ಬಸ್ನಲ್ಲಿ ಆತ ಆ ಯುವತಿ ಮೇಲೆ ಕೈಹಾಕಿದ.ಆ ಯುವತಿ ಪಿನ್ನೀಸ್ನಲ್ಲೇ ಉತ್ತರ ಕೊಟ್ಟಳು.
"ಆ ದಿನ ಕಾಲೇಜಿಗೆ ರಜೆ ಕೊಟ್ಟ ಕಾರಣ ಮನೆಗೆ ಹೊರಟಿದ್ದೆ. ನಮ್ಮ ಸ್ವಂತ ಊರು ಊಟಿ. ನಾನು ಓದುತ್ತಿದ್ದದ್ದು ಕೊಯಂಬತ್ತೂರಿನಲ್ಲಿ. ಕೊಯಂಬತ್ತೂರಿನಿಂದ ಊಟಿಗೆ ಹೋಗಲು 3 ಗಂಟೆ ಬೇಕಾಗುತ್ತದೆ. ಆದರೆ ಬಸ್ಸುಗಳು ಇರುತ್ತವಾದರೂ, ಅವು ತುಂಬಾ ರಶ್ ಆಗಿರುತ್ತವೆ. ಒಂದು ಸೀಟ್ ಸಿಕ್ಕಿದರೆ ಅದೇ ಪುಣ್ಯ. ಅಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಬಸ್ಸಿನ ಮೂಲೆಯಲ್ಲಿ ನನಗೊಂದು ಸೀಟು ಸಿಕ್ಕಿತು. ಅದರಲ್ಲಿ ಅದಾಗಲೇ ಹಿರಿಯರೊಬ್ಬರು ಕೂತಿದ್ದರು. ಅವರ ವಯಸ್ಸು 50 ವರ್ಷಗಳಿರಬಹುದು. ನೋಡಲು ನಮ್ಮ ತಂದೆಯ ವಯಸ್ಸಿನವಂತೆ ಅನ್ನಿಸಿದ.
ಸಾಮಾನ್ಯವಾಗಿ ಬಸ್ಸಿನಲ್ಲಿ ಮಹಿಳೆಯರು ಗಂಡಸರ ಪಕ್ಕ ಕೂರಲ್ಲ. ಆದರೆ ನಾನು ಹುಡುಗಿ, ಅದರಲ್ಲೂ ಆ ಹಿರಿಯರಿಗೆ ನನ್ನ ತಂದೆ ವಯಸ್ಸಾಗಿರುತ್ತದೆ. ಆದಕಾರಣ ಯಾವುದೇ ಅಭ್ಯಂತರ ಇಲ್ಲದೆ ಅವರ ಪಕ್ಕದಲ್ಲಿ ಕುಳಿತೆ. ಆದರೆ ಸಡನ್ ಆಗಿ ಸ್ವಲ್ಪ ಸಮಯದ ಬಳಿಕ ನನ್ನ ಭುಜದ ಮೇಲೆ ಆ ಹಿರಿಯ ಕೈ ಹಾಕಿದ. ಆರಂಭದಲ್ಲಿ ಏನೋ ಬೈ ಮಿಸ್ಟೇಕ್ ಹಾಕಿದ ಎಂದುಕೊಂಡೆ. ಆದರೆ ಅಲ್ಲ, ಬೇಕಂತಲೇ ಹಾಕುತ್ತಿದ್ದ. ಆ ಬಳಿಕ ನಾನೂ ಏನೂ ಮಾತನಾಡದ ಕಾರಣ ಕೈಯನ್ನು ಸೊಂಟದ ಮೇಲೆ ಹಾಕಲು ಆರಂಭಿಸಿದ. ಇನ್ನು ಸುಮ್ಮನಿದ್ದರೆ ಆಗಲ್ಲ, ಏನಾದರೂ ಮಾಡಬೇಕೆಂದುಕೊಂಡೆ.
ನಾನು ಎದ್ದು ಜೋರಾಗಿ ಕೂಗಿ ಎಲ್ಲರಿಗೂ ಹೇಳಿ ಗಲಾಟೆ ಮಾಡಬಹುದು. ಇದರಿಂದ ಎಲ್ಲರೂ ಆತನಿಗೆ ಬುದ್ಧಿ ಹೇಳುತ್ತಾರೆ. ಆದರೆ ಆ ರೀತಿ ಅಲ್ಲದೆ ನಾನೇ ಆತನಿಗೆ ಬುದ್ಧಿ ಕಲಿಸಬೇಕೆಂದುಕೊಂಡೆ. ಕೂಡಲೆ ಹ್ಯಾಂಡ್ ಬ್ಯಾಗ್ ಹುಡುಕಿದೆ. ಅದರಲ್ಲಿ ಒಂದು ಸೇಫ್ಟಿ ಪಿನ್ ಕಾಣಿಸಿತು. ಅದನ್ನು ತೆಗೆದುಕೊಂಡು ನನ್ನ ಸೊಂಟದ ಮೇಲೆ ಕೈಹಾಕುತ್ತಿರುವ ಆ ಹಿರಿಯನ ಕೈಗೆ ಚುಚ್ಚಿದೆ. ಆತ ಕೈ ಹಾಕಲು ಯತ್ನಿಸಿದಾಗಲೆಲ್ಲಾ ಪಿನ್ನಿಂದ ಆತನ ಕೈಗೆ ಚುಚ್ಚಿದೆ. ಆಮೇಲೆ ಆತ ಆ ಕೆಲಸ ಮಾಡುವ ಸಾಹಕ್ಕೆ ಕೈಹಾಕಲಿಲ್ಲ. ಇನ್ನು ಮುಂದೆ ಮಹಿಳೆಯರೆಲ್ಲರೂ ಕನಿಷ್ಠ ಈ ಸೇಫ್ಟಿ ಪಿನ್ ಕಡ್ಡಾಯವಾಗಿ ಇಟ್ಟುಕೊಂಡಿರಿ. ಅದು ಖಚಿತವಾಗಿ ಇಂತಹ ಯಾವುದೋ ಒಂದು ಸಮಯದಲ್ಲಿ ಕೆಲಸಕ್ಕೆ ಬರುತ್ತದೆ."
— ಶರಣ್ಯಾ ರವೀಂದ್ರನ್ ಎಂಬ ಯುವತಿಗೆ ಬಸ್ನಲ್ಲಿ ಎದುರಾದ ಒಂದು ಘಟನೆ ಇದು. ರಿಯಲ್ ಸ್ಟೋರಿ.!

Post a Comment