Header Ads

test

ಅತ್ತ ಕಡೆಯಿಂದ ರೈಲು ವೇಗವಾಗಿ ಬರುತ್ತಿದೆ.... ಈ ಹುಡುಗಿ ಮಾಡಿದ ಕೆಲಸಕ್ಕೆ ಇಡೀ ದೇಶಕ್ಕೆ ದೇಶವೇ ಶಾಕ್ಆಯಿತು..!

ಚಿಂದಿ ಕಾಗದ ಆಯುವ ಒಬ್ಬ ಹುಡುಗಿ ಆಕೆ ತಂದೆಯೊಂದಿಗೆ ಪ್ರತಿ ದಿನ ಚಿಂದಿ ಆಯುತ್ತಾ ಇರುತ್ತಾರೆ. ಅವರಿಗೆ ಅಲ್ಲಿ ಇಲ್ಲಿ ಎಂಬ ಸಂಬಂಧ ಇಲ್ಲದಂತೆ ರೈಲ್ವೆ ಸ್ಟೇಷನ್, ಬಸ್ ಸ್ಟ್ಯಾಂಡ್ ಅವರಿಗೆ ಎಲ್ಲಿ ಇಷ್ಟವಾದರೆ ಅಲ್ಲಿ ಚಿಂದಿ ಕಾಗದ ಆಯುತ್ತಾ ಇರುತ್ತಾರೆ. ನಿತ್ಯದಂತೆ ಅವರು ಚಿಂದಿ ಕಾಗದ, ಪ್ಪಾಸ್ಟಿಕ್ ಬಾಟಲಿ ಆಯುತ್ತಾ ಇರಬೇಕಾದರೆ ಅವರಿಗೆ ರೈಲು ಹಳಿಗಳ ಮೇಲೆ ಹೆಚ್ಚು ಕಾಣಿಸಿದ ಕಾರಣ ಅಲ್ಲಿಗೆ ಓಡುತ್ತಾ ಹೋದರು. ಅಲ್ಲಿ ಕಸ ಆಯುತ್ತಿದ್ದವರಿಗೆ ರೈಲು ಹಳಿ ಮುರಿದು ಪಕ್ಕಕ್ಕೆ ಸರಿದಿರುವುದು ಕಾಣಿಸಿತು. ಅದನ್ನು ಯಾರಿಗಾದರೂ ತಿಳಿಸೋಣ ಎಂದು ಭಾವಿಸಿದ. ಅಷ್ಟರಲ್ಲಿ ಆತ ಊಹಿಸದ ಸಂಗತಿ ಇನ್ನೊಂದು ಕಾಣಿಸಿತು.


ಅತ್ತ ಕಡೆಯಿಂದ ರೈಲು ವೇಗವಾಗಿ ಬರುತ್ತಿದೆ. ಅದರಿಂದ ಆತನಿಗೆ ಏನು ಮಾಡಬೇಕೋ ಅರ್ಥವಾಗಲಿಲ್ಲ. ಕೂಡಲೆ ತನ್ನ ಮಗಳು ಮೈಮೇಲೆ ಇದ್ದ ಬಟ್ಟೆ ತನ್ನ ಮೈಮೇಲಿನ ಬಟ್ಟೆಯನ್ನು ತೆಗೆದು ಕೈಯಲ್ಲಿ ಸುತ್ತಲು ಆರಂಭಿಸಿದ. ಅದನ್ನು ನೋಡಿ ಡ್ರೈವರ್ ನಿಲ್ಲಿಸುತ್ತಾನೇನೋ ಎಂಬ ಆಸೆ. ಆತ ಭಾವಿಸಿದಂತೆ ರೈಲು ಓಡಿಸುತ್ತಿರುವ ವ್ಯಕ್ತಿ ಅವರನ್ನು ನೋಡಿದ. ಆದರೆ ರೈಲನ್ನು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿ ನಿಲ್ಲಿಸಲು ಸಾಧ್ಯವಿಲ್ಲ. ಹೇಗೋ ಬ್ರೇಕ್ ಹಾಕಿದ. ಅದು ನಿಧಾನಕ್ಕೆ ಬಂದು ನಿಂತಿತು. ಅದು ಮುರಿದಿದ್ದ ಹಳಿಗಳಿಂದ ಸ್ವಲ್ಪ ದೂರದಲ್ಲೇ ನಿಂತಿತು.

ನಿಂತ ಕೂಡಲೆ ಏನಾಯಿತು ಎಂದು ಬಹಳಷ್ಟು ಮಂದಿ ರೈಲು ಇಳಿದರು. ಅಲ್ಲಿದ್ದ ರೈಲು ಹಳಿಗಳನ್ನು ನೋಡಿ ಆತನನ್ನು ಮೆಚ್ಚಿಕೊಂಡರು. ಆತನ ಜತೆಗೆ ಸೆಲ್ಫೀಗಳನ್ನು ತೆಗೆದುಕೊಂಡರು. ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸಿದರು. ಈ ಘಟನೆಯಲ್ಲಿ ಆತ ಕಾಪಾಡಿದವರ ಸಂಖ್ಯೆ ಎಷ್ಟು ಗೊತ್ತಾ? ಅಕ್ಷರಶಃ 2000 ಮಂದಿ. ಇದೆನ್ನೆಲ್ಲಾ ತಿಳಿದ ತ್ರಿಪುರಾ ಸಚಿವರು ಅವರಿಬ್ಬರನ್ನೂ ಕರೆಸು ಸನ್ಮಾನಿಸಿ ಅವರ ಬಗ್ಗೆ ನಾಲ್ಕು ಮಂದಿಗೆ ತಿಳಿಯುವಂತೆ ಮಾಡಬೇಕೆಂದು, ಅವರ ಜೀವನ ಚೆನ್ನಾಗಿರುವಂತೆ ಅವರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಲು ಆದೇಶಿಸಿದರು.

ನೋಡಿದಿರಲ್ಲವೇ..ರೈಲೊಂದು ಅವರ ಜೀವನವನ್ನೇ ಬದಲಾಯಿಸಿತು. ಅದೇ ರೀತಿ ಯಾರ ಜೀವನ ಯಾವಾಗ, ಹೇಗೆ ಬದಲಾಗುತ್ತದೋ ಯಾರ ಕೈಲೂ ಊಹಿಸಲು ಸಾಧ್ಯವಿಲ್ಲ. ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ ಎಂಬ ವಿಷಯವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ ಅಷ್ಟೇ..!

No comments