Header Ads

test

ನಿಂಬೆಹಣ್ಣನ್ನು ಹೋಳುಮಾಡಿ .ತಲೆ ದಿಂಬು ಕೆಳಗೆ ಇಟ್ಟುಕೊಂಡರೆ.ಅದ್ಭುತಗಳು ನಡೆಯುತ್ತವೆ .!!!

ನಮ್ಮ ಸುತ್ತಲೂ ಇರುವ ಪ್ರಕೃತಿ ಎಲ್ಲವೂ ಔಷಧಗಳಿಂದ ತುಂಬಿಕೊಂಡಿದ್ದರೂ ನಾವು ಅವುಗಳನ್ನು ಗಮನಿಸದೆ ನಿರ್ಲಕ್ಷ್ಯ ಮಾಡತ್ತೇವೆ. ನಮಗೆ ಬರುವ ದೊಡ್ಡ ದೊಡ್ಡ ಖಾಯಿಲೆಗಳನ್ನು ಚಿಕ್ಕ ಚಿಕ್ಕ ಉಪಾಯಗಳಿಂದ ಗುಣಪಡಿಸಿಕೊಳ್ಳುವ ಅವಕಾಶವಿದೆ. ಮಹರ್ಷಿಗಳು ನಮಗೆ ನೀಡಿರುವ ಆಯುರ್ವೇದ ವಿಧಾನವನ್ನು ನಿರ್ಲಕ್ಷಿಸಿ, ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ರಾಸಾಯನಿಕ ಪದಾರ್ಥಗಳಿಂದ ತಯಾರಿಸಲಾದ ಔಷಧಿಗಳನ್ನು ಸೇವಿಸುತ್ತಿದ್ದೇವೆ. ಇವುಗಳಿಂದ ನಮ್ಮ ಆರೋಗ್ಯ ಇನ್ನಷ್ಟು ಹದಗೆಡುವ ಅವಕಾಶಗಳೇ ಹೆಚ್ಚಾಗಿದ್ದು, ಅಡ್ಡ ಪರಿಣಾಮಗಳು ಸಹ ಉಂಟಾಗುತ್ತವೆ.

ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದೆ. ಆಹಾರ ಪದ್ಧತಿಗಳನ್ನು ಬದಲಾಯಿಸಿಕೊಂಡಲ್ಲಿ ಸಾಧಾರಣವಾಗಿ ಕಾಣಿಸಿಕೊಳ್ಳುವ ಹಲವು ಖಾಯಿಲೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಆದರೆ ಈಗಿನ ಧಾವಂತದ ಜೀವನದಲ್ಲಿ ಸಮಯಕ್ಕೆ ಸರಿಯಾಗಿ ಊಟ ಮಾಡದೆ ಇರುವುದು, ಫಾಸ್ಟ್ ಫುಡ್ ತಿನ್ನುವುದು ಇಂತಹ ಹವ್ಯಾಸಗಳಿಂದ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ಆರೋಗ್ಯವು ತುಂಬಾ ಹಾಳಾದ ನಂತರವೇ ನಾವು ಮಾಡಿದ ತಪ್ಪನ್ನು ಅರಿತುಕೊಳ್ಳುತ್ತೇವೆ. ವೈದ್ಯರಿಗೆ ಸಾವಿರಾರು ರೂಪಾಯಿಗಳನ್ನು ನೀಡಿ ಜೀವನವಿಡೀ ಆಸ್ಪತ್ರೆಗೆ ಓಡಾಡುತ್ತಲೇ ಇರುತ್ತೆವೆ. ಒಂದು ಸಲ ಆಸ್ಪತ್ರೆಗೆ ಹೋದರೆ ಸಾಕು. ಒಂದರ ನಂತರ ಒಂದಂತೆ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ನಾವು ವೈದ್ಯರನ್ನು ಭೇಟಿಯಾಗುತ್ತಲೇ ಇರಬೇಕಾಗುತ್ತದೆ. ಹೀಗೆ ಕಷ್ಟಗಳನ್ನು ಅನುಭವಿಸುತ್ತೇವೆ ಹೊರತು ಪ್ರಕೃತಿಯಲ್ಲಿ ನಮ್ಮ ಸುತ್ತಲೂ ಸಿಗುವ ಪ್ರಾಕೃತಿಕ ಔಷಧಗಳ ಬಗ್ಗೆ ಯೋಚಿಸುವುದಿಲ್ಲ.


ಈ ಪ್ರಪಂಚದಲ್ಲಿ ಪ್ರಕೃತಿಗೆ ಮೀರಿದ್ದು ಬೇರೇನೂ ಇಲ್ಲ. ಪ್ರತಿಯೊಂದು ಗಿಡ, ಬೇರು, ಎಲೆಗಳಲ್ಲೂ ಒಂದಲ್ಲಾ ಒಂದು ಔಷಧೀಯ ಗುಣ ಇದ್ದೇ ಇರುತ್ತದೆ. ಆದರೆ ಅದರ ಬಗ್ಗೆ ನಮಗೆ ಸರಿಯಾದ ಮಾಹಿತಿ ತಿಳಿಯದೆ ಅವುಗಳನ್ನು ನಿರ್ಲಕ್ಷ್ಯ ಮಾಡುತ್ತೇವೆ. ಪ್ರತಿ ದಿನ ನಮ್ಮ ಮನೆಯಲ್ಲೇ ಉಪಯೋಗಿಸುವ, ನಮ್ಮ ಆರೋಗ್ಯವನ್ನು ಕಾಪಾಡುವ ಪದಾರ್ಥಗಳು ಇರುತ್ತವೆ ಎಂಬುವುದು ನಿಮಗೆ ತಿಳಿದಿದೆಯೇ?ಉದಾಹರಣೆಗೆ, ನಿಂಬೆಹಣ್ಣಿನಿಂದ ಆಗುವ ಉಪಯೋಗಗಳನ್ನು ತಿಳಿದುಕೊಳ್ಳೋಣ.

