Header Ads

test

ಕಾಂಡೊಮ್ ಉಪಯೋಗಿಸದೆ.ಗರ್ಭಧಾರಣೆ ಆಗಬಾರದೆಂದರೆ.ಈ ದಿನಾಂಕಗಳನ್ನು ನೆನಪಿಟ್ಟುಕೊಂಡರೆ ಸಾಕು.!

ನೂತನ ದಂಪತಿಗಳು.ಈಗಲೇ ಮಕ್ಕಳಾಗುವುದು ಬೇಡ. ಆದರೆ ತಮ್ಮ ವಾಂಛೆಗಳನ್ನು ಅದುಮಿಡಲಾಗದು. ಇಂತಹ ಸಮಯದಲ್ಲಿ ಅವರಿಗೆ ಕಾಣಿಸುವ ಏಕೈಕ ಮಾರ್ಗವೆಂದರೆ 'ಕಾಂಡೊಮ್'. ಗರ್ಭಧರಿಸದೆ, ಮಿಲನ ಸುಖವನ್ನು ಅನುಭವಿಸಲು ಸಹಕಾರಿ ಈ ಕಾಂಡೊಮ್ ಗಳು. ಆದರೆ,ಕೇವಲ ಕಾಂಡೊಮ್ ಗಳಲ್ಲದೆ ಹಲವು ಇತರೆ ವಿಧಾನಗಳಿಂದಲೂ ಸಹ ಗರ್ಭಧಾರಣೆಯನ್ನು ತಡೆಯಬಹುದು. ಅವು ಯಾವುವೆಂದು ತಿಳಿದುಕೊಳ್ಳೋಣ ( ಇದು ಕೇವಲ ದಂಪತಿಗಳಿಗೆ ಮಾತ್ರ.)


ರತಿಕ್ರಿಯೆಯಿಂದ ದೂರವಿರಬೇಕಾದ ಸಮಯ :ಸಾಮಾನ್ಯವಾಗಿ ಗರ್ಭಧಾರಣೆಯೆನ್ನುವುದು ಸ್ತ್ರೀಯ ಋತು ಚಕ್ರದ ಮೇಲೆ ಅವಲಂಬಿಸಿರುತ್ತದೆ. ಅಂದರೆ 1 ನೆ ತಾರೀಕು ಸ್ರೀ ಮುಟ್ಟಾಗಿದ್ದರೆ.ಅವಳಲ್ಲಿ 12 ರಿಂದ 16 ದಿನಾಂಕದ ಒಳಗೆ ಅಂಡಾಣು ಬಿಡುಗಡೆಯಾಗುತ್ತದೆ. ಈ ಸಮಯದಲ್ಲಿ ಮಿಲನ ಕ್ರಿಯೆ ನಡೆದಲ್ಲಿ ಗರ್ಭಧರಿಸುವ ಅವಕಾಶ ಹೆಚ್ಚಾಗಿರುತ್ತದೆ. ಆದುದರಿಂದ ದಂಪತಿಗಳು ಈ ಸಮಯದಲ್ಲಿ ದೂರವಿರಬೇಕು. ಇದಲ್ಲದೆ.ಸ್ತ್ರೀಯರ ಅಂಡಾಣುಗಳು ಬಿಡುಗಡೆಯಾದ 2-3 ದಿನಗಳು ಸಜೀವವಾಗಿರುತ್ತವೆ. ಪುರುಷರ ಅಂಡಾಣುಗಳು 1 ದಿನ ಮಾತ್ರ ಸಜೀವವಾಗಿರುತ್ತವೆ. ಆದುದರಿಂದ.20 ನೇ ತಾರೀಕಿನ ವರೆಗೆ ಮಿಲನ ಕ್ರಿಯೆ ನಡೆಸದಿದ್ದರೆ ಗರ್ಭಧಾರಣೆಯಾಗುವುದಿಲ್ಲ...ಅಂದರೆ,1 ನೇ ತಾರೀಕು ಋತು ಕ್ರಿಯೆ ಪ್ರಾರಂಭವಾದರೆ, 12 ರಿಂದ 20 ನೇ ತಾರೀಕಿನ ವರೆಗೂ ಮಿಲನ ವಾಗದಿದ್ದರೆ ಗರ್ಭಧರಿಸುವ ಅವಕಾಶ ಬಹಳ ಕಡಿಮೆ.

ವೀರ್ಯಸ್ಖಲನ ವಾಗುವುದಕ್ಕೆ ಮೊದಲೇ ಲಿಂಗವನ್ನು ಯೋನಿಯಿಂದ ಹೊರೆ ತೆಗೆಯುವುದು.( ಇದು ಕಷ್ಟಸಾಧ್ಯ).ಮಾತ್ರೆಗಳನ್ನು ಉಪಯೋಗಿಸುವುದು : ( ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ).ಕಾಪರ್ 'T':ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಇದರ ಉಪಯೋಗ ಹೆಚ್ಚುತ್ತಿದೆ. ತಜ್ಞ ವೈದ್ಯರು ಕಾಪರ್ 'T 'ಯನ್ನು ಸ್ತ್ರೀಯ ಗರ್ಭಾಶಯದೊಳಗೆ ಸೇರಿಸುತ್ತಾರೆ. ಇದು ಒಳಗೆ ಇದ್ದಷ್ಟು ಕಾಲ ಗರ್ಭಧರಿಸುವ ಅವಕಾಶವಿಲ್ಲ. ಮಕ್ಕಳು ಬೇಕೆಂದಾಗ,ಕಾಪರ್ 'T ' ಯನ್ನು ತೆಗೆದುಬಿಡುತ್ತಾರೆ.ಸಂತಾನ ನಿರೋಧಕ ಶಸ್ತ್ರ ಚಿಕಿತ್ಸೆ :ಇನ್ನು ಮುಂದೆ ಮಕ್ಕಳು ಬೇಡವೆನ್ನುವ ದಂಪತಿಗಳಿಗೆ ಇದೊಂದು ಉತ್ತಮ ಪರಿಹಾರ.

No comments