ಇ-ಮೇಲ್ ಕ್ರಿಯೇಟ್ ಮಾಡಿದ್ದು ನಮ್ಮ ಭಾರತೀಯ ಅಂತ ನಿಮಗೆ ಗೊತ್ತಾ..?
ಇ-ಮೇಲ್...ಈ ಹೆಸರು ಕೇಳದವರು ಬಹುಶಃ ಯಾರೂ ಇರಲಿಕ್ಕಿಲ್ಲ. ಕಂಪ್ಯೂಟರ್ ಬಳಸುತ್ತಿರುವ ಎಲ್ಲರಿಗೂ, ಅದೇ ರೀತಿ ಸ್ಮಾರ್ಟ್ಫೋನ್ ಬಳಸುತ್ತಿರುವ ಪ್ರತಿಯೊಬ್ಬರಿಗು ಸಹ ಇ-ಮೇಲ್ ಬಗ್ಗೆ ಗೊತ್ತು. ಆದರೆ ಅದನ್ನು ಮೊದಲು ಸೃಷ್ಟಿಸಿದ್ದು ಯಾರು ಗೊತ್ತೆ? ಯಾರೋ ಇಂಗ್ಲಿಷ್ನ ವಿಜ್ಞಾನಿ ಕಂಡುಹಿಡಿದಿರುತ್ತಾನೆ ಬಿಡು ಅಂದುಕೊಳ್ಳುತ್ತಿದ್ದೀರಾ? ಆದರೆ ಅವರಂತೂ ಅಲ್ಲ. ಇ-ಮೇಲ್ ಸೃಷ್ಟಿಸಿದ್ದು ಸಾಕ್ಷಾತ್ ನಮ್ಮ ಭಾರತೀಯ ಯುವಕ. ಅವರದು ತಮಿಳುನಾಡು ಮೂಲ.
ತಮಿಳುನಾಡಿನಲ್ಲಿ ಜನಿಸಿದ ವಿ.ಎ ಶಿವ ಅಯ್ಯದುರೈ ತನ್ನ 7ನೇ ವಯಸ್ಸಿನಲ್ಲಿ ಎಂದರೆ 1978ರಲ್ಲಿ ತನ್ನ ಕುಟುಂಬದೊಂದಿಗೆ ಅಮೆರಿಕಾ ಹೊರಡುತ್ತಾರೆ. ಅಲ್ಲೇ ತಂದೆ ಉಳಿದುಕೊಂಡ ಕಾರಣ ಶಿವ ವಿದ್ಯಾಭ್ಯಾಸ ಅಮೆರಿಕಾದಲ್ಲಿ ನಡೆಯಿತು. ತನ್ನ 14ನೇ ವಯಸ್ಸಿನಲ್ಲಿ ಇರಬೇಕಾದರೆ ನ್ಯೂಜೆರ್ಸಿಯ ಲಿವಿಂಗ್ಸ್ಟನ್ ಹೈಸ್ಕೂಲಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಹೀಗಿರಬೇಕಾದರೆ ಒಂದು ದಿನ ಸ್ಕೂಲ್ನ ಕಚೇರಿಯಲ್ಲಿ ಕೆಲವು ಉದ್ಯೋಗಿಗಳು ಡೆಸ್ಕ್ಗಳ ಮೇಲೆ ಕೆಲಸ ಮಾಡುದನ್ನು ನೋಡುತ್ತಾನೆ. ಒಬ್ಬೊಬ್ಬ ಉದ್ಯೋಗಿಗೆ ಬೇರೆಬೇರೆ ಟೇಬಲ್, ಅದರ ಮೇಲೆ ಒಂದು ಟೈಪ್ ರೈಟರ್, ಇನ್ಕಮಿಂಗ್ ಪತ್ರಗಳಿಗಾಗಿ ಒಂದು ಬಾಕ್ಸ್, ಔಟ್ಗೋಯಿಂಗ್ ಪತ್ರಗಳಿಗೆ ಒಂದು ಬಾಕ್ಸ್, ಕೆಲವು ವಿಧದ ಫೈಲ್ಸ್, ಕಾರ್ಬನ್ ಕಾಪಿ ಪೇಪರ್, ಅಡ್ರಸ್ ಪುಸ್ತಕಗಳು, ಪೇಪರ್ ಕ್ಲಿಪ್ಸ್ ಇದ್ದವು. ಅವನ್ನೆಲ್ಲಾ ಶಿವ ದಿನಾ ಗಮನಿಸುತ್ತಾ ಇರ್ತಾನೆ. ಒಂದಿನ ಅವನ ತಲೆಯಲ್ಲಿ ಒಂದು ಆಲೋಚನೆ ಬರುತ್ತದೆ. ಅದೇ ಅವರನ್ನು ಇ-ಮೇಲ್ ಸೃಷ್ಟಿಸುವಂತೆ ಮಾಡಿದ್ದು.
