Header Ads

test

ಈ ಕಣ್ಣುಗಳಲ್ಲಿ ನಿಮಗೇನು ಕಾಣಿಸುತ್ತದೆ? ಯುವತಿಯರ ಕಣ್ಣುಗಳು ತಿಳಿಸುವ ರಹಸ್ಯಗಳು ಇವು

ಜನಪ್ರಿಯವಾಗಿವೆ. ಆದರೆ ಇದರ ಸಾಹಿತ್ಯದ ಒಳ ಹೊಕ್ಕು ನೋಡುವ ಪ್ರಯತ್ನವಂತೂ ಇದಲ್ಲ. ಕೇವಲ ಕಣ್ಣಿಗೆ ಸಂಬಂಧಿಸಿದ ಚಿತ್ರಗಳನ್ನು ಗಮನಿಸಿ ಅವರು ಎಂತಹವರು ಎಂದು ಕಂಡುಹಿಡಿಯಬಹುದು. ಸುಂದರವಾದ ಆ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಅವರ ವ್ಯಕ್ತಿತ್ವ ಹಾಗೆಯೇ ಕಂಡುಹಿಡಿಯಬಹುದು. ಅಷ್ಟೇ ಅಲ್ಲವೇ. ಆ ಕಣ್ಣುಗಳು ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತವೆ.


ಬೆಕ್ಕಿನ ಕಣ್ಣುಗಳು
ಬೆಕ್ಕಿನ ಕಣ್ಣಿನ ರೀತಿ ಇದ್ದರೆ, ಚಿತ್ರದಲ್ಲಿ ತೋರಿಸಿದ ರೀತಿಯಲ್ಲಿ ಕಣ್ಣುಗಳಿದ್ದರೆ ಅವರು ಇತರರನ್ನು ಹೆಚ್ಚಾಗಿ ಪ್ರಭಾವಗೊಳಿಸುತ್ತಾರೆ. ಮುಖ್ಯವಾಗಿ ಮಹಿಳೆಯರು ಇಂತಹ ಕಣ್ಣುಗಳನ್ನು ಹೊಂದಿದ್ದರೆ ಅವರು ಉತ್ತಮ ವಾಗ್ಮಿಗಳಾಗಿ, ವಾಚಾಳಿಗಳಾಗಿ ಸ್ವಾರ್ಥಪರರಾಗಿರುತ್ತಾರೆ.

ನೈದಿಲೆಯಂತಹ ಕಣ್ಣುಗಳು
ನೈದಿಲೆಯಂತಹ ಕಣ್ಣುಗಳು ಇರುವ ಪುರುಷರು ಸೃಜನಾತ್ಮಕ ಶಕ್ತಿಯನ್ನು ಹೊಂದಿರುತ್ತಾರೆ. ಇವರು ಪ್ರತಿಭಾವಂತರೂ ಕೂಡ. ಯಾರನ್ನೇ ಆಗಲಿ ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಅದೇ ರೀತಿ ಮಹಿಳೆಯರಾದರೆ ಏನಾದರೂ ಸಾಧಿಸುವ ತತ್ವ ಹೊಂದಿರುತ್ತಾರೆ. ಅವರು ಹೆಚ್ಚು ವಾಚಾಳಿಗಳೂ ಆಗಿರುತ್ತಾರೆ.

ಈ ರೀತಿಯ ಕಣ್ಣುಗಳಿಗೆ ಏನರ್ಥ
ಈ ರೀತಿಯ ಕಣ್ಣುಗಳನ್ನು ಉಳ್ಳವರು ಯಾವುದೇ ಪರಿಸ್ಥಿತಿಯಲ್ಲಾದರೂ ಕೂಲ್ ಆಗಿ ಕಾಮ್ ಆಗಿ ಇರುತ್ತಾರೆ. ಇವರು ಸಾಮಾನ್ಯವಾಗಿ ತಮ್ಮ ಭಾವನೆಗಳನ್ನು ಹೊರಗೆ ಹಾಕಲ್ಲ. ಒಳ್ಳೆಯ ಹೃದಯವಂತರಾಗಿರುತ್ತಾರೆ. ಇತರರಿಗೆ ಯಾವಾಗಲೂ ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ. ಇವರು ಹೊಸಬರ ಜತೆಗೂ ಹೊಂದಿಕೊಂಡು ಹೋಗುತ್ತಾರೆ.

No comments