Header Ads

test

ನಗ್ನ ಸ್ನಾನದ ಬಗ್ಗೆ ಹಿಂದೂ ಶಾಸ್ತ್ರಗಳು ಏನು ಹೇಳುತ್ತವೆ ಅಂತ ತಿಳಿದುಕೊಳ್ಳಿ!

ಪೂರ್ವದಲ್ಲಿ ಸ್ನಾನ ಮಾಡಿಕೊಳ್ಳಲು ಕೆರೆಗಳಿಗೆ, ಸರೋವರಕ್ಕೋ, ಕೊಳಕ್ಕೋ ಹೋಗುತ್ತಿದ್ದರು. ಹೆಂಗಸರಾದರೂ, ಗಂಡಸರಾದರೂ, ಮಕ್ಕಳಾದರೂ, ವೃದ್ಧರಾದರೂ ಎಲ್ಲರೂ ಮೈಮೇಲೆ ಒಂದು ಚಿಕ್ಕ ವಸ್ತ್ರ ಧರಿಸಿಯೇ ಸ್ನಾನ ಮಾಡುತ್ತಿದ್ದರು. ಈಗೇನೂ ಅವರರ ಮನೆಗಳ ಬಾತ್‍ರೂಮ್‌ಗಳಲ್ಲಿ ಸ್ನಾನ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸ್ನಾನ ಮಾಡುವಾಗ ನಗ್ನವಾಗಿ ಸ್ನಾನ ಮಾಡಬಾರದು.

ಹೌದು ಸ್ನಾನವನ್ನು ನಗ್ನವಾಗಿ ಮಾಡಬಾರದು ಎಂದು ಶಾಸ್ತ್ರಗಳು ಹೇಳುತ್ತವೆ. "ನನಗ್ನೋ ಸ್ನಾತಿ ಕ್ವಚಿತ್" ಯಾವುದೇ ಸಮಯದಲ್ಲೂ ನಗ್ನವಾಗಿ ಸ್ನಾನ ಮಾಡಬಾರದು. ಯಾಕೆಂದರೆ.ನೀರಿಗೆ ಅಧಿದೇವತೆ ವರುಣ. ಯಾವ ದೇವರಿಗೆ ಅಪಚಾರ ಮಾಡಿದರೂ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಗೋಪಿಕಾ ವಸ್ತ್ರಾಪಹರಣ ವೃತ್ತಾಂತದಲ್ಲಿ ಈ ನಿಯಮವನ್ನು ತಿಳಿಸಿದ್ದಾನೆ ಶ್ರೀಕೃಷ್ಣ ಪರಮಾತ್ಮ. ಒಮ್ಮೆ ಗೋಪಿಕೆಯರು ಕೃಷ್ಣನೇ ತನ್ನ ಗಂಡ ಆಗಬೇಕೆಂದು ಒಂದು ವ್ರತ ಆಚರಿಸುತ್ತಾರೆ. ಆ ವ್ರತ ಮಾಡಲು ಸ್ನಾನ ಮಾಡಿಕೊಳ್ಳಲು, ಒಂದು ಕೊಳಕ್ಕೆ ಹೋಗುತ್ತಾರೆ.ಬಟ್ಟೆಗಳನ್ನು ದಡದಲ್ಲಿಟ್ಟು ಕೊಳಕ್ಕೆ ಇಳಿಯುತ್ತಾರೆ.


ನಗ್ನವಾಗಿ ಸ್ನಾನ ಮಾಡುವುದು ಎಂದರೆ ಆ ವರುಣ ದೇವನಿಗೆ ಅವಮಾನಿಸದಂತೆ. ಅಂದರೆ ಗೋಪಿಕೆಯರು ಆ ದೇವರಿಗೆ ಅವಮಾನಿಸಿದರು. ಅವರು ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಅವರ ಕೈಲಿ ಪ್ರಾಯಶ್ಚಿತ್ತ ಮಾಡಿಸಿಕೊಳ್ಳಲು ಕೃಷ್ಣನು ಬಂದನು. ದಡದ ಮೇಲಿದ್ದ ಸೀರೆಗಳನ್ನು ತೆಗೆದುಕೊಂಡು ಮರ ಹತ್ತಿದ. ಗೋಪಿಕೆಯರು ಗೋಳು ಆರಂಭಿಸಿದರು."ನೀವು ಅಪಚಾರ ಮಾಡಿದ್ದೀರಿ. ಪ್ರಾಯಶ್ಚಿತ್ತವಾಗಿ ಎಲ್ಲರೂ ನನಗೆ ನಮಸ್ಕರಿಸಿ" ಎನ್ನುತ್ತಾನೆ ಕೃಷ್ಣ! ಆಗ ಅವರು ನಾಚಿಕೆಯಿಂದ ಒಂದು ಕೈಲಿ ನಮಸ್ಕರಿಸಿ, ಎರಡನೇ ಕೈಲಿ ಮೈ ಮುಚ್ಚಿಕೊಳ್ಳುತ್ತಾರೆ. ಆದರೆ ಕೃಷ್ಣನು ಒಪ್ಪಿಕೊಳ್ಳಲ್ಲ. ಎರಡು ಕೈಗಳಲ್ಲಿ ನಮಸ್ಕರಿಸಲು ಹೇಳುತ್ತಾನೆ. ಅಂದರೆ ಇಲ್ಲಿ ನಗ್ನ ಸ್ನಾನ ಆಚರಿಸುವುದು ಅಪಚಾರ ಎಂದು, ಒಂಟಿ ಕೈಲಿ ನಮಸ್ಕರಿಸಬಾರದೆಂದು ಆ ಭಗವಂತನು ತಿಳಿಸಿದ್ದಾನೆ.

No comments