ಸಂಸಾರವನ್ನು ಕಾಪಾಡಿದ ಬ್ಯಾಂಕ್ ಖಾತೆ.! ಸುರೇಖ ರಿಯಲ್ ಸ್ಟೋರಿ.!
ನನ್ನ ಬಗ್ಗೆ ನನ್ನ ತಾಯಿಗೆ ಬಹಳ ಚೆನ್ನಾಗಿ ಗೊತ್ತು. ನನ್ನ ಭವಿಷ್ಯತ್ತಿನ ಬಗ್ಗೆ ದೂರದೃಷ್ಟಿಯುಳ್ಳವಳಾಗಿ, ಚೆನ್ನಾಗಿ ಯೋಚಿಸಿ, ನನ್ನ ಮದುವೆಯ ದಿನ ನನ್ನ ಹೆಸರಿನಲ್ಲೊಂದು ಹೊಸ ಬ್ಯಾಂಕ್ ಅಕೌಂಟ್ ತೆರೆದು 10000 ರೂಪಾಯಿಗಳನ್ನು ಜಮೆ ಮಾಡಿದಳು. ಪಾಸ್ ಬುಕ್ ನನ್ನ ಕೈಯಲ್ಲಿಟ್ಟು ಹೀಗೆ ಹೇಳಿದರು."ನಿಮ್ಮ ವೈವಾಹಿಕ ಜೀವನದಲ್ಲಿ ಸಂತಸವನ್ನು ಉಂಟುಮಾಡಿದ ಕ್ಷಣಗಳನ್ನು ಇದರಲ್ಲಿ ಬರೆದು ಭದ್ರವಾಗಿರಿಸಿಕೋ. ಅದೇ ರೀತಿ ನಿನಗೆ ಸಂತೋಷವಾದ ಸಂದರ್ಭಗಳಲ್ಲಿ ಈ ಖಾತೆಗೆ ಹಣವನ್ನು ಜಮೆ ಮಾಡು. ಅದೇ ರೀತಿ ನಿನ್ನ ಗಂಡನನ್ನೂ ಮಾಡುವಂತೆ ಹೇಳು. ಹೀಗೆ ಮಾಡುವುದರಿಂದ, ಕೆಲವು ವರ್ಷಗಳು ಕಳೆದನಂತರ ನೀವು ಕಳೆದ ನಿಮ್ಮ ಜೀವನದ ರಸ ನಿಮಿಷಗಳನ್ನು ಜ್ಞಾಪಿಸಿಕೊಂಡಾಗ, ನೀವು ಎಷ್ಟು ಆನಂದವನ್ನು ಹಂಚಿಕೊಂಡಿರೆಂದು ತಿಳಿಯುತ್ತದೆ."
ನನಗೇ ಅಲ್ಲ, ನನ್ನ ಗಂಡನಿಗೂ ಈ ಐಡಿಯಾ ಬಹಳ ಚೆನ್ನಾಗಿ ಹಿಡಿಸಿತು.'ಆಗಲಿ ಅಮ್ಮ, ಹಾಗೇ ಮಾಡುತ್ತೇವೆ'ಎಂದೆ. ಅಂದಿನಿಂದ ನಮ್ಮ ಸಂತೋಷದ ಕ್ಷಣಗಳನ್ನು ಆ ಪುಸ್ತಕದಲ್ಲಿ ಬರೆಯಲಾರಂಬಿಸಿದೆವು. 2012 ಮಾರ್ಚ್ 15.ರೂ.5000. ಹನೀಮೂನ್ ಟೂರಿನಲ್ಲಿ. 2012 ಸೆಪ್ಟೆಂಬರ್ 23. ರೂ.3000.ಮದುವೆಯ ನಂತರ ನಡೆದ ನನ್ನ ಮೊದಲ ಹುಟ್ಟು ಹಬ್ಬದಲ್ಲಿ. 2013 ಏಪ್ರಿಲ್ 5. ರೂ.10000. ನನ್ನ ಪ್ರೆಗ್ನೆನ್ಸಿ ಸಮಯದಲ್ಲಿ. 2014 ಮೇ 8.ರೂ.20000.ನನ್ನ ಗಂಡನಿಗೆ ಭಡ್ತಿ ದೊರೆತಾಗ.ಇದೇ ರೀತಿ ಕೆಲವು ವರ್ಷಗಳು ಉರುಳಿದವು. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರ ಲಾರಂಬಿಸಿದವು. ವಾದಗಳು ಮೊದಲಾದವು. ಇಬ್ಬರ ನಡುವೆ ಮಾತುಗಳಿಗೆ ಬರಗಾಲ ಉಂಟಾಯಿತು. ಇಬ್ಬರ ನಡುವೆ ಪ್ರೀತಿಯ ಕೊರತೆಯಿಂದ ಜೀವನ ನಡೆಸಲು ಕಷ್ಟವೆಂದು ವಿಚ್ಛೇದನ ಪಡೆಯಲು ನಿರ್ಧರಿಸಿದೆವು.
