Header Ads

test

ಟಿಫಿನ್ ತಿಂದ ಕೂಡಲೆ ಸ್ನಾನ ಮಾಡುತ್ತಿದ್ದೀರಾ..? ಇದು ಒಳ್ಳೆಯ ಅಭ್ಯಾಸವೇ..? ಆ ರೀತಿ ಮಾಡಿದರೆಏನಾಗುತ್ತದೆ...?

ದೇಹವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಯಾರೇ ಆಗಲಿ ಸ್ನಾನ ಮಾಡಲೇಬೇಕು. ಸ್ನಾನದಿಂದ ದೇಹ ಸ್ವಚ್ಛ ಆಗುವುದಷ್ಟೇ ಅಲ್ಲ, ಮನಸ್ಸಿಗೂ ಆಹ್ಲಾದವನ್ನು ನೀಡುತ್ತದೆ. ಸಾಕಷ್ಟು ಪ್ರಶಾಂತತೆಯನ್ನು ನೀಡುತ್ತದೆ. ಕೆಲವರು ದಿನಕ್ಕೆ ಒಮ್ಮೆ ಸ್ನಾನ ಮಾಡುತ್ತಾರೆ. ಕೆಲವರು ಎರಡು ಸಲ ಮಾಡುತ್ತಾರೆ. ಇನ್ನೂ ಕೆಲವರು ದಿನಗಟ್ಟಲೆ ಸ್ನಾನ ಮಾಡಲ್ಲ. ಈ ವಿಚಾರ ಪಕ್ಕಕ್ಕಿಟ್ಟರೆ ಇಷ್ಟಕ್ಕೂ ಸ್ನಾನವನ್ನು ಯಾವಾಗ ಮಾಡಿದರೂ ಏನಾಗಲ್ಲ, ಆದರೆ ಊಟ ಮಾಡಿದ ಬಳಿಕ ಮಾತ್ರ ಮಾಡಬಾರದು. ಹೌದು ಇದು ಕರೆಕ್ಟ್. ನಮ್ಮ ಹಿರಿಯರಷ್ಟೇ ಅಲ್ಲ, ವೈದ್ಯರೂ ಸಹ ಈ ವಿಷಯವನ್ನು ಹೇಳುತ್ತಿದ್ದಾರೆ. ಇಷ್ಟಕ್ಕೂ... ಊಟದ ಬಳಿಕ ಸ್ನಾನ ಯಾಕೆ ಮಾಡಬಾರದು..? ಮಾಡಿದರೆ ಏನಾಗುತ್ತದೆ..? ಎಂಬ ವಿಷಯವನ್ನು ಈಗ ತಿಳಿದುಕೊಳ್ಳೋಣ.


ಊಟ ಮಾಡಿದ ಬಳಿಕ ನಮ್ಮ ದೇಹದಲ್ಲಿ ರಕ್ತ ಹೆಚ್ಚು ಜೀರ್ಣಕೋಶಕ್ಕೆ ಹರಿಯುತ್ತದೆ. ಯಾಕೆಂದರೆ ತಿಂದ ಆಹಾರ ಜೀರ್ಣ ಮಾಡಲು ಸಹ ಶಕ್ತಿ ಬೇಕು. ಆದಕಾರಣ ಆ ಶಕ್ತಿಯನ್ನು ನೀಡಲು ಜೀರ್ಣಕೋಶಕ್ಕೆ ಹೆಚ್ಚು ರಕ್ತ ಸರಬರಾಜಾಗುತ್ತದೆ. ತಿಂದ ಕೂಡಲೆ ಸ್ನಾನ ಮಾಡಿದರೆ ಆಗ ನಮ್ಮ ದೇಹದ ಉಷ್ಣೋಗ್ರತೆಯಲ್ಲಿ ಬದಲಾವಣೆಯಾಗುತ್ತದೆ. ಇದನ್ನು ಮಿದುಳು ಕೂಡಲೆ ಗುರುತಿಸಿ ದೇಹದ ಉಷ್ಣತೆಯನ್ನು ನಿಯಂತ್ರಿಸುವ ಕೆಲಸದಲ್ಲಿ ತೊಡಗುತ್ತದೆ. ಆಗ ರಕ್ತ ನಮ್ಮ ಜೀರ್ಣಕೋಶದಿಂದ ಚರ್ಮದ ಕಡೆಗೆ ಪ್ರವಹಿಸುತ್ತದೆ. ಇದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.

