Header Ads

test

ಮದುಮಗ, ಮದುಮಗಳು ಬೇರೆಬೇರೆಯಾಗಿ ಜಂಪ್...! ಪೂಜಾರಿ ಮಾತ್ರ ಒಂಟಿಯಾಗಿ ಉಳಿದ..!

ವಧೂವರರ ಜತೆಗೆ ನೆಂಟರು, ಶ್ರೇಯೋಭಿಲಾಷಿಗಳು ನಡುವೆ ಸಂಭ್ರಮದಿಂದ ನಡೆಯಬೇಕಾದ ಮದುವೆ ಮಂಟಪದಲ್ಲಿ ಎಲ್ಲರೂ ಒಂದೊಂದು ದಿಕ್ಕಿಗೆ ಹೊರಟು ಹೋದ ಕಾರಣ ಪೂಜಾರಿ ಒಬ್ಬನೇ ಉಳಿದ ಘಟನೆ ನಮ್ಮ ರಾಜ್ಯದಲ್ಲೇ ನಡೆದಿದೆ. ಕೋಲಾರ ಜಿಲ್ಲೆಯ ಚನ್ನಕಲ್ಲು ಗ್ರಾಮದ ಗುರೇಶ್, ಬಂಗಾರಪೇಟೆ ತಾಲೂಲಿನ ನೇರ್ನಹಳ್ಳೀ ಗ್ರಾಮದ ಸೌಮ್ಯಾರಿಗೆ ಶನಿವಾರ ಮದುವೆ ನಿಶ್ಚಿತಾರ್ಥ. ಭಾನುವಾರಮದುವೆ ನಡೆಯಬೇಕಾಗಿತ್ತು. ಮದುವೆಗೆ ಮಾಲೂರು ಎಂಬ ಗ್ರಾಮದಲ್ಲಿರುವ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಎಲ್ಲವೂ ವ್ಯವಸ್ಥೆ ಮಾಡಲಾಗಿತ್ತು. ಇಬ್ಬರೂ ಕುಟುಂಬಿಕರ ಬಂಧುಗಳು ಮದುವೆ ಮಂಟಪಕ್ಕೆ ಬಂದರು. ಪುರೋಹಿತ ಮದುವೆ ನಡೆಸಿಕೊಡಲು ಸಿದ್ಧವಾಗಿದ್ದಾರೆ.



ಶನಿವಾರ ರಾತ್ರಿ ನಿಶ್ಚಿತಾರ್ಥ ಸಮಯಕ್ಕೆ ವಧು ಸೌಮ್ಯ ಕಲ್ಯಾಣ ಮಂಟಪಕ್ಕೆ ಬರಲಿಲ್ಲ. ತಾನು ಪ್ರೀತಿಸಿವ ವ್ಯಕ್ತಿಯ ಜತೆಗೆ ಮನೆಯಲ್ಲಿ ಹೇಳದೆ ಪರಾರಿಯಾದಳು. ಇದರಿಂದ ಮದುವೆ ಹೆಣ್ಣಿನ ಕಡೆಯವರ ಜತೆಗೆ ಹುಡುಗನ ಕಡೆಯವರು ವಾಗ್ವಾದಕ್ಕೆ ಇಳಿದರು. ಗಲಾಟೆ ನಡೆಯಿತು. ಇದೇ ಮುಹೂರ್ತಾಲ್ಲಿ ಸೌಮ್ಯಾ ಚಿಕ್ಕಪ್ಪನ ಮಗಳು ವೆಂಕರತ್ನಮ್ಮನೊಂದಿಗೆ ಗುರೇಶ್ ಮದುವೆ ಮಾಡಬೇಕೆಂದು ನಿರ್ಧರಿಸಿದರು.

ಎರಡೂ ಕುಟುಂಬಗಳು ಮದುವೆಗೆ ಅಂಗೀಕರಿಸಿದವು. ನಿಶ್ಚಿತಾರ್ಥ ಸಹ ಆಯಿತು. ಎಲ್ಲವೂ ಸುಖಾಂತ್ಯ ಎಂದು ಭಾವಿಸಿದ ಸಮಯದಲ್ಲಿ ಭಾನುವಾರ ಮದುವೆ ಸಮಯಕ್ಕೆ ವರ ಮಹಶಯ ಗುರೇಷ್ ನಾಪತ್ತೆ. ಕಟಿಂಗ್ ಶಾಪ್‍ಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವ ... ಮತೆ ಮದುವೆ ಮಂಟಪಕ್ಕೆ ಬರಲಿಲ್ಲ.

ಫೋನ್ ಸಹ ಸ್ವಿಚ್ ಆಫ್. ಇದರಿಂದ ಕಲ್ಯಾಣ ಮಂಟಪದಲ್ಲಿ ಮತ್ತೆ ಗದ್ದಲ, ಗಲಾಟೆ. ವರ ಮಹಾಶಯ ಬಾರದಿದ್ದ ಕಾರಣ ಮದುವೆಗೆ ಬಂದವರು ಹೊರಟು ಹೋದರು. ವರನನ್ನು ಹುಡುಕಿಕೊಂಡು ಹುಡುಗನ ಕಡೆಯವರು ಹೊರಟರು. ಎರಡು ಸಲ ಮದುವೆ ನಿಂತು ಹೋಯಿತು ಎಂಬ ಬೇಸರದಲ್ಲಿ ಹುಡುಗಿ ಕಡೆಯವರು ಮನೆಗೆ ಹೊರಟು ಹೋದರು. ಅವರವರ ದಾರಿಯಲ್ಲಿ ಅವರು ಹೊರಟು ಹೋದ ಬಳಿಕ.ಮಂಟಪದಲ್ಲಿ ಒಂಟಿಯಾಗಿ ಉಳಿದು ಹೋದ ಪೂಜಾರಿ. ಮಾಡಿದ ಅಡುಗೆಯಲ್ಲಾ ವೇಸ್ಟ್ ಆಯಿತು. ತಿರುವುಗಳ ಮೂಲಕ ತಿರುವು ನೀಡಿ 24 ಗಂಟೆಗಳಲ್ಲಿ ನಡೆದ ನಾಟಕೀಯ ಬೆಳವಣಿಗೆಗಳು ಇವು. ಒಟ್ಟಾರೆ ಚರ್ಚಾಸ್ಪದ ವಿಷಯವಾಯಿತು.

No comments