ಇದೇ ವಿಷಯವನ್ನು ತಾಯಿಗೆ ಹೇಳಿ, ' ಜೀವನದಲ್ಲಿ ಜವಾಬ್ದಾರಿ ಇಲ್ಲದ ವ್ಯಕ್ತಿಯನ್ನು ಮದುವೆ ಮಾಡಿಕೊಂಡು ದೊಡ್ಡ ತಪ್ಪು ಮಾಡಿದ್ದೇನೆ' ಎಂಬ ಪಶ್ಚಾತ್ತಾಪದ ಮಾತುಗಳನ್ನಾಡಿದೆ.ಇದನ್ನೆಲ್ಲಾ ಕೇಳಿಸಿಕೊಂಡ ನಂತರ ,ನನ್ನ ತಾಯಿ' ನಿನ್ನ ಜೀವನದ ಬಗ್ಗೆ ನಿನಗೆ ಸಂಪೂರ್ಣ ಅಧಿಕಾರ ಇದೆ. ವಿಚ್ಛೇದನ ಪಡೆದುಕೊಳ್ಳುವುದಕ್ಕೆ ಮುಂಚೆ ನಿನ್ನ ಅಕೌಂಟ್ ನಲ್ಲಿರುವ ಎಲ್ಲಾ ಹಣವನ್ನು ಖರ್ಚುಮಾಡು. ಯಾಕೆಂದರೆ. ನಿನ್ನ ಪಾಸ್ ಬುಕ್ ನಲ್ಲಿ ನಿನ್ನ ಜೀವನದ ಹಳೆಯ ನೆನಪುಗಳು ಉಳಿದಿರಬಾರದಲ್ಲವೇ? ಎಂದು ಹೇಳಿದರು.
ಹಾಗೇ ಅಗಲಿ ಎಂದು ಬೆಳಿಗ್ಗೆ ನನ್ನ ಅಕೌಂಟ್ ಕ್ಲೋಸ್ ಮಾಡಲು ಬ್ಯಾಂಕಿಗೆ ತೆರಳಿದೆ. ಅಲ್ಲಿ ಬಹಳ ಉದ್ದನೆಯ ಕ್ಯೂ ಇತ್ತು. ಸಮಯ ಕಳೆಯಲು ನಮ್ಮ ಪಾಸ್ ಬುಕ್ ತೆರೆದು ನೋಡಿದೆ. ಒಂದು. ಎರಡು.ಮೂರು.ನಿಮಿಷಗಳು ಹೀಗೆ ಸಮಯ ಹೋಗುತ್ತಲೇ ಇದೆ ಆದರೂ ಪುಸ್ತಕವನ್ನು ನೋಡುತ್ತಲೇ ಇದ್ದೆ. ನನ್ನ ಜೀವನದಲ್ಲಿ ನಾವಿಬ್ಬರೂ ಸಂತೋಷದಿಂದ ಕಳೆದ ರಸ ನಿಮಿಷಗಳು ನನ್ನ ಕಣ್ಣುಗಳ ಮುಂದೆ ಕಾಣತೊಡಗಿದವು. ನನ್ನ ಕಣ್ಣುಗಳಲ್ಲಿ ಒಂದೇ ಸಮನೆ ಕಣ್ಣಿರು ಬರಲಾರಂಭಿಸಿತು. ಇನ್ನು ಹೆಚ್ಚು ಸಮಯ ಅಲ್ಲಿ ನಿಲ್ಲಲು ನನ್ನಿಂದ ಆಗಲಿಲ್ಲ. ಮನೆಗೆ ಹಿಂದಿರುಗಿ, ಮೌನವಾಗಿ ಪಾಸ್ ಬುಕ್ಕನ್ನು ಗಂಡನ ಕೈಯಲ್ಲಿಟ್ಟು. ಅಕೌಂಟ್ ಕ್ಲೋಸ್ ಮಾಡಲು ಹೇಳಿದೆ.
ನನ್ನ ಗಂಡ ಬ್ಯಾಂಕಿಗೆ ಹೋದವರು ,ಸ್ವಲ್ಪ ಸಮಯದ ನಂತರ ಮನೆಗೆ ಹಿಂದಿರುಗಿ ಬಂದು.ಪಾಸ್ ಬುಕ್ಕನ್ನು ನನ್ನ ಕೈಯಲ್ಲಿಟ್ಟರು.'ಕ್ಷಮಿಸು. ನನ್ನ ಬಿಟ್ಟು ಹೋಗಬೇಡ' ಎಂದರು.ಅಷ್ಟೇ. ಇನ್ನು ನನ್ನಿಂದ ತಡೆದುಕೊಳ್ಳಲಾಗಲಿಲ್ಲ. ನನ್ನ ಗಂಡನನ್ನು ಬಿಗಿದಪ್ಪಿ ಗಳಗಳನೆ ಅತ್ತುಬಿಟ್ಟೆ. ನಮ್ಮ ಮದುವೆಗೆ ಮುಂಚೆ ನನ್ನ ಅಮ್ಮ ಈ ಸೂತ್ರವನ್ನು ಯಾಕೆ ಹೇಳಿದರೆಂದು ಅರ್ಥವಾಯಿತು. ಭಾರತೀಯ ವಿವಾಹ ಬಂಧ ಎಷ್ಟು ಗಟ್ಟಿಯಾದದ್ದು ಎನ್ನುವುದನ್ನು ಅರಿತುಕೊಂಡೆ- ಸುರೇಖ ಮುಂಬೈ.

Post a Comment