ಪ್ರತಿದಿನ ಮಲಗುವ ಮುಂಚೆ ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ಅದನ್ನು 4 ಭಾಗಗಳಾಗಿ ಕತ್ತರಿಸಿ ಅದರ ಮೇಲೆ ಉಪ್ಪನ್ನು ಹರಡಿ ಒಂದು ತಟ್ಟೆಯಲ್ಲಿಟ್ಟು, ಹಾಸಿಗೆ ಕೆಳಗೆ ಇಡುವುದರಿಂದ ನಿಂಬೆಹಣ್ಣಿನಲ್ಲಿರುವ ಸಿಟ್ರಸ್ ಆಸಿಡ್ ಕೊಠಡಿಯಲ್ಲಿ ಹರಡಿಕೊಂಡು ತಕ್ಷಣವೇ ನಿದ್ದೆ ಬರುವಂತೆ ಮಾಡುತ್ತದೆ. ಕ್ರಿಮಿಕೀಟಗಳು ಹತ್ತಿರ ಸುಳಿಯುವುದಿಲ್ಲ. ನಿಂಬೆಹಣ್ಣು ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿರುವುದರಿಂದ, ಶೀತದಿಂದ ಮೂಗು ಮುಚ್ಚಿಕೊಂಡು ಉಸಿರಾಡಲು ಆಗದಿದ್ದಾಗ ನಿಂಬೆಹಣ್ಣಿನ್ನು ಮೂಸುವುದರಿಂದ ನಮ್ಮಲ್ಲಿರುವ ಡಿಪ್ರೆಷನ್ ಕಡಿಮೆಗಾಗಿ ಸುಲಭವಾಗಿ ಉಸಿರಾಟ ಸರಾಗವಾಗುತ್ತದೆ. . ಅಷ್ಟೇ ಅಲ್ಲದೆ ಇದರ ವಾಸನೆಯು ಮೆದುಳಿನಲ್ಲಿರುವ ನರ ಮಂಡಲ ವ್ಯವಸ್ಥೆಯನ್ನು ಚುರುಕುಗೊಳಿಸುತ್ತದೆ. ನಿದ್ರಾಹೀನತೆ ಸಮಸ್ಯೆಗಳನ್ನೂ ನಿವಾರಿಸುತ್ತದೆ. ನಿಂಬೆಯಲ್ಲಿ ಸಿಟ್ರಸ್ ಪೆಕ್ಟಿನ್  ಎಂಬ ವಿಟಮಿನ್ ಇರುವುದರಿಂದ ಎದೆ ಹಾಗೂ ಪ್ರೋಸ್ಟ್ರೇಟ್ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ. ರಕ್ತದೊತ್ತಡ ಇರುವವರು ನಿಂಬೆರಸದ ಆವಿಯನ್ನು ಸೇವಿಸುವುದರಿಂದ ಹತೋಟಿಗೆ ಬರುತ್ತದೆ.

ನಿಂಬೆಹಣ್ಣಿಗೆ ಲವಂಗವನ್ನು ಸಿಕ್ಕಿಸಿ ಕಿಟಕಿಗಳ ಹತ್ತಿರ ಇಡುವುದರಿಂದ ಹೊರಗಿನಿಂದ ಕೀಟಗಳು, ಬ್ಯಾಕ್ಟೀರಿಯಾಗಳು ಒಳಗೆ ಬರುವುದಿಲ್ಲ.ಪ್ರತಿದಿನ ಬೆಳಗ್ಗೆ ಉಗುರುಬೆಚ್ಚಗಿನ ನೀರಿನಲ್ಲಿ ನಿಂಬೆರಸವನ್ನು ಬೆರೆಸಿ ಕುಡಿಯುವುದರಿಂದ ಅದರಲ್ಲಿರುವ ಫೈಬರ್ ಗುಣಗಳು ಶರೀರದ ಅಧಿಕ ತೂಕವನ್ನು ಕಡಿಮೆಗೊಳಿಸುತ್ತವೆ.ಒಂದು ಚಮಚ ನಿಂಬೆರಸವನ್ನು ಅರ್ಧ ಚಮಚ ಅಡುಗೆ ಸೋಡಾ, ಸ್ವಲ್ಪ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿದ ಮಿಶ್ರಣವನ್ನು ಹಲ್ಲುಗಳ ಮೇಲೆ ಉಜ್ಜುವುದರಿಂದ ಹಲ್ಲುಗಳು ಬಿಳಿ ಬಣ್ಣ ಪಡೆಯುತ್ತವೆ. ಆದರೆ ಈ ರೀತಿ ಹೆಚ್ಚಾಗಿ ಮಾಡುವುದರಿಂದ ಹಲ್ಲಿನ ಮೇಲಿರುವ ಎನಾಮಿಲ್ ಗೆ ಹಾನಿ ಉಂಟಾಗುವ ಅವಕಾಶವಿದೆ.ನಿಂಬೆಯಿಂದಾಗುವ ಲಾಭಗಳನ್ನು ತಿಳಿದುಕೊಂಡು ಸರಿಯಾದ ರೀತಿಯಲ್ಲಿ ಅದರ ಉಪಯೋಗವನ್ನು ಪಡೆದುಕೊಳ್ಳೋಣ.

No comments