ದಿನನಿತ್ಯ ಆಫೀಸಿನಲ್ಲಿ ಶಿವ ಗಮನಿಸಿದವುಗಳನ್ನೇ ಎಲೆಕ್ಟ್ರಾನಿಕ್ ರೂಪದಲ್ಲಿ ತರಬೇಕೆಂದುಕೊಂಡನು. ಅದಕ್ಕಾಗಿ ಒಂದು ವಿಶೇಷ ಸಾಫ್ಟ್ವೇರ್ ಸಹಾಯದಿಂದ ಕಂಪ್ಯೂಟರ್ ಪ್ರೋಗ್ರಾಮಿಂಗ್ ಲಾಂಗ್ವೇಜ್ನಲ್ಲಿ ಸುಮಾರು 50 ಸಾವಿರ ಲೈನ್ಗಳ ಕೋಡ್ ಬರೆದರು. ಇದರಿಂದ 1982, ಆಗಸ್ಟ್ 30ರಂದು ಮೊಟ್ಟ ಮೊದಲ ಇಂಟರ್ ಆಫೀಸ್ ಮೆಯಿಲ್ ಸಿಸ್ಟಂ ಕಂಡುಹಿಡಿದರು. ಅದನ್ನೇ ಇ-ಮೇಲ್ ಎಂದು ಪರಿಗಣಿಸಿದರು. ಆಮೇಲೆ ಸ್ವಲ್ಪ ದಿನಗಳ ಬಳಿಕ ಅಮೆರಿಕ ಕಾಪಿರೈಟ್ಸ್ ರಿಜಿಸ್ಟ್ರೇಷನ್ಸ್ನವರು ಇ-ಮೇಲ್ ಕ್ರಿಯೇಟ್ ಮಾಡಿದ್ದಕ್ಕೆ ಶಿವ ಅವರಿಗೆ ಪೇಟೆಂಟ್ ರೈಟ್ಸ್ನ ಪ್ರಮಾಣ ಪತ್ರ ಪ್ರದಾನ ಮಾಡಿದರು. ಹಾಗೆ ಇ-ಮೇಲನ್ನು ಮೊದಲ ಬಾರಿ ಕಂಡುಹಿಡಿದದ್ದು ನಮ್ಮ ಭಾರತೀಯ ಎಂಬ ಸಂಗತಿ ಬಳಿಕ ಪ್ರಚಾರ ಪಡೆಯಿತು. ಆದರೆ ಈಗಲೂ ಬಹಳಷ್ಟು ಮಂದಿಗೆ ಇ-ಮೇಲ್ ಕಂಡುಹಿಡಿದದ್ದು ಯಾರೆಂದು ಗೊತ್ತಿಲ್ಲ. ಈಗ ಗೊತ್ತಾಯ್ತಲ್ಲಾ. ಆತ ಭಾರತೀಯನಾದ ಕಾರಣ ನಾವೆಲ್ಲ ಹೆಮ್ಮೆ ಪಡಬೇಕು. ಅವರು ಮಾಡಿದ ಕೆಲಸವನ್ನು, ಮಾಡಿದ ಆವಿಷ್ಕಾರಕ್ಕೆ ನಾವು ಯಾವಾಗಲು ಚಿರರುಣಿಯಾಗಿರಬೇಕು, ಅವರ ಹೆಸರನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಏನಂತೀರಾ, ಅಷ್ಟೇ ಅಲ್ವಾ?

Post a Comment