿಸಲು ಹೋದ ಸ್ಥಳದಲ್ಲಿ, ಪೊಲೀಸರಿಂದ ದೊರೆತ ಸ್ಪಂದನೆ ಆತನ ಮನೋ ದೈರ್ಯವನ್ನು ದ್ವಿಗುಣಗೊಳಿಸುತ್ತದೆ. ಇಲ್ಲಿ ಅನೀಶ್ ಗೆ ದೊರೆತದ್ದೂ ಅದೇ.ಈ ಪೋಟೊಗಳನ್ನು ಮುಂಬೈ ಪೊಲೀಸರು ತಮ್ಮ ಅಧಿಕೃತ ಟ್ವಿಟ್ಟರ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಟ್ವೀಟ್ ಹಾಕಿದ ಸ್ವಲ್ಪ ಸಮಯದಲ್ಲೇ 1000 ಕ್ಕೂ ಅಧಿಕ ಲೈಕ್ ಗಳು, 200 ಕ್ಕೂ ಅಧಿಕ ರೀಟ್ವೀಟ್ ಗಳು ಬಂದಿವೆ. ಪೊಲೀಸರು ಈ ರೀತಿ ಸ್ನೇಹಮಯವಾಗಿ ವರ್ತಿಸಿದರೆ ಪ್ರಜೆಗಳೂ ಧೈರ್ಯವಾಗಿರುತ್ತಾರೆ ಎಂದು ನೆಟ್ಟಿಜನ್ ಗಳು ಕಾಮೆಂಟ್ ಮಾಡುತ್ತಿದ್ದಾರೆ.

No comments