Header Ads

test

ಚುನಾವಣೆಗೆ ಬಳಸುವ ಇಂಕ್ ಎಲ್ಲಿ ತಯಾರಿಸುತ್ತಾರೆ ಎಂದು ಗೊತ್ತಾದರೆ ಚಕಿತರಾಗುತ್ತೀರ. ತಯಾರಿಸುವವರನ್ನುಮೆಚ್ಚಿಕೊಂಡ ಉನ್ನತಾಧಿಕಾರಿ, ಅವರು ಯಾರೆಂದರೆ..?

ಚುನಾವಣೆ ಎಂಬುದು ಜಗತ್ತಿನ ರಾಜಕೀಯದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ಜನ. ಯಾರು ಪರಿಪಾಲಿಸಬೇಕು ಎಂಬುದನ್ನು ನಿರ್ಧರಿಸುವುದು ಪ್ರಜೆಗಳು. ಹಾಗಾಗಿ ಚುನಾವಣೆಗೆ ಅಷ್ಟು ಪ್ರಾಮುಖ್ಯತೆ ಇದೆ. ಚುನಾವಣೆಗೆ ಬಳಸುವ ಇಂಕ್‌ಗೂ ಸಹ ಅಷ್ಟೇ ಪ್ರಾಮುಖ್ಯತೆ ಇದೆ. ಚುನಾವಣೆಯಲ್ಲಿ ಮತದಾನ ಮಾಡಿದ ಕೂಡಲೆ ಇಂಕ್ ನಮ್ಮ ಕೈ ಬೆರಳಿಗೆ ಹಾಕುತ್ತಾರೆ. ಅದರ ಅರ್ಥ, ನಾವು ಮತ ಹಾಕಿದ್ದೇವೆ ಎಂಬುದನ್ನು ತೋರಿಸಲು. ಆ ಇಂಕ್ ಬೇಗ ಅಳಸಿಹೋಗಲ್ಲ. ಹಾಗಾಗಿ ಆ ಇಂಕ್ ಬಳಸುತ್ತಾರೆ. ಇಷ್ಟಕ್ಕೂ ಆ ಇಂಕ್ ಎಲ್ಲಿ ತಯಾರಾಗುತ್ತದೆ ಗೊತ್ತಾ?ಮೈಸೂರು ಪೇಂಟ್ಸ್ ಮತ್ತು ವಾರ್ನಿಶ್ ಲಿಮಿಟೆಡ್ ಕಂಪೆನಿ ಈ ಇಂಕನ್ನು ತಯಾರಿಸುತ್ತದೆ. ಇದನ್ನು ಕರ್ನಾಟಕ ಸರಕಾರ ನಡೆಸುತ್ತದೆ. ಗುಣಮಟ್ಟ ಕಡಿಮೆಯಾಗದಂತೆ ಕರ್ನಾಟಕ ಸರಕಾರ ನೋಡಿಕೊಳ್ಳುತ್ತದೆ. ಹಾಗಾಗಿ ವರ್ಷಗಳಿಂದಲೂ ಈ ಇಂಕ್‌ಗೆ ಬಹಳಷ್ಟು ಪ್ರಾಧಾನ್ಯತೆ ಇದೆ.

ಈ ಇಂಕನ್ನು ತಯಾರಿಸಿದ ಮೈಸೂರು ಕಂಪೆನಿಯನ್ನು ಮಧ್ಯಪ್ರದೇಶದ ಚುನಾವಣಾ ಆಯುಕ್ತ ಆರ್ ಪರಶುರಾಮ್ ಕೊಂಡಾಡಿದ್ದಾರೆ. ಈ ಇಂಕ್ ಬಹಳ ಚೆನ್ನಾಗಿ ಉಪಯೋಗಕ್ಕೆ ಬಂತು. ನಮ್ಮೆಲ್ಲರಿಗೂ ಈ ಇಂಕ್ ಮೇಲೆ ನಂಬಿಕೆ ಉಂಟಾಯಿತು. ಇದರ ಗುಣಮಟ್ಟ ತುಂಬಾ ಚೆನ್ನಾಗಿದೆ. ಮೈಸೂರು ಪೇಂಟ್ಸ್ ಕಂಪೆನಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ. ಇಲ್ಲಿನ ಗುಣಮಟ್ಟ ತುಂಬಾ ಚೆನ್ನಾಗಿದೆ. ಹಾಗಾಗಿಯೆ ಬೇರೆಯದನ್ನು ಬಳಸುತ್ತಿಲ್ಲ ಎಂದಿದ್ದಾರೆ.

ಇತ್ತೀಚೆಗೆ ತೆಲಂಗಾಣದಲ್ಲಿ ನಡೆದ ಚುನಾವಣೆಯಲ್ಲಿ ಸಹ ಮೈಸೂರು ಪೇಂಟ್ಸ್ ಕಂಪೆನಿ ತಯಾರಿಸಿದ ಇಂಕನ್ನೇ ಬಳಸಿದರು. ದೇಶದಾದ್ಯಂತ ಎಲ್ಲೇ ಚುನಾವಣೆ ನಡೆದರೂ, ಮೈಸೂರು ಕಂಪೆನಿ ಇಂಕ್ ಸರಬರಾಜು ಮಾಡುತ್ತದೆ. ಗುಣಮಟ್ಟಕ್ಕೆ ಪ್ರಾಮುಖ್ಯತೆ ನೀಡಿದರೆ ಎಂದಿಗೂ ನಂಬಿಕೆ ಸಿಗುತ್ತದೆ ಎಂಬುದನ್ನು ಮೈಸೂರಿನ ಈ ಕಂಪೆನಿ ಮೂಲಕ ರುಜುವಾಗಿದೆ.

1 comment:

  1. I think this is one of the most significant information for me.
    And i’m glad reading your article. But should remark on few general things, The web site style is wonderful, the articles is really excellent, Good job...

    ReplyDelete