ಕೆಲವರು ಮೊದಲು ಬೆಲ್ಟನ್ನು ಸಡಿಲ ಮಾಡಿಕೊಂಡು, ತಿಂದ ಬಳಿಕ ಮತ್ತೆ ಟೈಟ್ ಆಗಿ ಬಿಗಿದುಕೊಳ್ಳುತ್ತಾರೆ. ಆ ರೀತಿ ಮಾಡುವುದು ಅಷ್ಟು ಒಳ್ಳೆಯದಲ್ಲ. ಅದರಿಂದ ಕರುಳಿಗೆ ಸಂಬಂಧಿಸಿದ ಖಾಯಿಲೆಗಳು ಬರುತ್ತವೆ.

ಒಂದು ವೇಳೆ ನಾವು ತಿಂದ ಬಳಿಕ ತಣ್ಣೀರ ಸ್ನಾನ ಮಾಡಿದರೆ ಆಗ ರಕ್ತ ನಾಳಗಳು ಹಿಗ್ಗುತ್ತವೆ. ಇದರಿಂದ ಭಾರಿ ಪ್ರಮಾಣದಲ್ಲಿ ರಕ್ತ ಪ್ರವಹಿಸುತ್ತದೆ. ಆ ಮೂಲಕ ದೇಹದ ಉಷ್ಣೋಗ್ರತೆ ಸಾಮಾನ್ಯ ಸ್ಥಿತಿಗೆ ತಲುಪುತ್ತದೆ. ಅದೇ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಆಗ ಚರ್ಮದಲ್ಲಿ ಇರುವ ರಕ್ತನಾಳಗಳು ಹಿಗ್ಗಿ ಅವು ಹೆಚ್ಚು ಉಷ್ಣತೆಯನ್ನು ಚರ್ಮದ ಮೂಲಕ ಹೊರಗೆ ಹಾಕುತ್ತವೆ. ಇದರಿಂದ ದೇಹ ಸಾಮಾನ್ಯ ಉಷ್ಣತೆಗೆ ತಲುಪುತ್ತದೆ. ಈ ಪ್ರಕ್ರಿಯೆ ಮುಗಿಯುವವರೆಗೂ ಜೀರ್ಣಕೋಶಕ್ಕೆ ರಕ್ತ ಸೂಕ್ತವಾಗಿ ಸಿಗಲ್ಲ. ಇದರಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಗ್ಯಾಸ್, ಅಸಿಡಿಯಂತಹ ಸಮಸ್ಯೆಗಳು ತೆಲೆಯೆತ್ತುತ್ತವೆ. ಹಾಗಾಗಿಯೇ ಸಮಸ್ಯೆಗಳು ಬರಬಾರದು ಎಂದರೆ ತಿಂದ ಕೂಡಲೆ ಸ್ನಾನ ಮಾಡಬಾರದು ಎನ್ನುತ್ತಾರೆ.

ಹಾಗಿದ್ದರೆ ಊಟ ಮಾಡಿದ ಬಳಿಕ ಎಷ್ಟು ಸಮಯಕ್ಕೆ ಸ್ನಾನ ಮಾಡಬಹುದು..? ಎಂದರೆ ಅದಕ್ಕೆ ಕನಿಷ್ಠ 45 ರಿಂದ 60 ನಿಮಿಷ ಕಾದು ಸ್ನಾನ ಮಾಡುವುದು ಉತ್ತಮ. ಅಷ್ಟೊತ್ತಿಗೆ ತಿಂದ ಆಹಾರ ಸರಿಸುಮಾರಾಗಿ ಜೀರ್ಣವಾಗಿರುತ್ತದೆ. ತಿಂದ ಒಂದು ಗಂಟೆ ಬಳಿಕ ಯಾವುದೇ ಅಭ್ಯಂತರ ಇಲ್ಲದಂತೆ ಸ್ನಾನ ಮಾಡಬಹುದು. ಯಾವುದೇ ಸಮಸ್ಯೆ ಆಗಲ್ಲ...!

No comments